Viral Video: ಮಹಿಳೆಯ ಕಿವಿ ಹೊಕ್ಕ ಹಾವು, ಹೊರಬರುವ ಮಾತೆ ಎತ್ತುತ್ತಿಲ್ಲ...! ವಿಡಿಯೋ ನೋಡಿ

Snake In Woman Ear: ವೈದ್ಯರು ಈ ಹಾವನ್ನು ಮಹಿಳೆಯ ಕಿವಿಯಿಂದ ಹೊರತೆಗೆಯಲು ಪ್ರಯತ್ನಿಸುತ್ತಿರುವುದನ್ನು ನೀವು ವಿಡಿಯೋದಲ್ಲಿ ಗಮನಿಸಬಹುದು. ಇದಕ್ಕಾಗಿ ವೈದ್ಯರು ಹಲವು ರೀತಿಯ ತಂತ್ರಗಳನ್ನು ಅನುಸರಿಸುತ್ತಿರುವುದನ್ನು ನೀವು ನೋಡಬಹುದಾಗಿದೆ. ಆದರೆ, ಹಾವು ಮಾತ್ರ ಮಹಿಳೆಯ ಕಿವಿಯಿಂದ ಹೊರಬರುವ ಮಾತೆ ಎತ್ತುತ್ತಿಲ್ಲ,

Written by - Nitin Tabib | Last Updated : Sep 12, 2022, 04:05 PM IST
  • ಮಹಿಳೆಯೋರ್ವಳ ಕಿವಿಯೊಳಗೆ ಹಾವೊಂದು ಹೊಕ್ಕಿದ್ದು,
  • ಅದು ಆ ಮಹಿಳೆಯ ಕಿವಿನಿಂದ ಹೊರಬರುವ ಲಕ್ಷಣಗಳನ್ನೇ ತೋರುತ್ತಿಲ್ಲ.
  • ಈ ಘಟನೆಯ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಇದೀಗ ಭಾರಿ ವೈರಲ್ ಆಗುತ್ತಿದೆ.
Viral Video: ಮಹಿಳೆಯ ಕಿವಿ ಹೊಕ್ಕ ಹಾವು, ಹೊರಬರುವ ಮಾತೆ ಎತ್ತುತ್ತಿಲ್ಲ...! ವಿಡಿಯೋ ನೋಡಿ title=

Snake In Woman Ear Viral Video: ಮಹಿಳೆಯೋರ್ವಳ ಕಿವಿಯೊಳಗೆ ಹಾವೊಂದು ಹೊಕ್ಕಿದ್ದು, ಅದು ಆ ಮಹಿಳೆಯ ಕಿವಿನಿಂದ ಹೊರಬರುವ ಲಕ್ಷಣಗಳನ್ನೇ ತೋರುತ್ತಿಲ್ಲ. ಈ ಘಟನೆಯ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಇದೀಗ ಭಾರಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ವೈದ್ಯರು ಮಹಿಳೆಯ ಕಿವಿಯಿಂದ ಹಾವನ್ನು ತೆಗೆಯಲು ಪ್ರಯತ್ನಿಸುತ್ತಿರುವುದನ್ನು ನೀವು ನೋಡಬಹುದು. ಕೈಗೆ ಕೈಚೀಲಗಳನ್ನು ಧರಿಸಿರುವ ವೈದ್ಯರು ಕೆಲ ಉಪಕರಣಗಳ ಸಹಾಯದಿಂದ ಹಾವನ್ನು ಹಿಡಿಯಲು ಯತ್ನಿಸುತ್ತಿದ್ದಾರೆ ಮತ್ತು ಪ್ರತಿ ಬಾರಿ ವಿಫಲರಾಗುತ್ತಿದ್ದಾರೆ. 

ಹಾವನ್ನು ಮಹಿಳೆಯ ಕಿವಿಯಿಂದ ಹೊರತೆಗೆಯಲು ವೈದ್ಯರು ಹಲವು ಬಾರಿ ಪ್ರಯತ್ನಿಸುತ್ತಿರುವುದನ್ನು ನೀವು ಗಮನಿಸಬಹುದು. ಇದಕ್ಕಾಗಿ ಪ್ದ್ರತಿಯೊಂದು ತಂತ್ರವನ್ನು ವೈದ್ಯರು ಅನುಸರಿಸುತ್ತಿದ್ದಾರೆ. ಆದ್ರೆ ಹಾವು ಮಾತ್ರ ಮಹಿಳೆಯ ಕಿವಿಯನ್ನು ತೊರೆಯುವ ಯಾವುದೇ ಚಿಹ್ನೆಗಳನ್ನು ನೀಡುತ್ತಿಲ್ಲ. ಆದರೆ, ಮತ್ತೊಂದೆಡೆ ಹಾವು ಸಂಪೂರ್ಣವಾಗಿ ಮಹಿಳೆಯ ಕಿವಿಯೊಳಗೆ ಹೋಗುವ ಭಯವೂ ಕೂಡ ಸತಾಯಿಸುತ್ತಿದೆ. ಆದರೆ, ಈ ಘಟನೆ ನಡೆದಿದ್ದು ಎಲ್ಲಿ ಮತ್ತು ಯಾವಾಗ ಎನ್ನುವುದು ಇದುವರೆಗೆ ಸ್ಪಷ್ಟವಾಗಿಲ್ಲ. ಯಾವುದಕ್ಕೂ ಒಂದು ಸಾರಿ ವಿಡಿಯೋ ನೋಡಿ...

ಇದನ್ನೂ ಓದಿ-Viral Video: ಸ್ನಾನಕ್ಕೆಂದು ಹೊರಟ ಮಹಿಳೆಯನ್ನ ಬಾತ್ ರೂಂನಲ್ಲಿ ಸ್ವಾಗತಿಸಿದ್ದು 12 ಅಡಿ ಉದ್ದದ ಹೆಬ್ಬಾವು!

87000 ಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದಿದೆ ಈ ವಿಡಿಯೋ
ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಪ್ರಮಾಣದಲ್ಲಿ ಈ ವಿಡಿಯೋ ಹಂಚಿಕೆಯಾಗುತ್ತಿದೆ. ಇದುವರೆಗೆ ಈ ವಿಡಿಯೋ ಸುಮಾರು 87,000 ವೀಕ್ಷಣೆಗಳನ್ನು ಪಡೆದುಕೊಂಡಿದೆ. ಇದಲ್ಲದೆ 100 ಕ್ಕೂ ಅಧಿಕ ಜನ ಇದಕ್ಕೆ ತಮ್ಮ ಲೈಕ್ ಗಳನ್ನು ಕೂಡ ನೀಡಿದ್ದಾರೆ. ಆದರೆ, ಹಾವು ಮಹಿಳೆಯ ಕಿವಿಯಿಂದ ಹೊರಬಂದಿದೆಯೋ ಅಥವಾ ಇಲ್ಲವೋ ಎಂಬುದು ಇದುವರೆಗೆ ಪತ್ತೆಯಾಗಿಲ್ಲ. 

ಇದನ್ನೂ ಓದಿ-OMG: ಬೆಕ್ಕನ್ನು ಕೊಲೆಗೈಯಲು ಚಾಕು ತಂದ ಇಲಿರಾಯ! ಹಿಂದೆಂದು ನೋಡಿರ್ಲಿಕ್ಕಿಲ್ಲ ಇಂಥಾ ವಿಡಿಯೋ

ಸಂಪೂರ್ಣ ವಿಡಿಯೋ ಹಂಚಿಕೊಳ್ಳಲು ಮನವಿ
ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗುತ್ತಿರುವ ಈ ವಿಡಿಯೋಗೆ ಹಲವರು ಕಾಮೆಂಟ್ ಕೂಡ ಮಾಡುತ್ತಿದ್ದು, ಕೆಲವರು ತಮ್ಮ ಆತಂಕವನ್ನು ಹೊರಹಾಕುತ್ತಿದ್ದರೆ, ಕೆಲವರಿಗೆ ನಂಬಿಕೆಯೇ ಆಗುತ್ತಿಲ್ಲ. ಇನ್ನೊಂದೆಡೆ ಕೆಲವರು ಇದೊಂದು ನಕಲಿ ವಿಡಿಯೋ ಆಗಿದ್ದು, ಕೇವಲ ಲೈಕ್ಸ್ ಪಡೆಯುವ ಉದ್ದೇಶ ಇದರ ಹಿಂದೆ ಇದೆ ಎನ್ನುತ್ತಿದ್ದಾರೆ. ಇನ್ನುಳಿದವರು ಹಾವು ಕಿವಿಯೊಳಗೆ ಹೇಗೆ ಹೊಯಿತು ಅಥವಾ ಅದನ್ನು ಹೇಗೆ ಹೊರೆತೆಗೆಯಲಾಯಿತು ಎಂಬುದನ್ನು ತಿಳಿಯಲು ಸಂಪೂರ್ಣ ವಿಡಿಯೋ ಹಂಚಿಕೊಳ್ಳಲು ಮನವಿ ಮಾಡುತ್ತಿರುವುದು ಕಂಡುಬಂದಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News