Taliban On Kashmir: ಕಾಶ್ಮೀರದ ಕುರಿತು ತಾಲಿಬಾನ್ ಹೇಳಿಕೆ, ಪಾಕಿಸ್ತಾನಕ್ಕೆ ದೊಡ್ಡ ಹೊಡೆತ

ತಾಲಿಬಾನ್ ನಾಯಕ ಅನಸ್ ಹಕ್ಕಾನಿ ಕಾಶ್ಮೀರ ಸಮಸ್ಯೆಯು ಭಾರತ ಮತ್ತು ಪಾಕಿಸ್ತಾನದ ಆಂತರಿಕ ವಿಷಯ ಮತ್ತು ನಾವು ಕಾಶ್ಮೀರದ ವಿಷಯದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಹೇಳಿದರು. ಇದರೊಂದಿಗೆ, ಅನಸ್ ಹಕ್ಕಾನಿ ಪಾಕಿಸ್ತಾನದ ಸಂಪರ್ಕದ ಬಗ್ಗೆಯೂ ಅವರು ಮಾತನಾಡಿದರು.

Written by - Yashaswini V | Last Updated : Sep 1, 2021, 01:24 PM IST
  • ಕಾಶ್ಮೀರ ವಿಷಯದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ತಾಲಿಬಾನ್ ಹೇಳಿದೆ
  • ಕಾಶ್ಮೀರವು ನಮ್ಮ ನ್ಯಾಯವ್ಯಾಪ್ತಿಯ ಭಾಗವಲ್ಲ ಎಂದು ಅನಸ್ ಹಕ್ಕಾನಿ ಹೇಳಿದರು
  • ಭಾರತದ ಜೊತೆ ಸಂಬಂಧವನ್ನು ಮುಂದುವರಿಸಲು ಸಿದ್ಧ ಎಂದು ಹಕ್ಕಾನಿ ಹೇಳಿದರು
Taliban On Kashmir: ಕಾಶ್ಮೀರದ ಕುರಿತು ತಾಲಿಬಾನ್ ಹೇಳಿಕೆ, ಪಾಕಿಸ್ತಾನಕ್ಕೆ ದೊಡ್ಡ ಹೊಡೆತ title=
Taliban leader Anas Haqqani statement on Kashmir

ನವದೆಹಲಿ: ಅಮೆರಿಕ ತನ್ನ ಸೈನ್ಯವನ್ನು ಮರಳಿ ಕರೆಸಿಕೊಂಡ ನಂತರ ತಾಲಿಬಾನ್ ಈಗ ಅಫ್ಘಾನಿಸ್ತಾನವನ್ನು ಸಂಪೂರ್ಣವಾಗಿ ಆಕ್ರಮಿಸಿಕೊಂಡಿದೆ. ಏತನ್ಮಧ್ಯೆ, ಪಾಕಿಸ್ತಾನವು ಭಾರತದ ವಿರುದ್ಧ ತಾಲಿಬಾನ್‌ಗಳನ್ನು ಪ್ರಚೋದಿಸಲು ಪ್ರಯತ್ನಿಸುತ್ತಿದೆ ಮತ್ತು ಕಾಶ್ಮೀರದ ಮೇಲೆ ಸಂಚು ರೂಪಿಸಲು ಪ್ರಯತ್ನಿಸುತ್ತಿದೆ ಎಂಬ ಊಹಾಪೋಹಗಳು ಹರಿದಾಡುತ್ತಿವೆ. ಇದಕ್ಕೆ ತೆರೆ ಎಳೆದಿರುವ ತಾಲಿಬಾನ್ ಪಾಕಿಸ್ತಾನದ (Pakistan) ನೀಚ ಭರವಸೆಗೆ ದೊಡ್ಡ ಹೊಡೆತ ನೀಡಿದ್ದು, ಕಾಶ್ಮೀರ ವಿಷಯದಲ್ಲಿ ಯಾವುದೇ ರೀತಿಯ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಕಾಶ್ಮೀರದ ಬಗ್ಗೆ ತಾಲಿಬಾನ್ ಹೇಳಿಕೆ:
ಖಾಸಗಿ ವಾಹಿನಿಯೊಂದರ ಜೊತೆ ಮಾತನಾಡಿರುವ ತಾಲಿಬಾನ್ (Taliban) ನಾಯಕ ಅನಸ್ ಹಕ್ಕಾನಿ  (Anas Haqqani) ಕಾಶ್ಮೀರ ಸಮಸ್ಯೆಯು ಭಾರತ ಮತ್ತು ಪಾಕಿಸ್ತಾನದ (India-Pakistan) ಆಂತರಿಕ ವಿಷಯ ಮತ್ತು ನಾವು ಕಾಶ್ಮೀರದ ವಿಷಯದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಹೇಳಿದರು. ಅನಾಸ್ ಹಕ್ಕಾನಿ ಹಕ್ಕಾನಿ ನೆಟ್‌ವರ್ಕ್ ಸ್ಥಾಪಕ ಜಲಾಲುದ್ದೀನ್ ಹಕ್ಕಾನಿಯ ಕಿರಿಯ ಮಗ.

ಇದನ್ನೂ ಓದಿ- Afghanistan Crisis: ಅಫ್ಘಾನಿಸ್ತಾನ್ ತೊರೆಯುವುದಕ್ಕೂ ಮುನ್ನ ತಾಲಿಬಾನಿಗಳಿಗೆ ಭಾರಿ ನೋವು ನೀಡಿದ ಅಮೇರಿಕಾ, ಮಾಡಿದ್ದೇನು ತಿಳಿಯಲು ಸುದ್ದಿ ಓದಿ?

ಕಾಶ್ಮೀರವು ನ್ಯಾಯವ್ಯಾಪ್ತಿಯ ಭಾಗವಲ್ಲ: ಹಕ್ಕಾನಿ
ಪಾಕಿಸ್ತಾನವು ಹಕ್ಕಾನಿ ನೆಟ್‌ವರ್ಕ್‌ಗೆ  (Haqqani Network) ತುಂಬಾ ಹತ್ತಿರದಲ್ಲಿದೆ ಮತ್ತು ಕಾಶ್ಮೀರದಲ್ಲಿ ನಿರಂತರವಾಗಿ ಹಸ್ತಕ್ಷೇಪ ಮಾಡುತ್ತಿದೆಯೇ? ಪಾಕಿಸ್ತಾನವನ್ನು ಬೆಂಬಲಿಸಲು ನೀವು ಕೂಡ ಕಾಶ್ಮೀರದಲ್ಲಿ ಮಧ್ಯಪ್ರವೇಶಿಸುವಿರಾ? ಎಂದು ಅನಸ್ ಹಕ್ಕಾನಿ ಅವರನ್ನು ಪ್ರಶ್ನಿಸಲಾಯಿತು.  ಇದಕ್ಕೆ ಪ್ರತಿಕ್ರಿಯಿಸಿದ ಅವರು, 'ಕಾಶ್ಮೀರವು ನಮ್ಮ ನ್ಯಾಯವ್ಯಾಪ್ತಿಯ ಒಂದು ಭಾಗವಲ್ಲ ಮತ್ತು ಹಸ್ತಕ್ಷೇಪವು ನೀತಿಗೆ ವಿರುದ್ಧವಾಗಿದೆ. ನಮ್ಮ ನೀತಿಯ ವಿರುದ್ಧ ನಾವು ಹೇಗೆ ಹೋಗಬಹುದು? ಹಾಗಾಗಿ ನಾವು ಕಾಶ್ಮೀರ ವಿಷಯದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂಬುದು ಸ್ಪಷ್ಟವಾಗಿದೆ ಎಂದರು.

ಹಕ್ಕಾನಿ ನೆಟ್ವರ್ಕ್ ಜೈಶ್ ಮತ್ತು ಲಷ್ಕರ್ ಅನ್ನು ಬೆಂಬಲಿಸುತ್ತದೆಯೇ?
ಕಾಶ್ಮೀರ ವಿಚಾರದಲ್ಲಿ ಹಕ್ಕಾನಿ ನೆಟ್‌ವರ್ಕ್ ಜೈಶ್-ಇ-ಮೊಹಮ್ಮದ್ ಮತ್ತು ಲಷ್ಕರ್-ಇ-ತೈಬಾವನ್ನು ಬೆಂಬಲಿಸುವುದಿಲ್ಲವೇ? ಎಂಬ ಪ್ರಶ್ನೆಗೂ ಪ್ರತಿಕ್ರಿಯೆ ನೀಡಿರುವ ಅನಸ್ ಹಕ್ಕಾನಿ (Anas Haqqani), 'ನಾವು ಈ ಬಗ್ಗೆ ಹಲವು ಬಾರಿ ಸ್ಪಷ್ಟಪಡಿಸಿದ್ದೇವೆ ಮತ್ತು ಇದು ಕೇವಲ ಪ್ರಚಾರ ಎಂದು ಮತ್ತೊಮ್ಮೆ ಹೇಳುತ್ತಿದ್ದೇವೆ' ಎಂದು ಹೇಳಿದರು.

ಭಾರತದೊಂದಿಗೆ ತಾಲಿಬಾನ್ ಯಾವ ರೀತಿಯ ಸಂಬಂಧವನ್ನು ಬಯಸುತ್ತದೆ?
ಭಾರತದೊಂದಿಗಿನ ಸಂಬಂಧದ ಕುರಿತು ಕೂಡ ಮಾತನಾಡಿರುವ ಅನಸ್ ಹಕ್ಕಾನಿ, 'ನಾವು ಭಾರತದೊಂದಿಗೆ ಉತ್ತಮ ಸಂಬಂಧವನ್ನು ಬಯಸುತ್ತೇವೆ. ಯಾರೂ ನಮ್ಮ ಬಗ್ಗೆ ತಪ್ಪು ಯೋಚಿಸುವುದನ್ನು ನಾವು ಬಯಸುವುದಿಲ್ಲ. ಭಾರತವು ನಮ್ಮ ಶತ್ರುಗಳಿಗೆ 20 ವರ್ಷಗಳ ಕಾಲ ಸಹಾಯ ಮಾಡಿತು. ಆದರೆ ನಾವು ಎಲ್ಲವನ್ನೂ ಮರೆತು ಸಂಬಂಧವನ್ನು ಮುಂದುವರಿಸಲು ಸಿದ್ಧರಿದ್ದೇವೆ ಎಂದಿದ್ದಾರೆ.

ಇದನ್ನೂ ಓದಿ- Afghanistan Crisis: ಅಫ್ಘಾನಿಸ್ತಾನದಿಂದ ಸಂಪೂರ್ಣ ಹೊರಬಿದ್ದ ಅಮೆರಿಕ ಸೇನೆ; ತಾಲಿಬಾನ್ ಸಂಭ್ರಮಾಚರಣೆ

ಪಾಕ್ ಸೇನೆ ಮತ್ತು ಐಎಸ್ಐ ಜೊತೆಗಿನ ಸಂಬಂಧದ ಬಗ್ಗೆ ಪ್ರತಿಕ್ರಿಯೆ:
ಪಾಕ್ ಸೇನೆ ಮತ್ತು ಐಎಸ್ಐ ಜೊತೆಗಿನ ಸಂಬಂಧದ ಬಗ್ಗೆ ಪ್ರತಿಕ್ರಿಯೆ ನೀಡಿದ ಅನಸ್ ಹಕ್ಕಾನಿ (Anas Haqqani), ನಾವು ಇಪ್ಪತ್ತು ವರ್ಷಗಳ ಕಾಲ ಹೋರಾಡಿದ್ದೇವೆ ಮತ್ತು ಈ ಸಮಯದಲ್ಲಿ ನಮ್ಮ ಬಗ್ಗೆ ಸಾಕಷ್ಟು ಋಣಾತ್ಮಕ ಪ್ರಚಾರ ಮಾಡಲಾಯಿತು, ಇವೆಲ್ಲಾ ತಪ್ಪು. ಹಕ್ಕಾನಿ ನೆಟ್ವರ್ಕ್ ಏನೂ ಅಲ್ಲ ಮತ್ತು ನಾವು ಎಲ್ಲರಿಗೂ ಕೆಲಸ ಮಾಡುತ್ತಿದ್ದೇವೆ. ಮಾಧ್ಯಮಗಳು ಪ್ರಪಂಚದಾದ್ಯಂತ ಮತ್ತು ವಿಶೇಷವಾಗಿ ಭಾರತದಲ್ಲಿ ನಮ್ಮ ಬಗ್ಗೆ ನಕಾರಾತ್ಮಕ ಪ್ರಚಾರವನ್ನು ಹರಡುತ್ತಿವೆ. ಇದು ಪರಿಸರವನ್ನು ಇನ್ನಷ್ಟು ಹದಗೆಡಿಸುತ್ತಿದೆ. ಯುದ್ಧದಲ್ಲಿ ಯಾರೂ ಕೂಡ ಪಾಕಿಸ್ತಾನದ ಯಾವುದೇ ಆಯುಧವನ್ನು ಬಳಸಿಲ್ಲ. ಈ ಆರೋಪಗಳು ಸುಳ್ಳು ಮತ್ತು ಆಧಾರರಹಿತವಾಗಿವೆ ಎಂದು ಹೇಳಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News