WhatsApp, Zoom, Google Duo ಗೆ ಸೆಡ್ಡು ಹೊಡೆಯಲು ಮುಂದಾದ Telegram

ಗ್ರೂಪ್ ವಿಡಿಯೋ ಕಾಲಿಂಗ್ ರೇಸ್ ನಲ್ಲಿ ಇದೀಗ ಸುರಕ್ಷಿತ ಸಂದೇಶ ರವಾನಿಕೆಗೆ ಖ್ಯಾತವಾಗಿರುವ ಮೆಸ್ಸೇಜಿಂಗ್ ಆಪ್ ಟೆಲಿಗ್ರಾಂ ಕೂಡ ಧುಮುಕಿದೆ. ಈ ಕುರಿತು ಘೋಷಣೆ ಮೊಳಗಿಸಿರುವ ಕಂಪನಿ ಸೆಕ್ಯೂರ್ ಗ್ರೂಪ್ ವಿಡಿಯೋ ಕಾಲಿಂಗ್ ವೈಶಿಷ್ಟ್ಯವನ್ನು ಪರಿಚಯಿಸುವುದಾಗಿ ಪ್ರಕಟಿಸಿದೆ.

Last Updated : Apr 27, 2020, 09:40 PM IST
WhatsApp, Zoom, Google Duo ಗೆ ಸೆಡ್ಡು ಹೊಡೆಯಲು ಮುಂದಾದ Telegram title=

ನವದೆಹಲಿ: ಕೊರೊನಾ ವೈರಸ್ ಪ್ರಕೋಪದ ಹಿನ್ನೆಲೆ ಸದ್ಯ ಲಾಕ್ ಡೌನ್ ಘೋಷಿಸಲಾಗಿದೆ. ಈ ಹಿನ್ನೆಲೆಯಲ್ಲಿ ವಿಡಿಯೋ ಕಾಲಿಂಗ್ ಗೆ ಭಾರಿ ಮಹತ್ವ ಬಂದಿದೆ. ವಿಡಿಯೋ ಕಾಲಿಂಗ್ ಗಾಗಿ zoom ಆಪ್ ಈ ಮೊದಲು ತುಂಬಾ ಖ್ಯಾತಿಯನ್ನು ಪಡೆಡಿದೆ. ಇನ್ನೊಂದೆಡೆ ವಾಟ್ಸ್ ಆಪ್ ಕೂಡ ತನ್ನ ಗ್ರೂಪ್ ವಿಡಿಯೋ ಕಾಲಿಂಗ್ ನಲ್ಲಿ ಸದಸ್ಯರ ಸಂಖ್ಯೆಯನ್ನು ಹೆಚ್ಚಿಸಿದೆ. ಗೂಗಲ್ ಡ್ಯುಓ ಕೂಡ ತನ್ನ ಆಪ್ ನಲ್ಲಿ ಬದಲಾವಣೆ ಮಾಡಿದೆ. ಹೀಗಾಗಿ ಇದೀಗ ಟೆಲಿಗ್ರಾಂ ಕೂಡ ಈ ಲೀಗ್ ನಲ್ಲಿ ಬರಲು ಸಿದ್ಧತೆ ನಡೆಸಿದೆ.

ಟೆಲಿಗ್ರಾಂ ಇನ್ಸ್ಟಂಟ್ ಮೆಸ್ಸೇಜಿಂಗ್ ಆಪ್ ಸುರಕ್ಷತೆಯ ಕಾರಣಗಳಿಂದ ಭಾರಿ ಖ್ಯಾತಿಯನ್ನು ಪಡೆದಿದೆ. ಈ ಆಪ್ ನಲ್ಲಿ ಸದ್ಯ ಗ್ರೂಪ್ ವಿಡಿಯೋ ಕಾಲಿಂಗ್ ವೈಶಿಷ್ಟ್ಯ ಇಲ್ಲ. ಆದರೆ, ಶೀಘ್ರದಲ್ಲಿಯೇ ಈ ಆಪ್ ನಲ್ಲಿಯೂ ಕೂಡ ಗ್ರೂಪ್ ಕಾಲಿಂಗ್ ವೈಶಿಷ್ಟ್ಯ ಲಭ್ಯವಿರಲಿದೆ. ಇದಕ್ಕೆ ಸಂಬಧಿಸಿದಂತೆ ಘೋಷಣೆ ಮಾಡಿರುವ ಕಂಪನಿ, ಈ ವರ್ಷ ಕಂಪನಿ ತನ್ನ ಆಪ್ ನಲ್ಲಿ ಗ್ರೂಪ್ ಕಾಲಿಂಗ್ ವೈಶಿಷ್ಟ್ಯ ಅಳವಡಿಸುವುದಾಗಿ ಪ್ರಕಟಿಸಿದೆ.

ಸೆಕ್ಯೂರಿಟಿ ಹಾಗೂ ಪ್ರೈವೆಸಿಗಾಗಿ ಹೆಸರುವಾಸಿಯಾಗಿರುವ ಟೆಲಿಗ್ರಾಮ್ ಆಪ್ ಹೆಸರುವಾಸಿಯಾಗಿರುವ ಕಾರಣ, ತನ್ನ ಬ್ಲಾಗ್ ನಲ್ಲಿ ಈ ಕುರಿತು ಪ್ರಕಟಿಸಿರುವ ಕಂಪನಿ, ಈ ವರ್ಷ ತನ್ನ ಆಪ್ ನಲ್ಲಿ ಸೆಕ್ಯೂರ್ ವಿಡಿಯೋ ಕಾಲಿಂಗ್ ವೈಶಿಷ್ಟ್ಯವನ್ನು ಜೊಡಿಸುವುದಾಗಿ ಹೇಳಿದೆ.

ಇದಕ್ಕೆ ಸಮಬಂಧಿಸಿದಂತೆ ತನ್ನ ಬ್ಲಾಗ್ ಸ್ಪಾಟ್ ನಲ್ಲಿ ಬರೆದುಕೊಂಡಿರುವ ಕಂಪನಿ, "ಸದ್ಯದ ಜಾಗತಿಕ ಲಾಕ್ ಡೌನ್, ನಂಬಿಕೆಗ ಅರ್ಹವಾಗಿರುವ ವಿಡಿಯೋ ಕಮ್ಯೂನಿಕೇಶನ್ ನ ಅವಶ್ಯಕತೆಯನ್ನು ಹೈಲೈಟ್ ಮಾಡಿದೆ. 2013ರಲ್ಲಿ ಶಾರ್ಟ್ ಮೆಸೇಜಿಂಗ್ ಗೆ ಇದ್ದ ಬೇಡಿಕೆ 2020ರಲ್ಲಿ ವಿಡಿಯೋ ಕಾಲಿಂಗ್ ಗೆ ಬಂದಿದೆ" ಎಂದು ಹೇಳಿದೆ.

ಸದ್ಯ ಮಾರುಕಟ್ಟೆಯಲ್ಲಿರುವ ಆಪ್ ಗಳು ಒಂದು ಸೆಕ್ಯೂರ್ ಆಗಿವೆ ಇಲ್ಲವೇ ಬಳಕೆಗೆ ಯೋಗ್ಯವಾಗಿವೆ. ಆದರೆ, ಈ ಎರಡೂ ವೈಶಿಷ್ಟ್ಯಗಳನ್ನು ಹೊಂದಿರುವ ಆಪ್ ಮಾರುಕಟ್ಟೆಯಲ್ಲಿ ತೀರಾ ಕಮ್ಮಿ. ನಾವು ಈ ಪರಿಸ್ಥಿತಿಯನ್ನು ಬದಲಾಯಿಸಲು ಬಯಸುತ್ತೇವೆ. ಹೀಗಾಗಿ 2020ರಲ್ಲಿ ನಾವು ಸೆಕ್ಯೂರ್ ವಿಡಿಯೋ ಕಾಲಿಂಗ್ ಆಪ್ ಮೇಲೆ ಹೆಚ್ಚಿನ ಗಮನ ನೀಡಲಿದ್ದೇವೆ ಎಂದು ಕಂಪನಿ ಹೇಳಿದೆ.

ವಿಶ್ವಾದ್ಯಂತ ಟೆಲಿಗ್ರಾಮ್ ಸುಮಾರು 40 ಕೋಟಿ ಬಳಕೆದಾರರನ್ನು ಹೊಂದಿದೆ. ಆದರೆ, ಕಂಪನಿ ಇದುವರೆಗೆ ಯಾವ ತಿಂಗಳಲ್ಲಿ ತನ್ನ ಈ ಗ್ರೂಪ್ ವಿಡಿಯೋ ಕಾಲಿಂಗ್ ವೈಶಿಷ್ಟ್ಯ ಬಿಡುಗಡೆಗೊಳಿಸಲಿದೆ ಎಂಬುದನ್ನು ಸ್ಪಷ್ಟಪಡಿಸಿಲ್ಲ. ಇದೇ ವೇಳೆ ನಿತ್ಯ ಸುಮಾರು 15 ಲಕ್ಷ ಜನರು ಟೆಲಿಗ್ರಾಮ್ ಮೇಲೆ ತನ್ನ ಖಾತೆ ತೆರೆಯುತ್ತಿದ್ದು, ಕಳೆದ ವರ್ಷ ಇದೆ ತಿಂಗಳಿನಲ್ಲಿ ಕಂಪನಿಯ ಬಳಿ 30 ಕೋಟಿ ಬಳಕೆದಾರರಿದ್ದು, ಈ ವರ್ಷ ಬಳಕೆದಾರರ ಸಂಖ್ಯೆನಲ್ಲಿ 10 ಕೋಟಿ ಏರಿಕೆಯಾಗಿದೆ ಎಂದು ಹೇಳಿಕೊಂಡಿದೆ.

Trending News