VIDEO: ಸ್ಕೂಟಿಯಲ್ಲಿ ತೆರಳುತ್ತಿದ್ದ ಮಹಿಳೆ ಮೇಲೆ ಹರಿದ ಟ್ರಕ್, ಆಮೇಲ್ ಏನಾಯ್ತು?

ಕ್ಯಾಮರಾದಲ್ಲಿ ಈ ಇಡೀ ಘಟನೆಯನ್ನು ಸೆರೆಹಿಡಿಯಲಾಗಿದೆ. ಈ ವೀಡಿಯೊವನ್ನು ನೀವು ಒಮ್ಮೆ ನೋಡಿದರೆ , ನೀವು ಖಂಡಿತವಾಗಿ ಅದನ್ನು ಮತ್ತೆ ನೋಡುತ್ತೀರಿ.

Last Updated : Sep 12, 2018, 09:38 AM IST
VIDEO: ಸ್ಕೂಟಿಯಲ್ಲಿ ತೆರಳುತ್ತಿದ್ದ ಮಹಿಳೆ ಮೇಲೆ ಹರಿದ ಟ್ರಕ್, ಆಮೇಲ್ ಏನಾಯ್ತು? title=

ದೇವರ ದಯೆ ಒಂದಿದ್ದರೆ ಯಾರೂ ಏನೂ ಮಾಡಲು ಸಾಧ್ಯವಿಲ್ಲ ಅಂತ ಹೇಳ್ತಾರೆ, ಅದಕ್ಕೆ ನಿದರ್ಶನವೆಂಬಂತೆ ಒಂದು ದೃಶ್ಯ ಚೀನಾದಿಂದ ಹೊರಬಂದಿದ್ದು, ಈ ಮಹಿಳೆ ವಿಷಯದಲ್ಲಿ ಅದು ಸತ್ಯವಾಗಿದೆ. ಸ್ಕೂಟಿಯಲ್ಲಿ ಚಲಿಸುತ್ತಿದ್ದ ಮಹಿಳೆ ಮೇಲೆ ಟ್ರಕ್ ಹರಿದರೂ ಆಕೆ ಬದುಕುಳಿದ ಅದ್ಭುತ ಘಟನೆ ಇದು. ಕ್ಯಾಮರಾದಲ್ಲಿ ಈ ಇಡೀ ಘಟನೆಯನ್ನು ಸೆರೆಹಿಡಿಯಲಾಗಿದೆ. ಈ ವೀಡಿಯೊವನ್ನು ನೀವು ಒಮ್ಮೆ ನೋಡಿದರೆ , ನೀವು ಖಂಡಿತವಾಗಿ ಅದನ್ನು ಮತ್ತೆ ನೋಡುತ್ತೀರಿ.

ಪೀಪಲ್ಸ್ ಡೈಲಿ ಪೋಸ್ಟ್ ಮಾಡಿದ ವೀಡಿಯೊ:
ಪೀಪಲ್ಸ್ ಡೈಲಿ ಚೀನಾ ಟ್ವಿಟ್ಟರ್ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಲಾಗಿದೆ. ದಕ್ಷಿಣ ಚೀನಾದ  ಗುವಾಂಗ್ಡಾಂಗ್ ಎಂಬ ಪ್ರದೇಶದಲ್ಲಿ ನಡೆದಿರುವ ಘಟನೆ ಈ ವಿಡಿಯೋದಲ್ಲಿ ಸೆರೆಯಾಗಿದೆ. ಓರ್ವ ಮಹಿಳೆ ದ್ವಿಚಕ್ರ ವಾಹನ(ಸ್ಕೂಟಿ)ದಲ್ಲಿ ತೆರಳುತ್ತಿರುವಾಗ ಒಂದು ತಿರುವಿ(ಕ್ರಾಸ್)ನಲ್ಲಿ ಹಿಂಬದಿಯಿಂದ ಬಂದ ಟ್ರಕ್ ದ್ವಿಚಕ್ರವಾಹನದ ಮೇಲೆ ಹರಿಯುತ್ತದೆ. 

ಡಿಸೆಂಬರ್ ನಲ್ಲಿಯೂ ಇಂತಹದ್ದೇ ಘಟನೆ ಸಂಭವಿಸಿತ್ತು:
ಈ ಅಪಘಾತದಲ್ಲಿ ಸ್ಕೂಟಿ ಟ್ರಕ್ ಅಡಿಯಲ್ಲಿ ಸಿಲುಕುತ್ತದೆ. ಕೆಲವೇ ಸೆಕೆಂಡ್ ಗಳ ನಂತರ ಟ್ರಕ್ ನಿಲ್ಲುತ್ತದೆ. ಆಶ್ಚರ್ಯಕರವಾಗಿ, ಸ್ಕೂಟಿಯಲ್ಲಿ ಸಾಗುತ್ತಿದ್ದ ಮಹಿಳೆ ಟ್ರಕ್ಕಿನ ಹಿಂದಿನ ಟೈರ್ನಿಂದ ಸುರಕ್ಷಿತವಾಗಿ ಹೊರಬರುವ ದೃಶ್ಯ ಕಂಡು ಬಂದಿದೆ. 

ಕಳೆದ ಡಿಸೆಂಬರ್ ನಲ್ಲಿಯೂ ಇಂತಹ ಒಂದು ರಸ್ತೆ ಅಪಘಾತ ಚೀನಾದ ಲೈನುಗೋಂಗ್ ನಗರದಲ್ಲಿ ನಡೆಯಿತು. ಈ ಅಪಘಾತದಲ್ಲಿ, ಎರಡು ಕಾರುಗಳು ರಸ್ತೆ ದಾಟುತ್ತಿದ್ದ ಮಹಿಳೆಗೆ ಡಿಕ್ಕಿ ಹೊಡೆದವು. ಆದರೆ ಆ ಘಟನೆಯಲ್ಲಿ ಮಹಿಳೆಯ ಯಾವ ರೀತಿಯ ಗಂಭೀರ ಗಾಯಗಳೂ ಆಗಲಿಲ್ಲ, ಆಕೆ ಸುರಕ್ಷಿತವಾಗಿದ್ದಾಳೆ ಎಂಬುದು ಗಮನಿಸಬೇಕಾದ ಸಂಗತಿ.

ಈ ವೀಡಿಯೊ ಬಳಕೆದಾರರು ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದಾರೆ. ಈ ಅಪಘಾತದಲ್ಲಿ ಮಹಿಳೆಯ ರಕ್ಷಣೆಗಾಗಿ ಕೆಲವು ಬಳಕೆದಾರರು ದೇವರಿಗೆ ಕೃತಜ್ಞತೆ ಸಲ್ಲಿಸುತ್ತಿದ್ದಾರೆ. ಕೆಲವರು OMG ಎಂದು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ. ಕೆಲವರು ಆಕೆಯನ್ನು ಅದೃಷ್ಟವಂತೆ ಎಂದು ಕರೆಯುತ್ತಿದ್ದಾರೆ.

Trending News