ಭಾರತದ ಆರ್ಥಿಕ ಪ್ರಗತಿಯನ್ನು ಹೊಗಳಿದ ವಿಶ್ವದ ದೊಡ್ಡಣ್ಣ

            

Last Updated : Nov 11, 2017, 10:37 AM IST
ಭಾರತದ ಆರ್ಥಿಕ ಪ್ರಗತಿಯನ್ನು ಹೊಗಳಿದ ವಿಶ್ವದ ದೊಡ್ಡಣ್ಣ title=

ವಿಯೆಟ್ನಾಂ: ಭಾರತವು ಆರ್ಥಿಕ ಕ್ಷೇತ್ರದಲ್ಲಿ ಗಮನಾರ್ಹ ಪ್ರಗತಿಯನ್ನು ಕಾಣುತ್ತಿರುವ ದೇಶ ಎಂದು ವಿಶ್ವದ ದೊಡ್ಡಣ್ಣ ಅಮೇರಿಕಾ ಅಧ್ಯಕ್ಷ ಟ್ರಂಪ್ ಹೊಗಳಿದ್ದಾರೆ.

ವಿಯಾಟ್ನಮಿನಲ್ಲಿ ಅಪೇಕ್ ಶೃಂಗ ಸಭೆಯಲ್ಲಿ ಬಹುರಾಷ್ಟ್ರೀಯ ಕಂಪನಿಗಳ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳನ್ನು  ಉದ್ದೇಶಿಸಿ ಮಾತನಾಡಿದ ಟ್ರಂಪ್, ತನ್ನ 70 ವರ್ಷಗಳ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಕೊಂಡಿರುವ ಭಾರತ, ಕಳೆದ ಏಳು ದಶಕಗಳಲ್ಲಿ  ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆಯಾಗಿ ಮಾರ್ಪಟ್ಟಿದೆ ಎಂದು ತಿಳಿಸಿದರು.

90ರ ದಶಕದಲ್ಲಿ ಭಾರತದ ಆರ್ಥಿಕ ಉದಾರೀಕರಣದ ನಂತರ ಅದರ ಸಂಪೂರ್ಣ ಆರ್ಥಿಕ ವ್ಯವಸ್ಥೆಯು ತೀವ್ರಗತಿಯಲ್ಲಿ ಮುನ್ನಡೆ ಸಾಧಿಸಿದೆ. 130 ಕೋಟಿಯಷ್ಟು  ಜನಸಂಖ್ಯೆಯನ್ನು ಹೊಂದಿರುವ ಇಂತಹ ದೊಡ್ಡ ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಇಂದಿನ ಪ್ರಧಾನಮಂತ್ರಿಗಳು ಸಹ ಪೂರಕವಾಗಿ ಶ್ರಮಿಸುತ್ತಿದ್ದಾರೆ ಎಂದು ಟ್ರಂಪ್ ಮೋದಿಯನ್ನು ಶ್ಲಾಘಿಸಿದರು.

ಇದೇ ಸಂದರ್ಭದಲ್ಲಿ  ಇಂಡೋ-ಫೆಸಿಪಿಕ್ ನಂತಹ ಅಮೇರಿಕಾದ ಮಿತ್ರ ದೇಶಗಳೂ ಕೂಡ ಆರ್ಥಿಕ ಪ್ರಗತಿಯಲ್ಲಿ  ಮುನ್ನಡೆ ಸಾಧಿಸುತ್ತಿವೆ ಎಂದು ಟ್ರಂಪ್ ಹೇಳಿದರು.

ಭಾನುವಾರ ಫಿಲಿಪೈನ್ಸ್ ನಲ್ಲಿ ಜರುಗಲಿರುವ ಇಂಡೋ ಅಸಿಯಾನ್ ಹಾಗೂ ಪೂರ್ವ ಏಷ್ಯಾ ಶೃಂಗ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅಮೆರಿಕಾದ ಅಧ್ಯಕ್ಷ ಟ್ರಂಪ್ರನ್ನು ಭೇಟಿ ಮಾಡಿ ಭಾರತ ಮತ್ತು ಅಮೆರಿಕಾದ ದ್ವೀಪಕ್ಷಿಯ  ಸಂಬಂಧಗಳ ಕುರಿತಾಗಿ ಚರ್ಚಿಸುವ ಸಾಧ್ಯತೆ ಇದೆ.

Trending News