ವಾಷಿಂಗ್ ಟನ್: ಎಚ್ 1ಬಿ ವೀಸಾ ಹೊಂದಿರುವವರ ಪತ್ನಿಯರು ಅಮೆರಿಕದಲ್ಲಿ ಉದ್ಯೋಗ ಮಾಡಲು ಅಮೆರಿಕದ ಹಿಂದಿನ ಅಧ್ಯಕ್ಷ ಬರಾಕ್ ಒಬಾಮಾ ಆಡಳಿತ ನೀಡಿದ್ದ ಅನುಮತಿಯನ್ನು ಅಧ್ಯಕ್ಷ ಟ್ರಂಪ್ ರದ್ದುಗೊಳಿಸುವ ಚಿಂತನೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಇದರಿಂದಾಗಿ ಸಾವಿರಾರು ಭಾರತೀಯ ಉದ್ಯೋಗಿಗಳಿಗೆ ಮತ್ತು ಕುಟುಂಬಗಳಿಗೆ ಹೊಡೆತ ಬೀಳಲಿದೆ ಎಂದು ವರದಿ ತಿಳಿಸಿದೆ.
2015 ರಿಂದಲೂ, ಎಚ್ 1ಬಿ ಯ ವೀಸಾ ಅಥವಾ ಹೆಚ್ಚಿನ-ನುರಿತ ವೀಸಾ ಹೊಂದಿರುವವರು ಗ್ರೀನ್ ಕಾರ್ಡ್ಗಾಗಿ ಕಾಯುತ್ತಿದ್ದು ಅವರು ಎಚ್ -4 ವೀಸಾಗಳಲ್ಲಿ ಅಮೆರಿಕಾದಲ್ಲಿ ಕೆಲಸ ಮಾಡಲು ಅರ್ಹತೆ ಹೊಂದಿರುತ್ತಾರೆ. ಹಾಗಾಗಿ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಆಡಳಿತವು ಈ ನಿಯಮವನ್ನು ಸೇರಿಸಿತ್ತು ಎಂದು ಸಿಎನ್ ಎನ್ ವರದಿ ಮಾಡಿದೆ.
2016ರಲ್ಲಿ 41ಸಾವಿರಕ್ಕೂ ಅಧಿಕ ಎಚ್ 4 ವೀಸಾ ಹೊಂದಿರುವವರಿಗೆ ಉದ್ಯೋಗ ಮಾಡಲು ಅವಕಾಶ ನೀಡಲಾಗಿತ್ತು. ಈ ವರ್ಷದ ಜೂನ್ ವರೆಗೆ 36000 ಎಚ್ 4 ವೀಸಾ ಉದ್ಯೋಗ ಮಾಡಲು ಅವಕಾಶ ಪಡೆದಿದ್ದಾರೆ.
ಎಚ್ 1 ಬಿ ವೀಸಾ ವಿದೇಶಿ ನುರಿತ ಕೆಲಸಗಾರರನ್ನು ಅಮೆರಿಕದತ್ತ ಹೆಚ್ಚು ಸೆಳೆಯುತ್ತಿತ್ತು. ಇದರಿಂದಾಗಿ ಅಮೆರಿಕಕ್ಕೆ ಭಾರತ ಮತ್ತು ಚೀನಾದಿಂದ ಹೆಚ್ಚು ಮಂದಿ ಉದ್ಯೋಗ ಅರಸಿ ಬರುತ್ತಿದ್ದರು ಎಂದು ವರದಿಯೊಂದು ಹೇಳಿದೆ.