Viral News: ಒಂದಲ್ಲಾ ಎರಡಲ್ಲಾ 8 ಮದುವೆಯಾಗಿ ಸುಖ ಸಂಸಾರ ನಡೆಸುತ್ತಿರುವ ಭೂಪ..!

ಥೈಲ್ಯಾಂಡ್‌ನಲ್ಲಿ ವಾಸಿಸುವ ವ್ಯಕ್ತಿಯೊಬ್ಬರು ಮದುವೆ ವಿಚಾರವಾಗಿ ಪ್ರಸಿದ್ಧರಾಗಿದ್ದಾರೆ. ಇವರಿಗೆ ಒಂದಲ್ಲಾ ಎರಡಲ್ಲಾ 8 ಜನ ಪತ್ನಿಯರಿದ್ದು ಎಲ್ಲರೂ ಒಂದೇ ಮನೆಯಲ್ಲಿ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ. ವ್ಯಕ್ತಿ ಟಿವಿ ಶೋನಲ್ಲಿ ತನ್ನ ಕಥೆಯನ್ನು ವಿವರಿಸಿದ್ದು, ಇದು ಸಖತ್ ವೈರಲ್ ಆಗುತ್ತಿದೆ.

Written by - Puttaraj K Alur | Last Updated : Jan 31, 2022, 10:24 AM IST
  • ಒಂದಲ್ಲಾ ಎರಡಲ್ಲಾ ಬರೋಬ್ಬರಿ 8 ಮದುವೆಯಾಗಿರುವ ಥಾಯ್ಲೆಂಡ್‌ನಲ್ಲಿ ನೆಲೆಸಿರುವ ವ್ಯಕ್ತಿ
  • ಎಲ್ಲಾ 8 ಪತ್ನಿಯರ ಜೊತೆಗೆ ಒಂದೇ ಸೂರಿನಡಿ ಸುಖಸಂಸಾರ ನಡೆಸುತ್ತಿರುವ ಭೂಪ
  • ಪ್ರಪಂಚದಾದ್ಯಂತ ವೈರಲ್ ಆಗಿದೆ ಓಂಗ್ ಡ್ಯಾಮ್ ಸೊರೊಟ್ ಮದುವೆ ಮತ್ತು ಪ್ರೇಮಪುರಾಣ
Viral News: ಒಂದಲ್ಲಾ ಎರಡಲ್ಲಾ 8 ಮದುವೆಯಾಗಿ ಸುಖ ಸಂಸಾರ ನಡೆಸುತ್ತಿರುವ ಭೂಪ..! title=
8 ಮದುವೆಯಾಗಿರುವ ಥಾಯ್ಲೆಂಡ್‌ ಭೂಪ!

ಬ್ಯಾಂಕಾಕ್: ಥಾಯ್ಲೆಂಡ್‌(Thailand)ನಲ್ಲಿ ನೆಲೆಸಿರುವ ವ್ಯಕ್ತಿಯೊಬ್ಬ ಒಂದಲ್ಲಾ ಎರಡಲ್ಲಾ ಬರೋಬ್ಬರಿ 8 ಮದುವೆಯಾಗಿದ್ದು, ಯಾವುದೇ ಗದ್ದಲ-ಗಲಾಟೆ ಇಲ್ಲದೆ ಸುಖಸಂಸಾರ ನಡೆಸುತ್ತಿದ್ದಾನೆ. ಹೌದು, ತನ್ನ 8 ಪತ್ನಿಯರೊಂದಿಗೆ ಈ ಭೂಪ ಒಂದೇ ಮನೆಯಲ್ಲಿ ವಾಸ ಮಾಡುತ್ತಿದ್ದು, ಯಾವುದೇ ಜಗಳವಿಲ್ಲದೆ ಜೀವನ ನಡೆಸುತ್ತಿದ್ದಾನೆ ಈ ವ್ಯಕ್ತಿಯ ಕಥೆ ಈಗ ಪ್ರಪಂಚದಾದ್ಯಂತ ವೈರಲ್ ಆಗಿದೆ. ವರದಿಯ ಪ್ರಕಾರ ಓಂಗ್ ಡ್ಯಾಮ್ ಸೊರೊಟ್(Ong Dam Sorot ಎಂಬಾತನೇ 8 ಮದುವೆಯಾಗಿದ್ದು, ಎಲ್ಲಾ ಪತ್ನಿಯರ ಜೊತೆಗೆ ಒಂದೇ ಸೂರಿನಡಿ ವಾಸಿಸುತ್ತಿದ್ದಾನೆ. 

ಸಂದರ್ಶನದಲ್ಲಿ ಮದುವೆ ಕಥೆ ಹೇಳಿದ ಓಂಗ್

ಓಂಗ್ ಡ್ಯಾಮ್ ಸೊರೊಟ್ ಒಬ್ಬ ವೃತ್ತಿಪರ ಟ್ಯಾಟೂ ಕಲಾವಿದ(Tattoo Artist). ಇತ್ತೀಚೆಗೆ ಅವರು ಟಿವಿ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡಿದ್ದರು. ಸಂದರ್ಶನದಲ್ಲಿ ಅವರು ತಮ್ಮ 8 ಹೆಂಡತಿಯರ ಕಥೆ(8 Marriages)ಯನ್ನು ವಿವರಿಸಿದರು. ಈ ಸಂದರ್ಶನದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಆದ ಬಳಿಕ ಅವರು ಪ್ರಸಿದ್ಧರಾದರು. ಈ ವಿಡಿಯೋವನ್ನು ಯೂಟ್ಯೂಬ್‌ನಲ್ಲಿಯೇ 30 ಮಿಲಿಯನ್‌ಗಿಂತಲೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ. ವಿಶೇವೆಂದರೆ ಓಂಗ್ ಪತ್ನಿಯರು ಒಬ್ಬರಿಗೊಬ್ಬರು ಚೆನ್ನಾಗಿ ಬೆರೆಯುತ್ತಾರೆ ಮತ್ತು ತಾವೆಲ್ಲರೂ ಒಂದೇ ಕುಟುಂಬದವರಂತೆ ವರ್ತಿಸುತ್ತಾರೆ ಅಂತಾ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಅಫ್ಘಾನಿಸ್ತಾನಕ್ಕೆ 3 ಟನ್‌ಗಳಷ್ಟು ಅಗತ್ಯ ಜೀವರಕ್ಷಕ ಔಷಧಿಗಳನ್ನು ಪೂರೈಸಿದ ಭಾರತ

ಓಂಗ್ ಪ್ರೇಮಪುರಾಣದ ರೋಚಕ ಕಥೆ

ಓಂಗ್(Ong Dam Sorot) ಅವರು ತಮ್ಮ ಮೊದಲ ಪತ್ನಿ ನಾಂಗ್ ಸ್ಪ್ರೈಟ್ ಅವರನ್ನು ಸ್ನೇಹಿತನ ಮದುವೆಯಲ್ಲಿ ಭೇಟಿಯಾಗಿದ್ದರಂತೆ. ತನ್ನ 2ನೇ ಹೆಂಡತಿ ನಾಂಗ್ ಎಲ್ ಅನ್ನು ಮಾರುಕಟ್ಟೆಯಲ್ಲಿ ನೋಡಿದ್ದರಂತೆ. ಈ ಮೊದಲ ನೋಟದಲ್ಲೇ ಅವರ ಪ್ರೀತಿಯ ಬಲೆಗೆ ಬಿದ್ದಿದ್ದನಂತೆ. ಆಶ್ಚರ್ಯವೆಂದರೆ ಮೊದಲ ಹೆಂಡತಿಯ ಬಗ್ಗೆ ತಿಳಿದಿದ್ದರೂ ಆಕೆ ಓಂಗ್ ಅನ್ನು ಮದುವೆಯಾಗಲು ಒಪ್ಪಿಕೊಂಡಳಂತೆ. ಇದೇ ರೀತಿ 3ನೇ ಹೆಂಡತಿಯನ್ನು ಆಸ್ಪತ್ರೆಯಲ್ಲಿ ಮತ್ತು 4 ಮತ್ತು 5ನೇ ಹಂಡತಿಯರನ್ನು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಭೇಟಿಯಾಗಿದ್ದರಂತೆ.

ಓಂಗ್ ಸುಖಮಯ ಸಂಸಾರದ ರಹಸ್ಯ

5 ಹೆಂಡತಿಯರ ನಂತರವೂ ಓಂಗ್ ದೇವಸ್ಥಾನದಲ್ಲಿ ಒಬ್ಬ ಮಹಿಳೆಯನ್ನು ನೋಡಿ ಆಕೆಗೆ ಮದುವೆ ಪ್ರಸ್ತಾಪ ಮಾಡಿದ್ದ. ವಿಶೇಷವೆಂದರೆ ಈಗಾಗಲೇ 5 ಹೆಂಡತಿಯರನ್ನು ಹೊಂದಿದ್ದ ಓಂಗ್ ಮದುವೆ ಪ್ರಪೋಸಲ್ ಅನ್ನು ಆಕೆಯೂ ಒಪ್ಪಿಕೊಂಡಳಂತೆ. ಬಳಿಕ 7ನೇ ಪತ್ನಿಯನ್ನೂ ಓಂಗ್ ಮದುವೆಯಾಗಿ ಮನೆಗೆ ಕರೆತಂದಿದ್ದನಂತೆ. ವರದಿಯ ಪ್ರಕಾರ ಓಂಗ್ ತಮ್ಮ 8ನೇ(8 Wives) ಮತ್ತು ಕೊನೆಯ ಪತ್ನಿ ನಾಂಗ್ ಮಾಯ್ ಅವರನ್ನು ಪಟ್ಟಾಯದಲ್ಲಿ ರಜಾದಿನಗಳಂದು ಭೇಟಿಯಾದರಂತೆ. ಈ ಪ್ರವಾಸದ ಸಮಯದಲ್ಲಿ ಅವರ ನಾಲ್ವರು ಪತ್ನಿಯರು ಸಹ ಅವರೊಂದಿಗಿದ್ದರು ಎಂಬುದು ಗಮನಿಸಬೇಕಾದ ಸಂಗತಿ. ಆದರೆ ಓಂಗ್ ಮಾತ್ರ ಮತ್ತೊಮ್ಮೆ ಪ್ರೀತಿಯಲ್ಲಿ ಸಿಲುಕಿದರು. ಓಂಗ್ ಅವರ ಈ ಯಶಸ್ವಿ ಮತ್ತು ಸಂತೋಷದ ಜೀವನದ ರಹಸ್ಯವೆಂದರೆ ಅವರ ಕಾಳಜಿಯುಳ್ಳ ಸ್ವಭಾವ. ಆತ ಕಾಳಜಿಯುಳ್ಳ ವ್ಯಕ್ತಿ ಎಂದು ಅವರ ಹೆಂಡತಿಯರು ಹೇಳುತ್ತಾರೆ. ಅವರ ಪತ್ನಿಯರು 4 ಪ್ರತ್ಯೇಕ ಮಲಗುವ ಕೋಣೆಗಳನ್ನು ಹೊಂದಿದ್ದು, ಪತಿಯೊಂದಿಗಿನ  ಪ್ರಣಯಕ್ಕೆ ಸರದಿ ಸಾಲಿನಲ್ಲಿ ನಿಂತವರಂತೆ ಕಾಯುತ್ತಾರೆ.

ಇದನ್ನೂ ಓದಿViral News: ಹ್ಯಾಪಿ ಎಂಡಿಂಗ್ ಮಸಾಜ್ ಪಾರ್ಲರ್‌ನಲ್ಲಿ ಮುದುಕನ ಲೈಫ್ ಎಂಡ್..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News