ನವದೆಹಲಿ: Earthquake Analysis - ವಿಶ್ವಾದ್ಯಂತ ಪ್ರತಿವರ್ಷ ಸಾವಿರಾರು ಸಣ್ಣ ಮತ್ತು ದೊಡ್ಡ ಭೂಕಂಪನಗಳು ಸಂಭವಿಸುತ್ತಲೇ ಇರುತ್ತವೆ. ಏತನ್ಮಧ್ಯೆ, ಹಿಮಾಚಲ ಪ್ರದೇಶದ ಭಾನುವಾರ ಭೂಮಿ ಕಂಪಿಸಿದ ಅನುಭವವಾಗಿದೆ. ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆಯನ್ನು 3.2 ಎಂದು ಅಳೆಯಲಾಗಿದೆ. ಇದೇ ವೇಳೆ , ಈ ಭೂಕಂಪದ ಕೇಂದ್ರ ಬಿಲಾಸ್ಪುರದಲ್ಲಿಟ್ಟು ಎಂದು ವರದಿಯಾಗಿದೆ. ಇದಕ್ಕೂ ಮೊದಲು ದೆಹಲಿ-ಎನ್‌ಸಿಆರ್, ಜಮ್ಮು ಮತ್ತು ಕಾಶ್ಮೀರ, ಉತ್ತರಾಖಂಡ್, ಹಿಮಾಚಲ ಮತ್ತು ಪಂಜಾಬ್ ಸೇರಿದಂತೆ ಉತ್ತರ ಭಾರತದ ಹಲವಾರು ರಾಜ್ಯಗಳಲ್ಲಿ ಭೂಕಂಪನದ ಅನುಭವಗಳಾಗಿವೆ .
ದೊಡ್ಡ ಅನಾಹುತದ ಸಂಕೇತವೇ?
ಇಂತಹುದರಲ್ಲಿ ಕೇವಲ 72 ಗಂಟೆಗಳ ಅವಧಿಯಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಭೂ ಕಂಪಿಸಿದ ಕಾರಣ ಅಲ್ಲಿ ವಾಸಿಸುವ ಜನರಲ್ಲಿ ಭೀತಿಯ ವಾತಾವರಣ ಸೃಷ್ಟಿಯಾಗಿದೆ. ಮೂರು ದಿನಗಳ ಒಳಗೆ ಮೂರು ಭೂಕಂಪದ ಅನುಭವಗಳ ಹಿನ್ನೆಲೆ, ಇದು ಮುಂದೆ ಸಂಭವಿಸಲಿರುವ ದೊಡ್ಡ ಅನಾಹುತದ ಮುನ್ಸೂಚನೆಯೇ ಎಂಬ ಮಾತುಗಳು ಕೇಳಿಬಂದಿವೆ. ಕಳೆದ ಶುಕ್ರವಾರ ದೆಹಲಿಯಲ್ಲಿ ರಿಕ್ಟರ್ ಮಾಪಕದಲ್ಲಿ 6.3 ತೀವ್ರತೆಯ ಭೂಕಂಪ ಸಂಭವಿಸಿತ್ತು. ಈ ಭೂಕಂಪದ ಕೇಂದ್ರ ತಜಕಿಸ್ತಾನ್ ನಲ್ಲಿತ್ತು. ಭೂಕಂಪ ಯಾವಾಗ ಎಲ್ಲಿ ಮತ್ತು ಎಷ್ಟು ತೀವ್ರತೆಯಿಂದ ಸಂಭವಿಸಲಿದೆ ಎಂಬುದರ ಅಂದಾಜು ವ್ಯಕ್ತಪಡಿಸುವುದು ಸದ್ಯದ ಪರಿಸ್ಥಿತಿಯಲ್ಲಿ ಸಾಧ್ಯವಿಲ್ಲ. ಹೀಗಾಗಿ ಪ್ರಸ್ತುತ ಭೂವಿಜ್ಞಾನಿಗಳು ಮತ್ತೊಮ್ಮೆ ವಿಪತ್ತಿನ ಸ್ಥಿತಿಯನ್ನು ನಿಯಂತ್ರಿಸಲು ಉಚಿತ ವಿಪತ್ತು ನಿರ್ವಹಣಾ ನೀತಿ ರೂಪಿಸುವುದರ ಮೇಲೆ ಒತ್ತು ನೀಡಿದ್ದಾರೆ.
ನ್ಯೂಜಿಲ್ಯಾಂಡ್ ನಲ್ಲಿ ನಡುಗಿದ ಭೂಮಿ
ನ್ಯೂಜಿಲ್ಯಾಂಡ್ ನಲ್ಲಿ ಫೆಬ್ರುವರಿ 11ರಂದು ರಿಕ್ಟರ್ ಮಾಪಕದಲ್ಲಿ 7.7 ತೀವ್ರತೆಯ ಭೂಕಂಪ ಸಂಭವಿಸಿತ್ತು. ಇದಾದ ಬಳಿಕ ಅಲ್ಲಿ ಸುನಾಮಿ ಮುನ್ನೆಚ್ಚರಿಗೆ ಜಾರಿಗೊಳಿಸಲಾಗಿತ್ತು. ಈ ಭೂಕಂಪದ ಎಪಿಸೆಂಟರ್ ಲಾಯಲ್ಟಿ ದ್ವೀಪ ಸಮೂಹದಿಂದ ದಕ್ಷಿಣ-ಪೂರ್ವದ 10 ಕೀ.ಮೀ ಆಳದಲ್ಲಿತ್ತು. ಈ ಭೂಕಂಪ ನೆರೆ ರಾಷ್ಟ್ರ ಆಸ್ಟ್ರೇಲಿಯಾ ಮೇಲೆ ಪ್ರಭಾವ ಬೀರಿತ್ತು.
ಉತ್ತರ ಭಾರತದಲ್ಲಿ ಭೀತಿಯ ವಾತಾವರಣ
ನ್ಯೂಜಿಲ್ಯಾಂಡ್ ನಲ್ಲಿ ಸಂಭವಿಸಿದ್ದ ಭೂಕಂಪದ ಮಾರನೆ ದಿನ ಉತ್ತರ ಭಾರತದ ಹಲವು ಭಾಗಗಳಲ್ಲಿ ಭೂಮಿ ಕಂಪಿಸಿದೆ. ಇದರ ತೀವ್ರತಿ 6.3ರಷ್ಟಿತ್ತು ಮತ್ತು ಇದರ ಕೇಂದ್ರ ಬಿಂದು ಕಜಾಕಿಸ್ತಾನ್ ನಲ್ಲಿತ್ತು.
ಇದನ್ನು ಓದಿ- Earthquake in Delhi-NCR: ರಾಷ್ಟ್ರ ರಾಜಧಾನಿಯನ್ನು ತಲ್ಲಣಗೊಳಿಸಿದ ಭೂಕಂಪ
ಜಪಾನ್ ನಲ್ಲಿ 90 ಸೆಕೆಂಡ್ ಗಳ ಕಾಲ ನಡುಗಿದ ಭೂಮಿ
ವಿಶ್ವದಲ್ಲಿ ಸಂಭವಿಸಿದ ಈ ಎರಡು ದೊಡ್ಡ ಭೂಕಂಪಗಳ ಬಳಿಕ ಜಪಾನ್ ನಲ್ಲಿ 7.1 ತೀವ್ರತೆಯ ಭೂಕಂಪ(Earthquake) ಸಂಭವಿಸಿದ ಕಾರಣ ಭಾರಿ ಸಂಚಲನ ಸೃಷ್ಟಿಯಾಗಿದೆ. ಈ ಭೂಕಂಪದ ಕಾರಣ ಸುಮಾರು ಒಂದೂವರೆ ನಿಮಿಷಗಳ ಕಾಲ ಭೂಮಿ ನಡುಗಿದೆ.
ಇದನ್ನು ಓದಿ- Earthquake: ಫಿಲಿಪೈನ್ಸ್‌ನ ರಾಜಧಾನಿ ಮನಿಲಾದಲ್ಲಿ 6.2 ತೀವ್ರತೆಯ ಭೂಕಂಪ, ದೆಹಲಿಯಲ್ಲೂ ಕಂಪಿಸಿದ ಭೂಮಿ
ಇದು ಚಂಡಮಾರುತದ ಮೊದಲಿನ ಮೌನವೇ?
ವಿಶ್ವದ ವಿವಿಧ ಭಾಗಗಳಲ್ಲಿ ಸಂಭವಿಸಿದ ಈ ಮೂರು ದೊಡ್ಡ ಭೂಕಂಪಗಳ ಬಳಿಕ ನೈಸರ್ಗಿಕ ವಿಪತ್ತಿನ ಕುರಿತು ಅಂದಾಜುಗಳು ಬಲಗೂಳುತ್ತಿವೆ. ಮುಂದಿನ ಸಂಭಾವ್ಯ ದೊಡ್ಡ ಅನಾಹುತದ ಭಯ ಇದೀಗ ಹಲವರಿಗೆ ಕಾಡಲಾರಂಭಿಸಿದೆ. ಇದೆಲ್ಲವೂ ಬಿರುಗಾಳಿಯ ಮುಂಚಿನ ನಿರವ ಮೌನದ ಸಂಕೇತವಂತೂ ಅಲ್ಲವಲ್ಲ? ಎನಿಸಲಾರಂಭಿಸಿದೆ. ಈ ಕುರಿತು ಮಾತನಾಡಿರುವ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಭೂವಿಜ್ಞಾನ ವಿಭಾಗದ ಪ್ರೊಫೆಸ್ಸರ್ ಡಾ. ಸುಮಿತ್ರಾ ಮುಖರ್ಜಿ, ಭೂಕಂಪ ಸಂಭವಿಸುವ ಮೊದಲು ಭೂಮಿಯ ಮೇಲೆ ಹಲವು ಪರಿವರ್ತನೆಗಳಾಗುತ್ತವೆ ಮತ್ತು ಅವುಗಳ ಅಂದಾಜು ವ್ಯಕ್ತಪಡಿಸಬಹುದು ಎಂದಿದ್ದಾರೆ.
ಇದನ್ನು ಓದಿ-Indonesia Earthquake 2021: ಇಂಡೊನೆಷ್ಯಾದಲ್ಲಿ ಪ್ರಬಲ ಭೂಕಂಪ, 7 ಸಾವು 100 ಕ್ಕೂ ಅಧಿಕ ಜನರಿಗೆ ಗಾಯ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.