ನವದೆಹಲಿ: ರಷ್ಯಾದ ಸೇಚೆನೋವ್ ಫಸ್ಟ್ ಮಾಸ್ಕೋ ಸ್ಟೇಟ್ ಮೆಡಿಕಲ್ ವಿಶ್ವವಿದ್ಯಾನಿಲಯ ಕಾರ್ಯಕರ್ತರ ಮೇಲೆ ವಿಶ್ವದ ಮೊಟ್ಟಮೊದಲ ಕೊರೊನಾ ವ್ಯಾಕ್ಸಿನ್ ನ ಕ್ಲಿನಿಕಲ್ ಟ್ರಯಲ್ ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ ಎಂದು ಹೇಳಿಕೊಂಡಿದೆ. ಒಂದು ವೇಳೆ ವಿಶ್ವವಿದ್ಯಾಲಯ ನೀಡಿರುವ ಈ ಹೇಳಿಕೆ ನಿಜ ಎಂದು ಸಾಬೀತಾದಲ್ಲಿ ಇದು ವಿಶ್ವಾಸ ಮೊಟ್ಟ ಮೊದಲ ಕೊರೊನಾ ವಿರಸ್ ವ್ಯಾಕ್ಸಿನ್ ಆಗಲಿದೆ. ಈ ಕುರಿತು Sputnik ಗೆ ಮಾಹಿತಿ ಇನ್ಸ್ಟಿಟ್ಯೂಟ್ ಫಾರ್ ಟ್ರಾನ್ಸ್ ಲೆಶನಲ್ ಮೆಡಿಸಿನ್ ಅಂಡ್ ಬಯೋಟೆಕ್ನಾಲಜಿಯ ನಿರ್ದೇಶಕ ವದಿಮ್ ತರಾಸೋವ್, ಸೇಚೆನೋವ್ ವಿಶ್ವವಿದ್ಯಾನಿಲಯ ವಾಲೆಂಟೀರ್ಸ್ ಗಳ ಮೇಲೆ ಕೊವಿಡ್-19 ನ ವಿಶ್ವದ ಮೊಟ್ಟಮೊದಲ ಲಸಿಕೆಯ ಪ್ರಯೋಗವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ ಎಂದು ಹೇಳಿದ್ದಾರೆ.
LIVE UPDATES | Russian medics complete trials of world's 1st coronavirus vaccinehttps://t.co/oGv0E6lgLn
— Sputnik (@SputnikInt) July 12, 2020
ವಿಶ್ವವಿದ್ಯಾಲಯ ಜೂನ್ 18ರಂದು ರಷ್ಯಾದ ಗೆಮಲಿ ಇನ್ಸ್ಟಿಟ್ಯೂಟ್ ಫಾರ್ ಎಪಿಡೆಮಿಯಾಲಾಜಿ ಅಂಡ್ ಮೈಕ್ರೋಬಯಾಯಾಲಾಜಿ ಸಿದ್ಧಪಡಿಸಿರುವ ಈ ಲಸಿಕೆಯ ಪರೀಕ್ಷೆ ಆರಂಭಿಸಿತ್ತು. ವಾಲೆಂಟೀರ್ಸ್ ಗಳ ಮೊದಲ ತಂಡಕ್ಕೆ ಬುಧವಾರ ಹಾಗೂ ಎರಡನೇ ತಂಡಕ್ಕೆ ಜುಲೈ 20ರಂದು ಡಿಸ್ಚಾರ್ಜ್ ಮಾಡಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಸುರಕ್ಷಿತವಾಗಿದೆ ಈ ವ್ಯಾಕ್ಸಿನ್
ಸೇಚೆನೋವ್ ವಿಶ್ವವಿದ್ಯಾಲಯದ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಪ್ಯಾರಾಸೈಟಾಲಾಜಿ, ಟ್ರಾಪಿಕಲ್ ಅಂಡ್ ವೆಕ್ಟರ್ ಬೋರ್ನ್ ಡಿಸೀಸಸ್ ನಿರ್ದೇಶಕ ಅಲೆಕ್ಸಾಂಡರ್ ಲುಕಾಶೇವ್ ಪ್ರಕಾರ, ವ್ಯಾಕ್ಸಿನ್ ಸುರಕ್ಷಿತವಾಗಿರುವುದು ದೃಢಪಟ್ಟಿದೆ. ಸೇಚನೋವ್ ವಿವಿ ಮಹಾಮಾರಿಯ ಕಾಲದಲ್ಲಿ ಕೇವಲ ಒಂದು ಶೈಕ್ಷಣಿಕ ಸಂಸ್ಥೆಯಾಗಿ ಮಾತ್ರ ಕಾರ್ಯನಿರ್ವಹಿಸದೆ, ಒಂದು ವೈಜ್ಞಾನಿಕ ಹಾಗೂ ತಾಂತ್ರಿಕ ಸಂಶೋಧನಾ ಕೇಂದ್ರದ ರೂಪದಲ್ಲಿ ಕಾರ್ಯನಿರ್ವಹಿಸುತ್ತದೆ ಎಂದು ತಾರಾಸೋವ್ ಹೇಳಿದ್ದಾರೆ. ಜೊತೆಗೆ ಜಟಿಲ ಹಾಗೂ ಮಹತ್ವಪೂರ್ಣ ಔಷಧಿಗಳನ್ನು ಅಭಿವೃದ್ಧಿಪಡಿಸುವ ಕ್ಷಮತೆ ಹೊಂದಿದೆ ಎಂದೂ ಕೂಡ ಅವರು ಹೇಳಿದ್ದಾರೆ.