Rishi Sunak : ಬ್ರಿಟನ್ ಪ್ರಧಾನಿಯಾಗುತ್ತಾರೆ ಭಾರತ ಮೂಲದ ರಿಷಿ ಸುನಕ್!?

ಅವರ ರಾಜೀನಾಮೆ ನಂತರ ಈಗ ಅವರ ಪಕ್ಷದ ಸಂಸದ ಭಾರತೀಯ ಮೂಲದ ರಿಷಿ ಸುನಕ್ ಪ್ರಧಾನಿಯಾಗುವ ಸಾಧ್ಯತೆ ಬಲವಾಗಿದೆ. ಒಂದು ವೇಳೆ ಪಿಎಂ ಆದರೆ, ಭಾರತೀಯ ಮೂಲದ ವ್ಯಕ್ತಿ ಬ್ರಿಟನ್ ಪ್ರಧಾನಿಯಾಗುತ್ತಿರುವುದು ಇದೇ ಮೊದಲು.

Written by - Channabasava A Kashinakunti | Last Updated : Oct 20, 2022, 11:21 PM IST
  • ಬ್ರಿಟನ್ ಪ್ರಧಾನಿ ಲಿಜ್ ಟ್ರಸ್ ಅವರು ಇಂದು ತಮ್ಮ ಹುದ್ದೆಗೆ ರಾಜೀನಾಮೆ
  • ಭಾರತೀಯ ಮೂಲದ ರಿಷಿ ಸುನಕ್ ಬ್ರಿಟನ್ ಪ್ರಧಾನಿಯಾಗುವ ಸಾಧ್ಯತೆ
  • ನಾರಾಯಣ ಮೂರ್ತಿ ಅಳಿಯ ಸುನಕ್
Rishi Sunak : ಬ್ರಿಟನ್ ಪ್ರಧಾನಿಯಾಗುತ್ತಾರೆ ಭಾರತ ಮೂಲದ ರಿಷಿ ಸುನಕ್!? title=

Liz Truss Resigns : ಬ್ರಿಟನ್ ಪ್ರಧಾನಿ ಲಿಜ್ ಟ್ರಸ್ ಅವರು ಇಂದು ತಮ್ಮ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಅವರು ಪ್ರಧಾನಿಯಾದ 44 ದಿನಗಳ ನಂತರ ಮಾತ್ರ ಹುದ್ದೆಯನ್ನು ತೊರೆದಿದ್ದಾರೆ. ಅವರ ರಾಜೀನಾಮೆ ನಂತರ ಈಗ ಅವರ ಪಕ್ಷದ ಸಂಸದ ಭಾರತೀಯ ಮೂಲದ ರಿಷಿ ಸುನಕ್ ಪ್ರಧಾನಿಯಾಗುವ ಸಾಧ್ಯತೆ ಬಲವಾಗಿದೆ. ಒಂದು ವೇಳೆ ಪಿಎಂ ಆದರೆ, ಭಾರತೀಯ ಮೂಲದ ವ್ಯಕ್ತಿ ಬ್ರಿಟನ್ ಪ್ರಧಾನಿಯಾಗುತ್ತಿರುವುದು ಇದೇ ಮೊದಲು.

ರಿಷಿ ಸುನಕ್ ಯಾರು?

ಯುನೈಟೆಡ್ ಕಿಂಗ್ಡಮ್ ನ ಹ್ಯಾಂಪ್‌ಶೈರ್‌ನಲ್ಲಿ ಜನಿಸಿದ ರಿಷಿ ಸುನಕ್, ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದಿಂದ ಉನ್ನತ ಶಿಕ್ಷಣವನ್ನು ಪಡೆದರು ಮತ್ತು ನಂತರ ಯುಎಸ್ ನ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದಿಂದ ಎಂಬಿಎ ಮಾಡಿದರು. ತಮ್ಮ ಅಧ್ಯಯನವನ್ನು ಪೂರ್ಣಗೊಳಿಸಿದ ನಂತರ, ಅವರು ತಮ್ಮ ವೃತ್ತಿಜೀವನವನ್ನು ಹೂಡಿಕೆ ಬ್ಯಾಂಕ್ ಗೋಲ್ಡ್ಮನ್ ಸ್ಯಾಚ್ಸ್ನೊದಲ್ಲಿ ಪ್ರಾರಂಭಿಸಿದರು. ಇದಾದ ನಂತರ ಅವರು ರಾಜಕೀಯಕ್ಕೆ ಎಂಟ್ರಿ ನೀಡಿದರು. 2015 ರಲ್ಲಿ ಮೊದಲ ಬಾರಿಗೆ ಯಾರ್ಕ್‌ಷೈರ್‌ನ ರಿಚ್‌ಮಂಡ್‌ನಿಂದ ಸಂಸದರಾಗಿ ಆಯ್ಕೆಯಾದರು. ರಿಷಿ ಸುನಕ್ ಅಲ್ಲಿ ಆಗಾಗ್ಗೆ ಸಂಸದರಾಗಿದ್ದಾರೆ. ಕಳೆದ ವರ್ಷ, ಸುನಕ್ ಎರಡನೇ ಬಾರಿಗೆ ರಿಚ್ಮಂಡ್ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿದ್ದಾರೆ.

ಇದನ್ನೂ ಓದಿ : ಬ್ರಿಟನ್‌ನ ಪ್ರಧಾನಿ ಲಿಜ್ ಟ್ರಸ್ ರಾಜೀನಾಮೆ ಘೋಷಣೆ

ನಾರಾಯಣ ಮೂರ್ತಿ ಅಳಿಯ ಸುನಕ್

ಅವರು ಬ್ರಿಟನ್‌ನ ಹಣಕಾಸು ಸಚಿವ ಮತ್ತು ವಸತಿ ಸಚಿವರಾಗಿ ಅಧಿಕಾರ ವಹಿಸಿಕೊಳ್ಳುವುದರ ಜೊತೆಗೆ, ಬೋರಿಸ್ ಜಾನ್ಸನ್ ಅವರ ಚುನಾವಣಾ ಪ್ರಚಾರದಲ್ಲಿ ಪ್ರಮುಖ ಪಾತ್ರ ವಹಿಸಿದರು. ರಿಷಿ ಸುನಕ್ ಭಾರತೀಯ ಸಾಫ್ಟ್‌ವೇರ್ ಕಂಪನಿ ಇನ್ಫೋಸಿಸ್‌ನ ಸಹ-ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಅಳಿಯ. ಅವರು 2009 ರಲ್ಲಿ ನಾರಾಯಣ ಮೂರ್ತಿ ಅವರ ಪುತ್ರಿ ಅಕ್ಷತಾ ಮೂರ್ತಿ ಅವರನ್ನು ವಿವಾಹವಾಗಿದ್ದಾರೆ. ಸಧ್ಯ ಇವರಿಗೆ ಇಬ್ಬರು ಮಕ್ಕಳಿದ್ದಾರೆ.

ಸುನಕ್ ಗೆ ಲಿಜ್ ಟ್ರಸ್ ವಿರುದ್ಧ ಸೋಲು

ಗಮನಾರ್ಹ ವಿಷಯವೆಂದರೆ, ಬ್ರಿಟನ್‌ನ ಬೋರಿಸ್ ಜಾನ್ಸನ್ ಅವರ ರಾಜೀನಾಮೆಯ ನಂತರ, ರಿಷಿ ಸುನಕ್ ಕೂಡ ಲಿಜ್ ಟ್ರಸ್ ಅವರೊಂದಿಗೆ ಬ್ರಿಟನ್‌ನ ಪ್ರಧಾನಿ ರೇಸ್‌ನಲ್ಲಿ ಭಾಗಿಯಾಗಿದ್ದರು. ಆದರೆ ಟೋರಿ ನಾಯಕತ್ವದ ಫೈಟ್ ನಲ್ಲಿ ಅವರು ಲಿಜ್ ಟ್ರಸ್ಗೆ ವಿರುದ್ಧ ಸೋತರು. ಚುನಾವಣೆಯಲ್ಲಿ ಟ್ರಸ್ 81,326 ಮತಗಳನ್ನು ಅಂದರೆ ಶೇ.57 ರಷ್ಟು ಮತಗಳನ್ನು ಪಡೆದು ಜಯ ತಮ್ಮದಾಗಿಸಿಕೊಂಡರು, ಸುನಕ್ 60,399 ಮತಗಳನ್ನು ಪಡೆದು ಸೋಲು ಅನುಭವಿಸಿದರು. ಆದರೆ ಲಿಜ್ ಟ್ರಸ್ ಅವರು 44 ದಿನಗಳ ನಂತರ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಇದಾದ ಕಾರಣ ಮತ್ತೊಮ್ಮೆ ಪ್ರಧಾನಿ ಹುದ್ದೆಗೆ ರಿಷಿ ಸುನಕ್ ಹೆಸರು ಭಾರಿ ಚರ್ಚೆಯಲ್ಲಿದೆ.

ಇದನ್ನೂ ಓದಿ : Viral Video: ಕೋಳಿಗೆ ಕಲ್ಲು ಹೊಡೆಯಲು ಹೋದ ಮಹಿಳೆ, ಹಿಂದಿನಿಂದ ಬಂದ ಟಗರು ಮಾಡಿದ್ದೇನು ನೀವೇ ನೋಡಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News