Russia-Ukraine Conflict Updates: ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ಭೀತಿಯ ಇನ್ನೂ ಕಡಿಮೆಯಾಗಿಲ್ಲ. ರಷ್ಯಾ (Russia) ಯಾವುದೇ ಸಮಯದಲ್ಲೂ ಯುಕ್ರೇನ್ (Ukraine) ಮೇಲೆ ದಾಳಿ ನಡೆಸಬಹುದು ಎಂಬ ಆತಂಕವನ್ನು ಅಮೆರಿಕಾದ ಅಧ್ಯಕ್ಷ ಜೋ ಬಿಡೆನ್ (US President Joe Biden) ಪುನರುಚ್ಚರಿಸಿದ್ದಾರೆ. ಆದರೆ, ಈ ಬಾರಿ ರಷ್ಯಾ ನೇರವಾಗಿ (Russia Can Attack On Kyiv) ಉಕ್ರೇನ್ ರಾಜಧಾನಿ ಕೀವ್ (Ukraine Capital Kyiv) ಅನ್ನು ಗುರಿಯಾಗಿಸಬಹುದು ಎಂಬ ಸ್ಪಷ್ಟ ಆತಂಕ ಅವರು ಹೊರಹಾಕಿದ್ದಾರೆ.
ನ್ಯೂಕ್ಲಿಯರ್ ಡ್ರಿಲ್ ಮೂಲಕ ಆಳಗೊಂಡ ಆತಂಕ
ಏತನ್ಮಧ್ಯೆ ರಷ್ಯಾ ಬೆಲಾರೂಸ್ ನಲ್ಲಿ ನ್ಯೂಕ್ಲಿಯರ್ ಡ್ರಿಲ್ (Nuclear Drill) ನಡೆಸುವ ಮೂಲಕ ಕಪ್ಪು ಸಮುದ್ರದಲ್ಲಿ ಸಮರಾಭ್ಯಾಸ ನಡೆಸಿದೆ. ರಾಯಿಟರ್ಸ್ ನಲ್ಲಿ ಪ್ರಕಟಗೊಂಡ ವರದಿಯ ಪ್ರಕಾರ ರಷ್ಯಾ ಮೂರೂ ದಿಕ್ಕುಗಳಿಂದ ರಷ್ಯಾವನ್ನು ಸುತ್ತುವರೆದಿದೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಸ್ವತಃ ಈ ಪರಮಾಣು ಡ್ರಿಲ್ ನ ಮೇಲ್ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ.ಯುಕ್ರೇನ್ ಗಡಿಯಲ್ಲಿ ಇನ್ನೂ ಭಾರಿ ಪ್ರಮಾಣದಲ್ಲಿ ರಷ್ಯಾ ಸೈನಿಕರ ನಿಯೋಜಿಸಿದೆ. ಆದರೆ, ಉಕ್ರೇನ್ ಗಡಿಯಿಂದ ಸೈನ್ಯ ಹಿಂದಕ್ಕೆ ಪಡೆದುಕೊಳ್ಳುವುದಾಗಿ ರಷ್ಯಾ ಈಗಾಗಲೇ ಘೋಷಣೆ ಮಾಡಿದೆ. ಆದರೆ, ಇದುವರೆಗೂ ಕೂಡ ಅಲ್ಲಿ ರಷ್ಯಾ ಸೈನಿಕರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಪೂರ್ವ ಉಕ್ರೇನ್ ನಲ್ಲಿ ಸೆಲ್ ದಾಳಿಗಳು ಕೂಡ ಮುಂದುವರೆದಿವೆ.
ರಷ್ಯಾ, ಉಕ್ರೇನ್ ಗಡಿಯಲ್ಲಿ ಯುದ್ಧ ವಿಮಾನ, ಮಿಲಿಟರಿ ವಾಹನಗಳನ್ನು ಸೇರಿದಂತೆ ಭಾರಿ ಶಸ್ತ್ರಾಸ್ತ್ರಗಳನ್ನು ನಿಯೋಜಿಸಿದೆ. ಅಧ್ಯಕ್ಷ ಪುಟಿನ್ ಮೈಂಡ್ ನಲ್ಲಿ ಏನು ನಡೆಯುತ್ತಿದೆ ಎಂಬುದು ಯಾರು ಊಹಿಸಲು ಸಾಧ್ಯವಿಲ್ಲ ಎನ್ನಲಾಗುತ್ತಿದೆ. ಆದರೆ, ಜಿಯೋ ಪಾಲಿಟಿಕಲ್ ತಜ್ಞರು ಹೇಳುವ ಪ್ರಕಾರ, ಯಾವುದೇ ಎರಡು ದೇಶಗಳ ನಡುವೆ ಯುದ್ಧದಂತಹ ಪರಿಸ್ಥಿತಿ ಇರುವಾಗ, ನ್ಯೂಕ್ಲೀಯರ್ ಡ್ರಿಲ್ ಗಳಂತಹ ಸಮರಾಭ್ಯಾಸ ನಡೆಸುವುದು, ಅಪಾಯವನ್ನು ಮತ್ತಷ್ಟು ಆಳವಾಗಿಸುತ್ತದೆ ಎಂದಿದ್ದಾರೆ.
ಯುದ್ಧ ನಿಲ್ಲಿಸುವ ಪ್ರಯತ್ನಗಳೂ ಕೂಡ ಮುಂದುವರೆದಿವೆ
ಒತ್ತಡ ಹೆಚ್ಚಾಗುತ್ತಿರುವುದರ ನಡುವೆಯೇ, ಉಕ್ರೇನ್ ರಾಷ್ಟ್ರಾಧ್ಯಕ್ಷ ವೋಲೋದೊಮೀರ್ ಝೆಲೆನ್ಸ್ಕಿ (Volodymyr Zelenskyy) ರಷ್ಯಾವನ್ನು ಮಾತುಕತೆಗೆ ಆಹ್ವಾನಿಸಿದ್ದಾರೆ. ಉಭಯ ದೇಶಗಳ ನಾಯಕರು ಕುಳಿತು ಈ ವಿವಾದವನ್ನು ಬಗೆಹರಿಸುವ ಸ್ಥಳವನ್ನು ರಷ್ಯಾ ನಿರ್ಧರಿಸಬೇಕು ಎಂದು ಅವರು ಹೇಳಿದ್ದಾರೆ. ಉಕ್ರೈನ್ ಇಟ್ಟಿರುವ ಈ ಹೆಜ್ಜೆಗೆ ರಷ್ಯಾ ಇನ್ನೂ ಯಾವುದೇ ಉತ್ತರವನ್ನು ನೀಡಿಲ್ಲ.ಮತ್ತೊಂದೆಡೆ, ಪಾಶ್ಚಿಮಾತ್ಯ ದೇಶಗಳ ಬಗ್ಗೆ ಹೇಳುವುದಾದರೆ, ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್, 1945 ರ ಎರಡನೇ ಮಹಾಯುದ್ಧದ ನಂತರ ಯುರೋಪಿನಲ್ಲಿ ರಷ್ಯಾ ಅತಿದೊಡ್ಡ ಯುದ್ಧಕ್ಕೆ (World War 3) ತಯಾರಿ ನಡೆಸುತ್ತಿದೆ ಎಂದು ಹೇಳಿದ್ದಾರೆ. ಇದೇ ವೇಳೆ, ಜರ್ಮನಿ ಮತ್ತು ಆಸ್ಟ್ರಿಯಾ ತಮ್ಮ ದೇಶಗಳ ನಾಗರಿಕರನ್ನು ಉಕ್ರೇನ್ ತೊರೆಯುವಂತೆ ಸೂಚಿಸಿವೆ.
ಇದನ್ನೂ ಓದಿ-Russia-Ukraine Tension: ಏನಿದು False Flag Attack? ಇಂದಿನ ಸಮಯದಲ್ಲಿ ಅದು ಸಾಧ್ಯವೇ?
ಪುಟಿನ್ ಸಿಕ್ರೆಟ್ ಗೇಮ್ ಏನು?
ರಷ್ಯಾ ಉಕ್ರೇನ್ ಗಡಿಯ (Russia-Ukraine Fight) ಸಮೀಪದಲ್ಲಿ ವಾಸಿಸುವ ಜನರನ್ನು ಸ್ಥಳಾಂತರಿಸಲು ಪ್ರಾರಂಭಿಸಿದೆ. ಉಕ್ರೇನ್ ಗಡಿಯ ಪಕ್ಕದಲ್ಲಿರುವ ಡೊನೆಟ್ಸ್ಕ್‌ನಿಂದ ಜನರನ್ನು ಸ್ಥಳಾಂತರಿಸಲಾಗುತ್ತಿದೆ ಮತ್ತು ನೇರವಾಗಿ ರಷ್ಯಾಕ್ಕೆ ಕಳುಹಿಸಲಾಗುತ್ತಿದೆ. ಸುದ್ದಿ ಸಂಸ್ಥೆಯ ಪ್ರಕಾರ ಇದುವರೆಗೆ 7 ಲಕ್ಷ ಜನರಿಗೆ ಪಾಸ್‌ಪೋರ್ಟ್‌ಗಳನ್ನು ನೀಡಲಾಗಿದೆ. ಡೊನೆಟ್ಸ್ಕ್ ಅನ್ನು ರಷ್ಯಾದ ಬೆಂಬಲಿತ ಪ್ರತ್ಯೇಕತಾವಾದಿಗಳು ಆಕ್ರಮಿಸಿಕೊಂಡಿದ್ದಾರೆ. ಕಳೆದ ಹಲವು ದಿನಗಳಿಂದ ಉಕ್ರೇನ್ ಸೇನೆ ದಾಳಿ ನಡೆಸುತ್ತಿದೆ ಎಂದು ಅಲ್ಲಿನ ಅಧಿಕಾರಿಗಳು ಹೇಳಿದ್ದಾರೆ. ಇದೇ ವೇಳೆ, ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅಲ್ಲಿಂದ ಹೊರಹಾಕಲ್ಪಟ್ಟ ಪ್ರತಿಯೊಬ್ಬ ನಾಗರಿಕನಿಗೆ 10 ಸಾವಿರ ರೂಬಲ್ (ಸುಮಾರು 10 ಸಾವಿರ ರೂಪಾಯಿ) ಆರ್ಥಿಕ ನೆರವು ಘೋಷಿಸಿದ್ದಾರೆ.
ಇದನ್ನೂ ಓದಿ-Russia-Ukraine Conflict: ರಷ್ಯಾ ದಾಳಿ ನಡೆಸಿದರೆ, ಉಕ್ರೇನ್ ಗೆ ಬೆಂಬಲ: ಬಿಡೆನ್
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ