ಈ ನಗರದಲ್ಲಿ Recharge Planಗಿಂತಲೂ ಕಡಿಮೆ ದರದಲ್ಲಿ ಸಿಗುತ್ತೆ ಮನೆ, ಕಾರಣ ಏನು ಗೊತ್ತಾ..!

ಮನೆ ಕಟ್ಟಿ ನೋಡು, ಮದುವೆ ಮಾಡಿ ನೋಡು ಅಂತ ಹಿರಿಯರು ಹೇಳುತ್ತಾರೆ. ಇತ್ತೀಚಿನ ದಿನಗಳಲ್ಲಿ ಮನೆ ಕಟ್ಟುವುದಿದರಲಿ ಜಾಗ ಕೊಳ್ಳುವುದೂ ಕೂಡ ಕನಸಿನ ಮಾತಾಗಿದೆ.

Last Updated : Nov 23, 2020, 08:42 AM IST
  • ಮನೆ ಸಾಮಾನ್ಯವಾಗಿ ಲಕ್ಷಾಂತರ ಕೋಟಿ ಮೌಲ್ಯದ್ದಾಗಿರುತ್ತದೆ.
  • ವಿಶ್ವದ ಈ ನಗರದಲ್ಲಿ ಅವುಗಳ ಬೆಲೆ 100 ರೂ.ಗಿಂತ ಕಡಿಮೆ.
  • ಇಷ್ಟು ಕಡಿಮೆ ಬೆಲೆಗೆ ಕಾರಣವನ್ನು ಇಲ್ಲಿನ ಮೇಯರ್ ವಿವರಿಸಿದ್ದಾರೆ
ಈ ನಗರದಲ್ಲಿ Recharge Planಗಿಂತಲೂ ಕಡಿಮೆ ದರದಲ್ಲಿ ಸಿಗುತ್ತೆ ಮನೆ, ಕಾರಣ ಏನು ಗೊತ್ತಾ..! title=

ಬೆಂಗಳೂರು: ತಮ್ಮದೇ ಆದ ಸುಂದರವಾದ ಮನೆ ಹೊಂದುವುದು ಪ್ರತಿಯೊಬ್ಬರ ಕನಸಾಗಿರುತ್ತದೆ. ಮನೆ ಕಟ್ಟಿ ನೋಡು, ಮದುವೆ ಮಾಡಿ ನೋಡು ಅಂತ ಹಿರಿಯರು ಹೇಳುತ್ತಾರೆ. ಇತ್ತೀಚಿನ ದಿನಗಳಲ್ಲಿ ಮನೆ ಕಟ್ಟುವುದಿದರಲಿ ಜಾಗ ಕೊಳ್ಳುವುದೂ ಕೂಡ ಕನಸಿನ ಮಾತಾಗಿದೆ. ನಮ್ಮದೇ ಆದ ಒಂದು ಸ್ವಂತ ಮನೆ ಕೊಳ್ಳಲು/ನಿರ್ಮಿಸಲು ಇಡೀ ಜೀವಮಾನ ದುಡಿದರೂ ಸಾಕಾಗುವುದಿಲ್ಲ. ಅದಾಗ್ಯೂ ವಿಶ್ವದ ಸುಂದರ ನಗರದಲ್ಲಿ ನಿಮ್ಮ ಫೋನ್‌ನ ರೀಚಾರ್ಜ್ ಪ್ಲಾನ್‌ಗಿಂತ ಕಡಿಮೆ ದರದಲ್ಲಿ ಮನೆ (Home) ಕೊಳ್ಳಬಹುದು ಎಂದು ನಿಮಗೆ ತಿಳಿದಿದೆಯೇ? 

ಈ ಜಗತ್ತಿನಲ್ಲಿ ಅಂತಹ ಒಂದು ಸ್ಥಳವಿದೆ ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗದೇ ಇರದು... ಅಲ್ಲಿ ಕೇವಲ 87 ರೂಪಾಯಿಗಳಿಗೆ ಮನೆಗಳು ಲಭ್ಯವಿದೆ. ಆದರೆ ಯಾರೂ ಇಲ್ಲಿ ಉಳಿಯಲು ಬಯಸುವುದಿಲ್ಲ ಎಂಬುದು ಅಚ್ಚರಿಯ ಸಂಗತಿ. ಈ ನಗರದ ಹೆಸರು ಸಲೆಮಿ, ಇದು ಇಟಲಿಯ ಸಿಸಿಲಿ ದ್ವೀಪದಲ್ಲಿದೆ. ಇದೊಂದು ಐತಿಹಾಸಿಕ ಸ್ಥಳವಾಗಿದೆ. ಅಲ್ಲಿನ ಕೆಲವು ಮನೆಗಳು 16ನೇ ಶತಮಾನಕ್ಕೆ ಸೇರಿದ್ದಾಗಿದೆ. ಆದಾಗ್ಯೂ 1968ರಲ್ಲಿ ಸಂಭವಿಸಿದ ಭೂಕಂಪದ ನಂತರ ನಗರವು ಸಾಕಷ್ಟು ಹಾನಿಗೊಳಗಾಯಿತು.

ಎಚ್ಚರ: ಫ್ಲ್ಯಾಟ್‌ಗಳ ಬೆಲೆ ಕಡಿಮೆ ಮಾಡದಿದ್ದರೆ ಬಿಲ್ಡರ್‌ಗಳ ಮೇಲೆ ಕ್ರಮ!

ವಿಶೇಷ ಕೊಡುಗೆ ನೀಡಿದ ಮೇಯರ್ :-
ವರದಿಯ ಪ್ರಕಾರ ಈ ಇಟಲಿ (Italy) ನಗರವು ಕಳೆದ ಕೆಲವು ವರ್ಷಗಳಿಂದ ಕೆಲವು ಜಟಿಲ ಸಮಸ್ಯೆಯನ್ನು ಎದುರಿಸುತ್ತಿದೆ. ಈ ಕಾರಣಕ್ಕಾಗಿ ಮನೆಗಳನ್ನು ಬಹಳ ಅಗ್ಗದ ದರದಲ್ಲಿ ಮಾರಾಟ ಮಾಡಲಾಗುತ್ತಿದೆ, ಅಂದರೆ ಕೇವಲ ಒಂದು ಯೂರೋನ ಆರಂಭಿಕ ಬೆಲೆಯಲ್ಲಿ ಇಲ್ಲಿ ಮನೆ ಮಾರಾಟ ಮಾಡಲಾಗುತ್ತಿದೆ. ಅತ್ಯಂತ ಮುಖ್ಯವಾದ ವಿಷಯವೆಂದರೆ ಅತ್ಯುತ್ತಮವಾದ ರಸ್ತೆ, ವಿದ್ಯುತ್ ಗ್ರಿಡ್ ಮತ್ತು ಒಳಚರಂಡಿ ಕೊಳವೆಗಳವರೆಗೆ ಎಲ್ಲಾ ಮೂಲ ಸೌಲಭ್ಯಗಳು ಮತ್ತು ಸೇವೆಗಳು ಇಲ್ಲಿ ಲಭ್ಯವಿದೆ.

ನಗರದ ಮೇಯರ್ ಡೊಮೆನಿಕೊ ವೇನುತಿ ಮಾತನಾಡಿ, ಪಟ್ಟಣಗಳನ್ನು ಮೊದಲಿನಂತೆ ಜನಸಂದಣಿ ಪ್ರದೇಶವನ್ನಾಗಿ ಮಾಡುವ ಪ್ರಯತ್ನದಲ್ಲಿ ಕಡಿಮೆ ವೆಚ್ಚದಲ್ಲಿ ಮನೆಗಳನ್ನು ಒದಗಿಸಲಾಗುತ್ತಿದೆ, ಏಕೆಂದರೆ ಇಲ್ಲಿನ ಜನರು ನಿರಂತರವಾಗಿ ಈ ಸ್ಥಳವನ್ನು ತೊರೆದು ಬೇರೆಡೆ ನೆಲೆಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

 ಈ 8 ಬ್ಯಾಂಕುಗಳಿಂದ ಕಡಿಮೆ ಬಡ್ಡಿದರದಲ್ಲಿ Home Loan ಆಫರ್

ಸಮಸ್ಯೆಗಳನ್ನು ಹೆಚ್ಚಿಸಿದ ಕರೋನಾ:
ಈ ಯೋಜನೆಗೆ ಸರ್ಕಾರ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದೆ. ಆದರೆ ಈ ಮಧ್ಯೆ ಕರೋನವೈರಸ್ (Coronavirus) ಬಂದಿತು. ಇದರಿಂದಾಗಿ ಕೆಲವು ಸಮಸ್ಯೆಗಳು ಪ್ರಾರಂಭವಾದವು. ಈ ಎಲ್ಲಾ ಮನೆಗಳು ಸಿಟಿ ಕೌನ್ಸಿಲ್‌ಗೆ ಸೇರಿವೆ. ಆದ್ದರಿಂದ ಅವುಗಳ ಮಾರಾಟ ವಿಳಂಬವಾಗುವುದಿಲ್ಲ. 2018 ರ ಆರಂಭದಲ್ಲಿ ಇಟಲಿಯ ಓಲೋಲಿ ನಗರದಲ್ಲಿ ಮನೆಗಳ ಬೆಲೆಯನ್ನು ಕೇವಲ 84 ರೂಪಾಯಿಗೆ ನಿಗದಿಗೊಳಿಸಲಾಯಿತು. ಓಲೋಲಿಯಲ್ಲೂ ಕೂಡ ಇದೇ ರೀತಿಯ ಕೆಲವು ಸಂದರ್ಭಗಳು ಸೃಷ್ಟಿಯಾಗಿದ್ದವು. ಈ ನಗರದ ಜನಸಂಖ್ಯೆಯು ವೇಗವಾಗಿ ಕಡಿಮೆಯಾಗುತ್ತಿತ್ತು. ಇದರಿಂದಾಗಿ ನಗರ ನಾಶವಾಗುವ ಅಪಾಯವಿತ್ತು ಎಂಬುದು ಗಮನಾರ್ಹ.

Trending News