ವಾಟ್ಸ್ಆ್ಯಪ್ ಪ್ರೈವೆಸಿ ಪಾಲಿಸಿಯನ್ನು ನವೀಕರಿಸಲು ಮುಂದಾಗಿದ್ದು, ಬಳಕೆದಾರರಿಗೆ ನೋಟಿಫಿಕೇಶನ್ ಕಳುಹಿಸಿದೆ. ಫೆ 8 ರಿಂದ ವಾಟ್ಸ್ಆ್ಯಪ್ ಸೇವಾ ನಿಯಮ ಮತ್ತು ಗೌಪ್ಯತೆ ನೀತಿಯನ್ನು ನವೀಕರಿಸುವುದಾಗಿ ತಿಳಿಸಿದ್ದು, ಇಲ್ಲದಿದ್ದಲ್ಲಿ ಖಾತೆ ಡಿಲೀಟ್ ಆಗಲಿದೆ ಎಂದು ಹೇಳಿತ್ತು.
ಈ ವಿಚಾರದಿಂದ ಬೇಸತ್ತು ಅನೇಕರು ವಾಟ್ಸ್ಆ್ಯಪ್(WhatsApp) ತೊರೆದು ಬೇರೆ ಆ್ಯಪ್ಗಳ ಮೊರೆಹೋಗಿದ್ದಾರೆ. ಟೆಲಿಗ್ರಾಂ, ಸಿಗ್ನಲ್, ಸ್ನಾಪ್ಚಾಟ್ ಮುಂತಾದ ಆ್ಯಪ್ಗಳತ್ತ ವಲಸೆ ಹೋಗುತ್ತಿದ್ದಾರೆ. ಹೀಗಾಗಿ ವಾಟ್ಸ್ಆ್ಯಪ್ ತನ್ನ ಬಳಕೆದಾರರನ್ನು ಕಳೆದುಕೊಂಡು ಬಂದಿದೆ.
ಚೀನಾಗೆ 'ಬಿಗ್ ಶಾಕ್' ನೀಡಿದ ಅಮೆರಿಕಾ: ಬ್ಲಾಕ್ ಲಿಸ್ಟ್ ಗೆ ಸೇರಿದ ‘Xiaomi ಸ್ಮಾರ್ಟ್ಫೋನ್’..!
ಈ ವಿಚಾರವಾಗಿ ವಾಟ್ಸ್ಆ್ಯಪ್ ಸ್ಪಷ್ಟತೆ ನೀಡಿದ್ದು, ಜಾಹೀರಾತು ಉದ್ದೇಶಗಳಿಗಾಗಿ ಬಳಕೆದಾರರ ಸಂಪರ್ಕ ಸಂಖ್ಯೆಗಳನ್ನು ಫೇಸ್ಬುಕ್ ನೊಂದಿಗೆ ಹಂಚಿಕೊಳ್ಳುವುದಿಲ್ಲ ಎಂದಿದೆ. ವಾಟ್ಸ್ಆ್ಯಪ್ ಬಳಕೆದಾರರ ಸಂದೇಶಗಳನ್ನು ಓದಲು ಅಥವಾ ಬಳಕೆದಾರರ ನಡುವಿನ ಕರೆಗಳನ್ನು ಆಲಿಸುವುದಿಲ್ಲ ಎಂದು ವಾಟ್ಸ್ಆ್ಯಪ್ ಹೇಳಿದೆ. ಆದರೆ ವ್ಯವಹಾರ ಖಾತೆಗಳಿಗೆ ಕಳುಹಿಸಿದ ಸಂದೇಶಗಳಿಗೆ ಮಾತ್ರ ಪರಿಣಾಮ ಬೀರಳಿದೆ ಎಂದು ವಾಟ್ಸ್ಆ್ಯಪ್ ತಿಳಿಸಿದೆ!.
ಗಗನ ಯಾತ್ರೆಗೆ ಹೊರಟ ‘ಸಮೋಸಾ’ ..! ಹೇಗಿತ್ತುಅದರ ಬಾಹ್ಯಾಕಾಶ ಅಭಿಯಾನ.?
ವಾಟ್ಸ್ಆ್ಯಪ್ - ಫೇಸ್ಬುಕ್ ಬಳಕೆದಾರರ ಖಾಸಗಿ ಮಾಹಿತಿಯನ್ನು ಆಲಿಸಲು ಸಾಧ್ಯವಿಲ್ಲ: ವಾಟ್ಸ್ಆ್ಯಪ್ ಬಳಕೆದಾರರಿಗೆ ವೈಯ್ಯಕ್ತಿಕ ಸಂದೇಶಗಳಿಗಾಗಿ ಎಂಡ್-ಟು-ಎಂಡ್ ಎನ್ಕ್ರಿಪ್ಷನ್ ನೀಡುತ್ತದೆ ಎಂದು ತಿಳಿಸಿದೆ. ಆದರೆ ಫೇಸ್ಬುಕ್ ನಿಮ್ಮ ಸಂದೇಶಗಳನ್ನು ಓದಲು ಅಥವಾ ನಿಮ್ಮ ಸ್ನೇಹಿತರ ಮತ್ತು ಕುಟುಂಬದವ ಜೊತೆಗಿನ ಕರೆಗಳನ್ನು ಆಲಿಸಲು ಸಾಧ್ಯವಿಲ್ಲ ಎಂದಿದೆ.
Indonesia Earthquake 2021: ಇಂಡೊನೆಷ್ಯಾದಲ್ಲಿ ಪ್ರಬಲ ಭೂಕಂಪ, 7 ಸಾವು 100 ಕ್ಕೂ ಅಧಿಕ ಜನರಿಗೆ ಗಾಯ
ವಾಟ್ಸ್ಆ್ಯಪ್ ಬಳಕೆದಾರ ಸಂಪರ್ಕ(Contact) ಮಾಹಿತಿಯನ್ನು ಹಂಚಿಕೊಳ್ಳುವುದಿಲ್ಲ: ಬಳಕೆದಾರರ ಸಂಪರ್ಕಗಳನ್ನು ಮತ್ತು ಅದನ್ನು ಒಳಗೊಂಡ ಮಾಹಿತಿಯನ್ನು ಫೇಸ್ಬುಕ್ ಮತ್ತು ಇತರ ಅಪ್ಲಿಕೇಶನ್ ಜೊತೆಗೆ ಹಂಚಿಕೊಳ್ಳುವುದಿಲ್ಲ ಎಂದು ವಾಟ್ಸ್ಆ್ಯಪ್ ಸ್ಪಷ್ಟತೆ ನೀಡಿದೆ.
Donald Trump Impeachment: ವಿಶ್ವದ ಪ್ರಬಲ ರಾಷ್ಟ್ರಾಧ್ಯಕ್ಷಗೆ ವಾಗ್ದಂಡನೆ ಕುಣಿಕೆ
ವಾಟ್ಸ್ಆ್ಯಪ್ ಫೇಸ್ಬುಕ್ನೊಂದಿಗೆ ಏನನ್ನು ಹಂಚಿಕೊಳ್ಳುತ್ತದೆ? ವಾಟ್ಸ್ಆ್ಯಪ್ ತಿಳಿಸಿರುವ ಪ್ರಕಾರ, ಅಪ್ಲಿಕೇಶನ್ನಲ್ಲಿ ವ್ಯವಹಾರಗಳಿಗೆ ಸಂಬಂಧಿಸಿದಂತೆ ಹೇಗೆ ಸಂವಹನ ನಡೆಸುತ್ತೀರಿ ಎಂಬ ಕುರಿತಾಗಿ ಡೇಟಾ ಹಂಚಿಕೊಳ್ಳುತ್ತದೆ. ವ್ಯವಹಾರ ನಡೆಸುವ ಸಲುವಾಗಿ ಫೇಸ್ಬುಕ್ ಕೆಲವು ಸೇವೆಗಳನ್ನು ಶೀಘ್ರದಲ್ಲೇ ತರಲಿದೆ. ಇದರಿಂದ ಬಳಕೆದಾರರಿಗೆ ಪ್ರಯೋಜನವಾಗಲಿದೆ ಎಂದಿದೆ.
ಸರ್ವಾಧಿಕಾರಿ Kim Jong Un ಅವರಿಂದ ಮತ್ತೆ ಎಚ್ಚರಿಕೆಯ ಘಂಟೆ
ವಾಟ್ಸ್ಆ್ಯಪ್ ಬ್ಯುಸಿನೆಸ್ ಖಾತೆಗಳು ಫೇಸ್ಬುಕ್ ಪ್ಲಾಟ್ಫಾರ್ಮ್ನಲ್ಲಿ ಪ್ರದರ್ಶವವಾಗಲಿದೆ. ಅದರ ಮೂಲಕ ಬೇಕಾದ ವಸ್ತುಗಳನ್ನು ಗ್ರಾಹಕರು ಖರೀದಿಸಲು ಅನುವು ಮಾಡಿಕೊಡಲಿದೆ. ಹಾಗಾಗಿ ಶಾಪಿಂಗ್ ಚಟುವಟಿಕೆಯ ಡೇಟಾವನ್ನು ಫೇಸ್ಬುಕ್ ಹಂಚಿಕೊಳ್ಳಲಿದೆ. ಜೊತೆಗೆ ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಜಾಹೀರಾತು ಮೂಡಲು ಅನುವು ಮಾಡಿಕೊಡುತ್ತದೆ.
ಈ ದೇಶದಲ್ಲಿ ಈಗ ಗೊರಿಲ್ಲಾಗಳಿಗೂ ಬಂತೂ ಕೊರೊನಾ..!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.