Viral Video: ಹಾವು ಮರಿಗೆ ಜನ್ಮ ನೀಡುವುದನ್ನು ಎಂದಾದರೂ ನೋಡಿದ್ದೀರಾ? ಇಲ್ಲಿದೆ ಅಪರೂಪದ ವೈರಲ್ ವಿಡಿಯೋ

Viral Video: ಪ್ರಕೃತಿಯಲ್ಲಿ ನಿತ್ಯ ಒಂದಲ್ಲಾ ಒಂದು ರೀತಿಯ ಹೊಸ ಸಂಗತಿಯನ್ನು ಕಾಣಬಹುದು. ಅದರಲ್ಲಿ ಕೆಲವು ನಮ್ಮನ್ನು ಅಚ್ಚರಿಗೊಳಿಸುವಂತಿರುತ್ತವೆ. ಅಂತಹದ್ದೇ ಅಚ್ಚರಿಗೊಳಿಸುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. 

Written by - Yashaswini V | Last Updated : Dec 30, 2021, 11:20 AM IST
  • ಹಾವು ಮರಿಗೆ ಜನ್ಮ ನೀಡುವ ಆಘಾತಕಾರಿ ವಿಡಿಯೋ
  • ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ ಈ ವಿಡಿಯೋ
  • ಹೆಣ್ಣು ಹಾವಿನ ಹೊಟ್ಟೆಯಿಂದ ತಾನಾಗಿಯೇ ಹೊರಬರುವ ಹಾವಿನ ಮರಿ
Viral Video: ಹಾವು ಮರಿಗೆ ಜನ್ಮ ನೀಡುವುದನ್ನು ಎಂದಾದರೂ ನೋಡಿದ್ದೀರಾ? ಇಲ್ಲಿದೆ ಅಪರೂಪದ ವೈರಲ್ ವಿಡಿಯೋ title=
Snake Baby Birth Video

Viral Video: ಸಾಮಾನ್ಯವಾಗಿ ಬಹುತೇಕ ಹಾವುಗಳು ಮೊಟ್ಟೆ ಇಡುತ್ತವೆ ಮತ್ತು ಸ್ವಲ್ಪ ಸಮಯದ ನಂತರ ಆ ಮೊಟ್ಟೆಗಳಿಂದ ಹಾವಿನ ಮರಿಗಳು ಹೊರಬರುತ್ತವೆ, ಆದರೆ ಪ್ರಕೃತಿಯಲ್ಲಿ ಕೆಲವು ಆಶ್ಚರ್ಯಕರ ಸಂಗತಿಗಳು ಆಗಾಗ್ಗೆ ಕಂಡು ಬರುತ್ತವೆ. ಭಾರೀ ಗಾತ್ರದ ಹಾವೊಂದು ಮಗುವಿಗೆ ಜನ್ಮ ನೀಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಹೆಣ್ಣು ಹಾವು ಮರಿಗೆ ಜನ್ಮ ನೀಡುತ್ತಿರುವ ವಿಡಿಯೋ ಟ್ವಿಟರ್‌ನಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ಒಂದು ನಿಮಿಷದ ಈ ಅಪರೂಪದ ವೀಡಿಯೋ ಎಲ್ಲರನ್ನೂ ಅಚ್ಚರಿಗೊಳಿಸುತ್ತಿದ್ದು, ಜನರು ಅದನ್ನು ಹೆಚ್ಚಾಗಿ ರೀಟ್ವೀಟ್ ಮಾಡುತ್ತಿದ್ದಾರೆ. 

ಹೆಣ್ಣು ಹಾವಿನ ಹೊಟ್ಟೆಯಿಂದ ತಾನಾಗಿಯೇ ಹೊರಬರುವ ಹಾವಿನ ಮರಿ:
ಹಸಿರು ಬಣ್ಣದ ಹಾವು ಕಂದು ಬಣ್ಣದ ಮತ್ತೊಂದು ವಿಕಸನಗೊಂಡ ಮರಿಗೆ ಜನ್ಮ ನೀಡುತ್ತಿರುವ ವಿಡಿಯೋವೊಂದು (Snake Baby Birth Video) ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗುತ್ತಿದೆ. 

ಇದನ್ನೂ ಓದಿ- Crocodile Fish Viral Video: ಬೇಟೆಯಾಡಿದ ಹಸಿದ ಮೊಸಳೆಗೆ 860 ವೋಲ್ಟ್‌ಗಳ ಶಾಕ್ ನೀಡಿದ ಮೀನು! ವಾಚ್ ವೈರಲ್ ವಿಡಿಯೋ

ತಾನಾಗಿಯೇ ಹೊರಬರುತ್ತಿರುವ ನವಜಾತ ಹಾವು :
ಮರದ ಕೊಂಬೆಯ ಮೇಲೆ ಹಸಿರು ಬಣ್ಣದ ಹೆಣ್ಣು ಹಾವು ಆರಾಮವಾಗಿ ಕುಳಿತಿರುವುದು ವಿಡಿಯೋದಲ್ಲಿ (Snake Viral Video) ಕಂಡು ಬಂದಿದೆ. ಅದರ ನಂತರ ಹಾವಿನ ಹೊಟ್ಟೆಯಿಂದ ಮರಿ ಜನಿಸುತ್ತಿದೆ. ವಿಶೇಷವೆಂದರೆ ಈ ಹಾವಿನ ಮರಿ ಹಾವಿನ ಹೊಟ್ಟೆಯಿಂದ ತಾನಾಗಿಯೇ ಹೊರಬಂದು ಕೊಂಬೆಯ ಮೇಲೆ ಹೋಗುವುದನ್ನು ಈ ವೈರಲ್ ವಿಡಿಯೋದಲ್ಲಿ ಕಾಣಬಹುದು.

ಇದನ್ನೂ ಓದಿ- Funny Viral Video: ಪತಿರಾಯನ ಚೇಷ್ಟೆ! ಅತ್ತೆ ತಲೆ ಮೇಲೆ ಮೊಟ್ಟೆ ಹೊಡೆದ ಸೊಸೆ!

ದಕ್ಷಿಣ ಅಮೆರಿಕಾದ ಎಮರಾಲ್ಡ್ ಟ್ರೀ ಬೋವಾ ಹಾವು:
ಈ ವೀಡಿಯೊದ ಬಗ್ಗೆ ಸೈನ್ಸ್ ಗರ್ಲ್ ಎಂಬ ಬಳಕೆದಾರರು ಇದು ಎಮರಾಲ್ಡ್ ಟ್ರೀ ಬೋವಾ ಹಾವು ಎಂದು ಹೇಳಿದ್ದಾರೆ, ಇದು ದಕ್ಷಿಣ ಅಮೆರಿಕಾದ ಭಾರೀ ಮಳೆಯ ಪ್ರದೇಶಗಳಲ್ಲಿ ಎತ್ತರದ ಮರಗಳಲ್ಲಿ ಕಂಡುಬರುತ್ತದೆ. ವಾಸ್ತವವಾಗಿ, ಈ ಮರಿಯು ಹಾವಿನ ಭ್ರೂಣದಲ್ಲಿ ಬೆಳವಣಿಗೆಯಾಗುತ್ತದೆ ಎಂದು ಹೇಳಲಾಗುತ್ತದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News