Monkeypox ಅತ್ಯಂತ ಅಪಾಯಕಾರಿ ಪ್ರಕರಣ ಪತ್ತೆ, ಕೊಳೆತು ಹೋಗುತ್ತೆ ದೇಹದ ಒಂದೊಂದೇ ಭಾಗ!

Monkeypox Virus Rare Case: ಜಗತ್ತಿನಲ್ಲಿ ಮಂಕಿಪಾಕ್ಸ್ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಕ್ರಮೇಣ ಈ ರೋಗವು 90 ಕ್ಕೂ ಹೆಚ್ಚು ದೇಶಗಳಿಗೆ ಹರಡಿತು. ಪ್ರತಿದಿನ ಇದರ ಬಗ್ಗೆ ಹೊಸ ಹೊಸ ಮಾಹಿತಿಗಳು ಪ್ರಕಟವಾಗುತ್ತಿವೆ, ಹೊಸ ಲಕ್ಷಣಗಳು ಕಂಡು ಬರುತ್ತಿವೆ.

Written by - Chetana Devarmani | Last Updated : Aug 19, 2022, 09:48 AM IST
  • ಜಗತ್ತಿನಲ್ಲಿ ಮಂಕಿಪಾಕ್ಸ್ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ
  • ಮಂಕಿಪಾಕ್ಸ್ ಅತ್ಯಂತ ಅಪಾಯಕಾರಿ ಪ್ರಕರಣ ಪತ್ತೆ
  • ಕೊಳೆತು ಹೋಗುತ್ತೆ ದೇಹದ ಒಂದೊಂದೇ ಭಾಗ
Monkeypox ಅತ್ಯಂತ ಅಪಾಯಕಾರಿ ಪ್ರಕರಣ ಪತ್ತೆ, ಕೊಳೆತು ಹೋಗುತ್ತೆ ದೇಹದ ಒಂದೊಂದೇ ಭಾಗ!  title=
ಮಂಕಿಪಾಕ್ಸ್

Monkeypox Virus Rare Case: ಜಗತ್ತಿನಲ್ಲಿ ಮಂಕಿಪಾಕ್ಸ್ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಕ್ರಮೇಣ ಈ ರೋಗವು 90 ಕ್ಕೂ ಹೆಚ್ಚು ದೇಶಗಳಿಗೆ ಹರಡಿತು. ಪ್ರತಿದಿನ ಇದರ ಬಗ್ಗೆ ಹೊಸ ಹೊಸ ಮಾಹಿತಿಗಳು ಪ್ರಕಟವಾಗುತ್ತಿವೆ, ಹೊಸ ಲಕ್ಷಣಗಳು ಕಂಡು ಬರುತ್ತಿವೆ. ಹೆಚ್ಚುತ್ತಿರುವ ಅಪಾಯದ ದೃಷ್ಟಿಯಿಂದ, ನಿರಂತರ ಸಂಶೋಧನೆಯೂ ನಡೆಯುತ್ತಿದೆ. ಈ ಮಧ್ಯೆ ಮಂಗನ ಕಾಯಿಲೆಯ ಅತ್ಯಂತ ಆಘಾತಕಾರಿ ಪ್ರಕರಣವೊಂದು ಮುನ್ನೆಲೆಗೆ ಬಂದಿದೆ. ಈ ವೇಳೆ ಮಂಗನ ಕಾಯಿಲೆಯಿಂದ ಬಳಲುತ್ತಿದ್ದ ವ್ಯಕ್ತಿಯ ಮೂಗು ಕೊಳೆಯಲಾರಂಭಿಸಿದೆ. ಈ ರೋಗಿಯನ್ನು ನೋಡಿ ವೈದ್ಯರೂ ಅಚ್ಚರಿಗೊಂಡಿದ್ದಾರೆ. ಸದ್ಯ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. 

ಮೊದಲು ಕೆಂಪು ಕಲೆಗಳು, ನಂತರ ಕೊಳೆಯುತ್ತಿರುವ ಮೂಗು : 

ವರದಿಯ ಪ್ರಕಾರ, ಜರ್ಮನಿಯಲ್ಲಿ ವಾಸಿಸುವ 40 ವರ್ಷದ ವ್ಯಕ್ತಿಯೊಬ್ಬರು ಕೆಲವು ದಿನಗಳ ಹಿಂದೆ ಮೂಗಿನ ಮೇಲೆ ಕೆಂಪು ಚುಕ್ಕೆಯನ್ನು ಗಮನಿಸಿದ್ದಾರೆ. ಕೂಡಲೇ ವೈದ್ಯರ ಬಳಿ ಹೋಗಿ ಸಮಸ್ಯೆ ಹೇಳಿಕೊಂಡರು. ದದ್ದು ನೋಡಿದ ಡಾಕ್ಟರು ಸನ್ ಬರ್ನ್ ಆಗಿದೆ ಅಂದರು. ಕೆಲವು ದಿನಗಳ ನಂತರ, ವ್ಯಕ್ತಿಯ ಸ್ಥಿತಿಯು ಹದಗೆಟ್ಟಿತು ಮತ್ತು ಮೂಗಿನ ಮೇಲಿನ ಕೆಂಪು ಚುಕ್ಕೆ ಕಪ್ಪು ಬಣ್ಣಕ್ಕೆ ತಿರುಗಿತು ಮತ್ತು ದೊಡ್ಡ ಗಾಯದ ರೂಪವನ್ನು ಪಡೆಯಿತು. ಅವನ ಮೂಗು ಕೊಳೆಯಲು ಪ್ರಾರಂಭಿಸಿತು. ಅದರ ನಂತರ ಅವರು ಮತ್ತೆ ವೈದ್ಯರ ಬಳಿಗೆ ಹೋದರು.

ಇದನ್ನೂ ಓದಿ: Egypt Church Fire: ಈಜಿಪ್ಟ್ ನ ಚರ್ಚ್ ನಲ್ಲಿ ಭೀಕರ ಅಗ್ನಿ ಆಕಸ್ಮಿಕ, 41 ಜನರ ದುರ್ಮರಣ

ಮಂಕಿಪಾಕ್ಸ್ ವರದಿ ಪಾಸಿಟಿವ್ ಬಂದಿದೆ : 

ವೈದ್ಯಕೀಯ ಜರ್ನಲ್ ಇನ್ಫೆಕ್ಷನ್ ಪ್ರಕಾರ, ವೈದ್ಯರು ಅವರ ಮೂಗು ಹೊರತುಪಡಿಸಿ ಇಡೀ ದೇಹದಲ್ಲಿ ಕೀವು ತುಂಬಿದ ಹುಣ್ಣುಗಳನ್ನು ಕಂಡುಕೊಂಡರು, ವಿಶೇಷವಾಗಿ ಅವರ ಬಾಯಿಯ ಸುತ್ತಲೂ ಮತ್ತು ಅವರ ಖಾಸಗಿ ಭಾಗಗಳಲ್ಲಿ. ಇದಾದ ನಂತರ ಅವರನ್ನು ಮಂಕಿಪಾಕ್ಸ್‌ ಪರೀಕ್ಷೆಗೆ ಒಳಪಡಿಸಲಾಗಿದ್ದು, ಅವರ ವರದಿಯು ಪಾಸಿಟಿವ್ ಬಂದಿದೆ. ಮಂಕಿಪಾಕ್ಸ್ ದೃಢಪಟ್ಟ ತಕ್ಷಣ ವೈದ್ಯರು ಚಿಕಿತ್ಸೆ ಆರಂಭಿಸಿದರು. ಪರಿಹಾರಕ್ಕಾಗಿ, ಅವರಿಗೆ ಆಂಟಿವೈರಲ್ ನೀಡಲಾಯಿತು.

ಏಡ್ಸ್ ಮತ್ತು ಸಿಫಿಲಿಸ್ ಕೂಡ ದೃಢಪಟ್ಟಿದೆ : 

ವೈದ್ಯರು ಚಿಕಿತ್ಸೆಯನ್ನು ಮುಂದುವರೆಸಿದರು ಮತ್ತು ಅವರ STI ಪರೀಕ್ಷೆಯನ್ನು ಸಹ ಮಾಡಲಾಯಿತು. ಅದರ ವರದಿ ಬಂದಾಗ ಸಮಸ್ಯೆಗಳು ಮತ್ತಷ್ಟು ಹೆಚ್ಚಿದ್ದವು. ವಾಸ್ತವವಾಗಿ, ಈ ರೋಗಿಯಲ್ಲಿ ಎಚ್ಐವಿ ಮತ್ತು ಸಿಫಿಲಿಸ್ ಎರಡನ್ನೂ ದೃಢಪಡಿಸಲಾಗಿದೆ. ಸಿಫಿಲಿಸ್ ಅವರ ಅಂಗಗಳಲ್ಲಿ ತುಂಬಾ ಹರಡಿದೆ. ಮುಂದಿನ ಪರೀಕ್ಷೆಗಳಲ್ಲಿ, ಎಚ್ಐವಿ ಏಡ್ಸ್‌ ಕೂಡ ದೃಢಪಟ್ಟಿತು. ಆಂಟಿವೈರಲ್ ಔಷಧಿಯಿಂದ ಅವರ ಚರ್ಮದ ಗಾಯಗಳು ಒಣಗಿವೆ ಎಂದು ವೈದ್ಯರು ಹೇಳುತ್ತಾರೆ. ಆದರೆ ಅವರ ಮೂಗಿನ ಗಾಯ ಮಾತ್ರ ವಾಸಿಯಾಗಲೇ ಇಲ್ಲ. ಇಷ್ಟೊಂದು ಗಂಭೀರವಾದ ಮಂಕಿಪಾಕ್ಸ್ ಇನ್ನೂ ಮುನ್ನೆಲೆಗೆ ಬಂದಿಲ್ಲವಾದರೂ ರೋಗಿ ಏಡ್ಸ್ ಮತ್ತು ಸಿಫಿಲಿಸ್ ನಿಂದ ಬಳಲುತ್ತಿರುವುದೇ ಇದರ ಗಂಭೀರತೆಗೆ ಕಾರಣ ಎನ್ನುತ್ತಾರೆ ವೈದ್ಯರು.

ಇದನ್ನೂ ಓದಿ: UK PM Race: ಸೋಲನ್ನು ಒಪ್ಪಿಕೊಳ್ಳುತ್ತೇನೆ, ಆದರೆ ಸುಳ್ಳು ಭರವಸೆ‌ ನೀಡಲ್ಲ - ರಿಷಿ ಸುನಕ್

ಸಿಫಿಲಿಸ್ ಎಂದರೇನು?

ಸಿಫಿಲಿಸ್ ಒಂದು ಬ್ಯಾಕ್ಟೀರಿಯಾದ ಸೋಂಕು. ಇದು ಸಾಮಾನ್ಯವಾಗಿ ಸೋಂಕಿತ ವ್ಯಕ್ತಿಯೊಂದಿಗೆ ಲೈಂಗಿಕ ಕ್ರಿಯೆಯಿಂದ ಹರಡುತ್ತದೆ. ಇದಕ್ಕೆ ಕಾರಣವಾಗುವ ಬ್ಯಾಕ್ಟೀರಿಯಾವನ್ನು ಟ್ರೆಪೋನೆಮಾ ಪ್ಯಾಲಿಡಮ್ ಎಂದು ಕರೆಯಲಾಗುತ್ತದೆ. ಇದು ಸೋಂಕಿತ ವ್ಯಕ್ತಿಯೊಂದಿಗೆ ಯೋನಿ, ಮೌಖಿಕ/ಗುದ ಸಂಭೋಗದಿಂದ ಅಥವಾ ಸೋಂಕಿತ ವ್ಯಕ್ತಿಯೊಂದಿಗೆ ಲೈಂಗಿಕ ಆಟಿಕೆಯನ್ನು ಹಂಚಿಕೊಳ್ಳುವ ಮೂಲಕ ಹರಡುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News