Viral Video: ಜೀವನದಲ್ಲಿಯೇ ನೀವು ಈ ರೀತಿಯ ಕಾರ್ ಪಾರ್ಕಿಂಗ್ ನೋಡಿರುವುದಿಲ್ಲ..!

ಚೀನಾದ ಚಾಂಗ್‌ಕಿನ್‌ನಲ್ಲಿ ಕಾರ್ ಪಾರ್ಕಿಂಗ್ ಸ್ಥಳದ ಅಪಾಯಕಾರಿ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಕಾರೊಂದು ನಿಲ್ಲಿಸಿದ್ದ ಇತರ ಕಾರುಗಳ ಮೇಲೆ ನೆಗೆದು ಖಾಲಿ ಪಾರ್ಕಿಂಗ್ ಸ್ಥಳಕ್ಕೆ ಬಂದು ನಿಂತುಕೊಂಡಿದೆ.

Written by - Puttaraj K Alur | Last Updated : Apr 11, 2022, 07:03 PM IST
  • ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ ಕಾರ್ ಪಾರ್ಕಿಂಗ್ ವಿಡಿಯೋ
  • ನಿಲ್ಲಿಸಿದ್ದ ಕಾರುಗಳ ಮೇಲೆ ನಗೆದು ಖಾಲಿ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲುವ ಕಾರು
  • ಕಾರು ಚಾಲಕನಿಗೆ ‘ಪಾರ್ಕಿಂಗ್ ಮಾಸ್ಟರ್’ ಎನ್ನುತ್ತಿರುವ ಇಂಟರ್ನೆಟ್‍ ಬಳಕೆದಾರರು
Viral Video: ಜೀವನದಲ್ಲಿಯೇ ನೀವು ಈ ರೀತಿಯ ಕಾರ್ ಪಾರ್ಕಿಂಗ್ ನೋಡಿರುವುದಿಲ್ಲ..!  title=
ಕಾರ್ ಪಾರ್ಕಿಂಗ್ ವಿಡಿಯೋ ವೈರಲ್

ನವದೆಹಲಿ: ರಸ್ತೆಯಲ್ಲಿ ಅನೇಕ ಜನರು ತಮ್ಮ ವಾಹನಗಳನ್ನು ವಿಭಿನ್ನ ಮತ್ತು ವಿಶಿಷ್ಟ ರೀತಿಯಲ್ಲಿ ನಿಲ್ಲಿಸುವುದನ್ನು ನೀವು ನೋಡಿರಬಹುದು. ಆದರೆ ಇಂದು ನಾವು ನಿಮಗೆ ತೋರಿಸಲು ಹೊರಟಿರುವ ವಿಡಿಯೋ ಚೀನಾದ ಚಾಂಗ್‌ಕಿನ್ ನಗರದ್ದು. ಈ ರೀತಿಯ ಕಾರ್ ಪಾರ್ಕಿಂಗ್‍ಅನ್ನು ನೀವು ನೋಡಿಯೇ ಇರುವುದಿಲ್ಲ. ಈ ದೃಶ್ಯವು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿರುವ ಈ ವಿಡಿಯೋದಲ್ಲಿ ಡಿವೈಡರ್‌ಗೆ ಡಿಕ್ಕಿ ಹೊಡೆದ ನಂತರ ಕಾರೊಂದು ನಿಯಂತ್ರಣ ಕಳೆದುಕೊಂಡು ಗಾಳಿಯಲ್ಲಿ ಹಾರಿಹೋಗಿದೆ. ನಂತರ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ್ದ ಕಾರುಗಳ ಮೇಲೆ ಹತ್ತುವ ಕಾರು ನೇರವಾಗಿ ಖಾಲಿ ಪಾರ್ಕಿಂಗ್ ಜಾಗದಲ್ಲಿ ನಿಲ್ಲುತ್ತದೆ. ಕಾರುಗಳ ಮೇಲೆ ಹತ್ತಿದ ಕಾರು ನಿಖರವಾಗಿ ಖಾಲಿ ಇದ್ದ ಪಾರ್ಕಿಂಗ್ ಸ್ಥಳಕ್ಕೆ ಹೋಗಿ ನಿಂತಿರುವ ದೃಶ್ಯ ನೋಡಿಗರಿಗೆ ಅಚ್ಚರಿ ಮೂಡಿಸಿದೆ.

ಇದನ್ನೂ ಓದಿViral News: ರಾತ್ರಿ ಮಲಗಿದ್ದ ಈ ಬಾಲಕಿ 9 ವರ್ಷ ಏಳಲಿಲ್ಲ, ಎದ್ದಾಗ ತಾಯಿ ಸಾವನ್ನಪ್ಪಿದ್ದರು!

ಅಪಾಯಕಾರಿ ಪಾರ್ಕಿಂಗ್ ವಿಡಿಯೋ ವೈರಲ್!

ರೆಡ್ಡಿಟ್‌ನಲ್ಲಿ ಪೋಸ್ಟ್ ಮಾಡಲಾದ ಈ ವಿಡಿಯೋದಲ್ಲಿ, ವೇಗವಾಗಿ ಚಲಿಸುವ ಕಾರು ಮೊದಲು ನಿಲ್ಲಿಸಿದ ಕಾರಿಗೆ ಡಿಕ್ಕಿ ಹೊಡೆದು ನಂತರ ಮತ್ತೊಂದು ಕಾರಿನ ಮೇಲೆ ಹತ್ತಿ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲುತ್ತದೆ. ಇದಾದ ನಂತರ ಕಾರಿನ ಚಾಲಕ ಕೆಳಗಿಳಿದು ಏನೂ ನಡೆದೇ ಇಲ್ಲವೆಂಬಂತೆ ಮುಂದೆ ಸಾಗುತ್ತಾನೆ. ಈ ವಿಡಿಯೋಗೆ ಸಾವಿರಾರು ಜನರು ಪ್ರತಿಕ್ರಿಯೆ ನೀಡುತ್ತಿದ್ದಾರೆ. ಕೆಲವರು ಕಾರ್ ಡ್ರೈವರ್ ಅನ್ನು ಪಾರ್ಕಿಂಗ್ ಮಾಸ್ಟರ್ ಎಂದು ಕರೆದಿದ್ದಾರೆ. ಮತ್ತೆ ಕೆಲವರು ಇದನ್ನು ‘ಲೈಕ್ ಎ ಗ್ಲೋವ್’ ಆಕ್ಷನ್ ಚಿತ್ರದ ದೃಶ್ಯವೆಂದು ಹೇಳಿದ್ದಾರೆ. ಶೇರ್ ಆದ ಕೆಲವೇ ಗಂಟೆಗಳಲ್ಲಿ ಈ ವಿಡಿಯೋವನ್ನು ಲಕ್ಷಾಂತರ ಜನರು ವೀಕ್ಷಿಸಿದ್ದಾರೆ. ಸಾವಿರಾರು ಜನರು ವಿಡಿಯೋವನ್ನು ಶೇರ್ ಕೂಡ ಮಾಡಿದ್ದಾರೆ.

ಇದನ್ನೂ ಓದಿ: China: ಚೀನಾದಲ್ಲಿ ಮತ್ತೆ ಕೊರೊನಾ ಅಬ್ಬರ: ಶಾಂಘೈನಲ್ಲಿ ಅಂಗಡಿಗಳು ಬಂದ್‌

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News