Viral Video: ಗಡ್ಡದಿಂದ 63 ಕೆಜಿ ಮಹಿಳೆ ಎತ್ತಿ ಗಿನ್ನಿಸ್ ರೆಕಾರ್ಡ್ ಮಾಡಿದ ಭೂಪ..!

ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಆದ ಕೆಲವೇ ಗಂಟೆಗಳಲ್ಲಿ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು, ಲಕ್ಷಾಂತರ ಜನರು ವೀಕ್ಷಿಸಿದ್ದಾರೆ.

Written by - Puttaraj K Alur | Last Updated : Nov 21, 2021, 11:42 AM IST
  • ಕೇವಲ ಗಡ್ಡದ ಸಹಾಯದಿಂದಲೇ 63 ಕೆಜಿ ತೂಕದ ಮಹಿಳೆಯನ್ನು ಎತ್ತಿದ ವ್ಯಕ್ತಿ
  • ಗಿನ್ನಿಸ್ ವಿಶ್ವದಾಖಲೆ ನಿರ್ಮಿಸಿ ಅಚ್ಚರಿ ಮೂಡಿಸಿದ ಅಂಟಾನಾಸ್ ಕೊಂಟ್ರಿಮಾಸ್‌
  • ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ ಕೊಂಟ್ರಿಮಾಸ್ ವಿಡಿಯೋ
Viral Video: ಗಡ್ಡದಿಂದ 63 ಕೆಜಿ ಮಹಿಳೆ ಎತ್ತಿ ಗಿನ್ನಿಸ್ ರೆಕಾರ್ಡ್ ಮಾಡಿದ ಭೂಪ..! title=
ಗಡ್ಡದಿಂದ ಗಿನ್ನಿಸ್ ದಾಖಲೆ ನಿರ್ಮಿಸಿದ ವ್ಯಕ್ತಿ

ನ್ಯೂಯಾರ್ಕ್: ಗಡ್ಡದಿಂದ ಏನು ಮಾಡಬಹುದು? ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಈ ವಿಡಿಯೋ ನೋಡಿದರೆ ಗಡ್ಡದಿಂದ ಏನು ಬೇಕಾದರೂ ಮಾಡಬಹುದು ಎನ್ನುತ್ತೀರಿ. ಹೌದು, ಅಂಟಾನಾಸ್ ಕೊಂಟ್ರಿಮಾಸ್‌(Antanas Kontrimas) ಎಂಬ ವ್ಯಕ್ತಿ ಕೇವಲ ತನ್ನ ಗಡ್ಡದಿಂದ  63 ಕೆಜಿ ತೂಕದ ಮಹಿಳೆಯನ್ನು ಎತ್ತುವ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದಾನೆ. ಇದು ಅಚ್ಚರಿಯಾದರೂ ನಿಜ. ಇದೀಗ ಈ ವಿಡಿಯೋ ಅಂತರ್ಜಾಲದಲ್ಲಿ ಸಖತ್ ಸೌಂಡ್ ಮಾಡುತ್ತಿದೆ.  

ಅನೇಕರು ಗಿನ್ನಿಸ್ ವಿಶ್ವದಾಖಲೆ(Guinness World Record) ಮಾಡಲು ಬಹಳಷ್ಟು ಪ್ರಯತ್ನ ಮಾಡುತ್ತಾರೆ. ದಾಖಲೆ ನಿರ್ಮಿಸಲು ಏನು ಮಾಡಬೇಕು ಎಂದು ತಲೆಕೆಡಿಸಿಕೊಂಡಿರುತ್ತಾರೆ. ಗಿನ್ನಿಸ್ ರೆಕಾರ್ಡ್ ಮಾಡಲು ನನ್ನಲ್ಲಿ ಏನಾದರೂ ಕೌಶಲ್ಯಗಳಿವೆಯೇ? ಎಂದು ಕಂಡುಕೊಂಡು ಅದರಂತೆ ಪ್ರಯತ್ನಿಸುತ್ತಾರೆ. ಗಿನ್ನಿಸ್ ವಿಶ್ವದಾಖಲೆ ಮಾಡಲು ಕೆಲವರು ತೆಗೆದುಕೊಳ್ಳುವ ರಿಸ್ಕ್ ತುಂಬಾ ಅಪಾಯಕಾರಿಯಾಗಿರುತ್ತದೆ. ಆದರೂ ನಾವೂ ಕೂಡ ಏನಾದರೂ ದಾಖಲೆ ಮಾಡಬೇಕು ಅನ್ನೋ ತುಡಿತ, ಹಂಬಲ ಅವರಿಗಿರುತ್ತದೆ.

ಇದನ್ನೂ ಓದಿ: ಕಾಂಗ್ರೆಸ್ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಲಿದೆಯೇ ಇಮ್ರಾನ್ ಖಾನ್ ಬಗ್ಗೆ ಸಿಧು ನೀಡಿದ ಹೇಳಿಕೆ?

ಅದರಂತೆ ಅಂಟಾನಾಸ್ ಕೊಂಟ್ರಿಮಾಸ್‌ ಎಂಬ ವ್ಯಕ್ತಿ ಗಿನ್ನಿಸ್ ದಾಖಲೆ(Antanas Kontrimas Guinness World Record) ನಿರ್ಮಿಸಲು ಬಳಸಿಕೊಂಡಿದ್ದು ತನ್ನ ಗಡ್ಡವನ್ನು. ಈತ ತನ್ನ ಗಡ್ಡದ ಸಹಾಯದಿಂದ ಬರೋಬ್ಬರಿ 63.80 ಕೆಜಿ ತೂಕದ ಮಹಿಳೆಯನ್ನು ಎತ್ತುವ ಮೂಲಕ ಗಿನ್ನಿಸ್ ದಾಖಲೆ ನಿರ್ಮಿಸಿದ್ದಾರೆ. ಮಾನವನ ಗಡ್ಡದಿಂದ ಅತಿಹೆಚ್ಚು ತೂಕ ಎತ್ತಿದ ಮೊದಲ ವ್ಯಕ್ತಿ ಎಂಬ ವಿಶ್ವದಾಖಲೆ ನಿರ್ಮಿಸಿದ ಹೆಗ್ಗಳಿಕೆಗೆ ಈ ವ್ಯಕ್ತಿ ಪಾತ್ರರಾಗಿದ್ದಾರೆ. ಸದ್ಯ ವೈರಲ್ ಆಗಿರುವ ವಿಡಿಯೋದಲ್ಲಿ ಕೊಂಟ್ರಿಮಾಸ್ ತನ್ನ ಗಡ್ಡದ ಸಹಾಯದಿಂದ ಮಹಿಳೆಯನ್ನು ಎತ್ತುತ್ತಿರುವುದನ್ನು ಕಾಣಬಹುದಾಗಿದೆ. ಮೊದಲಿಗೆ ಇದು ಅತ್ಯಂತ ಕಷ್ಟಕರ ಟಾಸ್ಕ್ ಎನಿಸಿದರೂ ಕಾಂಟ್ರಿಮಾಸ್ ದಾಖಲೆ ನಿರ್ಮಿಸುವ ಉದ್ದೇಶದಿಂದ ಸುಲಭವಾಗಿ ಮಹಿಳೆಯನ್ನು ಗಡ್ಡದಿಂದ ಮೇಲಕ್ಕೆತ್ತಿದ್ದಾನೆ.

ಇನ್‌ಸ್ಟಾಗ್ರಾಮ್‌(Instagram)ನಲ್ಲಿ ಶೇರ್ ಆದ ಕೆಲವೇ ಗಂಟೆಗಳಲ್ಲಿ ಈ ವಿಡಿಯೋ ಸೋಷಿಯಲ್ ಮೀಡಿಯಾ(Social Media)ದಲ್ಲಿ ಸಖತ್ ವೈರಲ್ ಆಗಿದ್ದು, ಲಕ್ಷಾಂತರ ಜನರು ವೀಕ್ಷಿಸಿದ್ದಾರೆ. ಕೊಂಟ್ರಿಮಾಸ್ ಗಡ್ಡದ ಶಕ್ತಿ ಕಂಡು ನೆಟಿಜನ್‌ಗಳು ಹೌಹಾರಿ ಹೋಗಿದ್ದಾರೆ. ಅವರು ತಮ್ಮ ಗಟ್ಟಿ ಕೂದಲಿಗೆ ಯಾವ ಉತ್ಪನ್ನ ಬಳಸಿರಬಹುದು ಎಂದು ಅನೇಕ ಪ್ರಶ್ನಸಿ ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ‘ಈ ವ್ಯಕ್ತಿ ತನ್ನ ಕೂದಲಿಗೆ ಯಾವ ಉತ್ಪನ್ನಗಳನ್ನು ಬಳಸುತ್ತಾನೆ ಎಂದು ನನಗೆ ಆಶ್ಚರ್ಯವಾಗಿದೆ’ ಎಂದು ಒಬ್ಬರು ಕಾಮೆಂಟ್ ಮಾಡಿದರೆ, ‘ಗಡ್ಡದಿಂದ ಆಕೆಯನ್ನು ಆತ ಎತ್ತುತ್ತಿರುವ ದೃಶ್ಯ ತುಂಬಾ ಭಯಾನಕವಾಗಿದೆ’ ಎಂದು ಮತ್ತೊಮ್ಮರು ಕಾಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: First Time In History: 1 ಗಂಟೆ 25 ನಿಮಿಷ ಅಮೆರಿಕದ ಅಧ್ಯಕ್ಷೆಯಾಗಿದ್ದ ಕಮಲಾ ಹ್ಯಾರಿಸ್

ಅಂದಹಾಗೆ ಈ ಇವೆಂಟ್ ನಡೆದಿರುವುದು ಟರ್ಕಿಯ ಇಸ್ತಾನ್‌ಬುಲ್‌(İstanbul)ನಲ್ಲಿ. ‘ರೆಕೋರ್ಲರ್ ದುನ್ಯಾಸಿ’ ಸೆಟ್‌ನಲ್ಲಿ 63.80 ಕೆಜಿ ಎತ್ತುವ ಮೂಲಕ ಕೊಂಟ್ರಿಮಾಸ್ ತನ್ನ ಹೆಸರನ್ನು ಗಿನ್ನೆಸ್ ವಿಶ್ವ ದಾಖಲೆಗೆ ಸೇರಿಸಿಕೊಂಡಿದ್ದಾರೆ. ಮುಂಬರುವ ದಿನಗಳಲ್ಲಿ ಯಾರೊಬ್ಬರು ಅವರ ದಾಖಲೆ ಮುರಿಯಲು ಸಾಧ್ಯವಿಲ್ಲ. ಏಕೆಂದರೆ ಕೇವಲ ಗಡ್ಡದಿಂದ 63 ಕೆಜಿ ತೂಕದ ಮಹಿಳೆ ಎತ್ತುವುದು ಸಾಮಾನ್ಯದ ಮಾತಲ್ಲ ಅಂತಾ ಅನೇಕ ಹೇಳಿದ್ದಾರೆ.

ಭಾರತದ ಸುಜಿತ್ ಕುಮಾರ್ ಎಂಬುವರು ಇದೇ ರೀತಿಯ ಅಸಮಾನ್ಯ ದಾಖಲೆಯೊಂದನ್ನು ನಿರ್ಮಿಸಿದ್ದಾರೆ. ಸುಜಿತ್ ಅವರು ಒಂದೇ ಬಾರಿಗೆ 279 ವಾಲ್‌ನಟ್‌ಗಳನ್ನು ಪುಡಿಪುಡಿ ಮಾಡುವ ಮೂಲಕ ಈ ದಾಖಲೆ ನಿರ್ಮಿಸಿದ್ದಾರೆ. ಕೇವಲ ಒಂದೇ ಒಂದು ನಿಮಿಷದಲ್ಲಿ ಮೊಣಕೈಯಿಂದ ಅತಿಹೆಚ್ಚು ವಾಲ್‌ನಟ್ಸ್‌ ಪುಡಿ ಮಾಡಿದ ದಾಖಲೆಗಾಗಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News