Russia-Ukraine War: ರಷ್ಯಾ ವಿರುದ್ಧ ಉಕ್ರೇನ್ ಬಳಿ ಕೇವಲ 3 ಆಯ್ಕೆಗಳಿವೆ, ಮುಂದಿನ 24 ಗಂಟೆಗಳಲ್ಲಿ ಉಕ್ರೇನ್ ಅಧ್ಯಕ್ಷರ ಗತಿ ಏನಾಗಲಿದೆ?

Russia-Ukraine War: ಉಕ್ರೇನ್ (Ukraine) ಮೇಲೆ ರಷ್ಯಾ (Russia) ದಾಳಿಯ ಎರಡನೇ ದಿನವಾದ ಇಂದು ರಷ್ಯಾ ಸೇನೆ ಉಕ್ರೇನ್ ರಾಜಧಾನಿ (Kyiv) ತಲುಪಿದೆ. ಇಂತಹ ಪರಿಸ್ಥಿತಿಯಲ್ಲಿ ಉಕ್ರೇನ್ ಏಕಾಂಗಿತನ ಅನುಭವಿಸುತ್ತಿದೆ. NATO ಆಗಿರಲಿ ಅಥವಾ ಅಮೇರಿಕಾ (America) ಆಗಿರಲಿ ಉಕ್ರೇನ್ ಸಹಾಯಕ್ಕೆ ಯಾವುದೇ ದೇಶ ಮುಂದಕ್ಕೆ ಬರುತ್ತಿಲ್ಲ.   

Written by - Nitin Tabib | Last Updated : Feb 25, 2022, 05:05 PM IST
  • ಯುದ್ಧದಲ್ಲಿ ಏಕಾಂಗಿ ಬಿದ್ದ ಉಕ್ರೇನ್
  • ಜಲೆನ್ಸ್ಕಿ ಬಳಿ ಕೇವಲ ಮೂರು ಆಯ್ಕೆಗಳು ಮಾತ್ರ ಇವೆ
  • ಮುಂದಿನ 24 ಗಂಟೆಗಳಲ್ಲಿ ಬಂಧನಕ್ಕೊಳಗಾಗಲಿದ್ದಾರೆ ಜಲೆನ್ಸ್ಕಿ
Russia-Ukraine War: ರಷ್ಯಾ ವಿರುದ್ಧ ಉಕ್ರೇನ್ ಬಳಿ ಕೇವಲ 3  ಆಯ್ಕೆಗಳಿವೆ, ಮುಂದಿನ 24 ಗಂಟೆಗಳಲ್ಲಿ ಉಕ್ರೇನ್ ಅಧ್ಯಕ್ಷರ ಗತಿ ಏನಾಗಲಿದೆ? title=
Russia-Ukraine War (File Photo)

ನವದೆಹಲಿ: Russia-Ukraine War - ಕಳೆದ ಎರಡು ದಿನಗಳಿಂದ ಉಕ್ರೇನ್ (Ukraine) ಮತ್ತು ರಷ್ಯಾ (Russia) ನಡುವೆ ಯುದ್ಧ ನಡೆಯುತ್ತಿದೆ. ಯುದ್ಧದಲ್ಲಿ ರಷ್ಯಾದ ಸೈನ್ಯವು ಉಕ್ರೇನ್ ನಲ್ಲಿ ಮುನ್ನುಗ್ಗುತ್ತಲೇ ಇದೆ ಮತ್ತು ಉಕ್ರೇನ್ ಕೂಡ ರಷ್ಯಾದೊಂದಿಗೆ ಹೋರಾಡುತ್ತಿದೆ. ಎರಡನೇ ದಿನವೇ ರಷ್ಯಾದ ಸೇನೆ ಉಕ್ರೇನ್ ರಾಜಧಾನಿ ಕೀವ್ (Kyiv) ತಲುಪಿದೆ. ಈ ಯುದ್ಧದಲ್ಲಿ ಉಕ್ರೇನ್ ಬಹುತೇಕ ಏಕಾಂಗಿಯಾಗಿದೆ. ನ್ಯಾಟೋ (NATO) ಅಥವಾ ಅಮೆರಿಕ (America) ಆಗಿರಲಿ, ಉಕ್ರೇನ್‌ಗೆ ಸಹಾಯ ಮಾಡಲು ಯಾವುದೇ ದೇಶವು ಮುಂದಕ್ಕೆ ಬರುತ್ತಿಲ್ಲ.

ಯುದ್ಧದಲ್ಲಿ ಏಕಾಂಗಿ ಬಿದ್ದ ಉಕ್ರೇನ್
ಯುಎಸ್ ತನ್ನ ಸೈನ್ಯವನ್ನು ಯುದ್ಧಕ್ಕೆ ಕಳುಹಿಸಲು ನಿರಾಕರಿಸಿದೆ. ಪಾಶ್ಚಿಮಾತ್ಯ ದೇಶಗಳ ಈ ‘ವಂಚನೆ’ ಬಗ್ಗೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ (Volodymyr Zelensky) ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಷ್ಯಾದೊಂದಿಗೆ ಸ್ಪರ್ಧಿಸಲು ನಾವು ಏಕಾಂಗಿಯಾಗಿದ್ದೇವೆ ಎಂದು ಅವರು ಹೇಳಿದ್ದಾರೆ. ಇದೇ ವೇಳೆ, ಅವರು 'ರಷ್ಯಾದ ಮೊದಲ ಗುರಿ ನಾನು, ನನ್ನ ಕುಟುಂಬವು ಎರಡನೇ ಗುರಿಯಾಗಿದೆ' ಎಂದು ಅವರು ಹೇಳಿದ್ದಾರೆ.

ಜನರ ಮನಸ್ಸಿನಲ್ಲಿ ಮೂಡಿರುವ ಪ್ರಶ್ನೆಗಳಿವು
ಹೀಗಿರುವಾಗ ಜನ ಸಾಮಾನ್ಯರಲ್ಲೂ ಹಲವು ಪ್ರಶ್ನೆಗಳು ಮೂಡುತ್ತಿವೆ. ಅನೇಕ ರಕ್ಷಣಾ ತಜ್ಞರು ಉಕ್ರೇನ್ ಶರಣಾಗಬೇಕು ಎಂದು ಹೇಳುತ್ತಿವೆ. ಇದರಿಂದ ಸ್ಥಳಿಯರ ಜೀವನ  ಸುರಕ್ಷಿತವಾಗಿ ಉಳಿಯಲಿದೆ. ಈ ಯುದ್ಧವು ಹೆಚ್ಚು ಕಾಲ ಉಳಿಯುವುದಿಲ್ಲ ಮತ್ತು ಉಕ್ರೇನ್ ಶೀಘ್ರದಲ್ಲೇ ಉಸಿಯಲಿದೆ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ. 

ಇದನ್ನೂ ಓದಿ-British Airlines ಗೆ ತನ್ನ ವಾಯುಪ್ರದೇಶವನ್ನು ನಿಷೇಧಿಸಿದ ರಷ್ಯಾ...!

ಉಕ್ರೇನ್ ಅಧ್ಯಕ್ಷರ ಬಳಿ ಇದೀಗ ಕೇವಲ 3 ಆಯ್ಕೆಗಳಿವೆ
ಪ್ರಸ್ತುತ ಪರಿಸ್ಥಿತಿಯನ್ನು ನಾವು ಅರ್ಥಮಾಡಿಕೊಂಡರೆ, ಉಕ್ರೇನ್ ತನ್ನದೇ ಆದ ಸಾಮರ್ಥ್ಯದ ಮೇಲೆ ಹೋರಾಡುವ ಮೂಲಕ ರಷ್ಯಾದೊಂದಿಗೆ ದೀರ್ಘಕಾಲ ಹೋರಾಡಲು ಸಾಧ್ಯವಿಲ್ಲ. ನಾವು ರಷ್ಯಾವನ್ನು 96 ಗಂಟೆಗಳಿಗಿಂತ ಹೆಚ್ಚು ಕಾಲ ನಿಲ್ಲಿಸಲು ಸಾಧ್ಯವಾಗುವುದಿಲ್ಲ ಎಂದು ಝೆಲೆನ್ಸ್ಕಿ ಕೂಡ ಸ್ಪಷ್ಟಪಡಿಸಿದ್ದಾರೆ. ರಷ್ಯಾದ ಸೇನೆಯು ಉಕ್ರೇನ್‌ನ ಅಧ್ಯಕ್ಷೀಯ ಅರಮನೆಯನ್ನು ಯಾವುದೇ ಸಮಯದಲ್ಲಿ ಪ್ರವೇಶಿಸಬಹುದು. ಇಂತಹ ಪರಿಸ್ಥಿತಿಯಲ್ಲಿ, ಅಧ್ಯಕ್ಷ ಝೆಲೆನ್ಸ್ಕಿ ಬಳಿ ಮೂರು ಆಯ್ಕೆಗಳನ್ನು ಹೊಂದಿದ್ದಾರೆ. ಒಂದೋ ಅವರು ಯುದ್ಧ  ಬಿಟ್ಟುಕೊಟ್ಟ ನಂತರ ಶರಣಾಗುತ್ತಾರೆ, ದೇಶದಿಂದ ಪಲಾಯನಗೈಯುತ್ತಾರೆ ಅಥವಾ ರಷ್ಯಾ ಸೇನೆಯಿಂದ ಬಂಧಿಸಲ್ಪಡುತ್ತಾರೆ.

ಇದನ್ನೂ ಓದಿ-Pit Bull: ಆತಂಕ ಹೆಚ್ಚಿಸಿದ ಚಿರತೆಗಿಂತ ಅಪಾಯಕಾರಿ ಪ್ರಾಣಿ, ನೋಡಿದ್ರೆ ನಿಮ್ಮ ತಲೇನು ಗಿರ್ರ್ ಅನ್ನೋದು ಗ್ಯಾರಂಟಿ

ಮುಂದಿನ 24 ಗಂಟೆಗಳಲ್ಲಿ ಪರಿಸ್ಥಿತಿ ತಿಳಿಯಾಗಲಿದೆ
ಮುಂದಿನ 24 ಗಂಟೆಗಳಲ್ಲಿ ಉಕ್ರೇನ್ ಶರಣಾಗದಿದ್ದರೆ, ರಷ್ಯಾದ ಸೇನೆಯು ರಾಷ್ಟ್ರಪತಿ ಭವನವನ್ನು ವಶಪಡಿಸಿಕೊಳ್ಳಬಹುದು ಮತ್ತು ಉಕ್ರೇನ್ ಅಧ್ಯಕ್ಷರನ್ನು ಬಂಧಿಸಬಹುದು ಎಂದು ಹೇಳಲಾಗುತ್ತಿದೆ. ಈ ಕುರಿತು ಹೇಳಿಕೆ ನೀಡಿದ್ದ ಉಕ್ರೇನ್‌ನ ಆಂತರಿಕ ಸಚಿವ ಆಂಟನ್ ಗೆರಾಶ್ಚೆಂಕೊ ಅವರು ಫೆಬ್ರವರಿ 25 ರಂದು ಶುಕ್ರವಾರ ಉಕ್ರೇನ್ ರಾಜಧಾನಿ ಕೀವ್ ಅನ್ನು ರಷ್ಯಾ ಸುತ್ತುವರೆಯಲು ಯೋಜಿಸಿದೆ ಎಂದಿದ್ದರು. 

ಇದನ್ನೂ ಓದಿ-Russia-Ukraine War: ಉಕ್ರೇನ್ ದಾಳಿಯ Live Video, ಸೈಕಲ್ ಸವಾರನ ಮೇಲೆ ಕುಸಿದ ರಷ್ಯಾ ಮಿಸೈಲ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News