US Embassy: ಯುಎಸ್ ರಾಯಭಾರ ಕಚೇರಿಯ ಮೇಲೆ ರಾಕೆಟ್ ದಾಳಿ

Rockets Attack On US Embassy: 2022 ರ ಆರಂಭದಿಂದಲೂ, ಇರಾಕ್‌ನಲ್ಲಿರುವ ಅಮೇರಿಕನ್ ನೆಲೆಗಳನ್ನು ಪದೇ ಪದೇ ಗುರಿಯಾಗಿಸಲಾಗುತ್ತಿದೆ. ಈ ದಾಳಿಯಲ್ಲಿ ಡ್ರೋನ್‌ಗಳು ಮತ್ತು ರಾಕೆಟ್‌ಗಳನ್ನು ಬಳಸಲಾಗಿದೆ.

Written by - Yashaswini V | Last Updated : Jan 14, 2022, 07:31 AM IST
  • ಶಾಲೆಯ ಮೇಲೆ ರಾಕೆಟ್ ಬಿದ್ದಿತು
  • US ನೆಲೆಗಳನ್ನು ಗುರಿಯಾಗಿಸಿ ನಡೆದಿರುವ ದಾಳಿ
  • 7 ದಿನಗಳಲ್ಲಿ ಎರಡನೇ ಬಾರಿಗೆ ದಾಳಿ
US Embassy: ಯುಎಸ್ ರಾಯಭಾರ ಕಚೇರಿಯ ಮೇಲೆ ರಾಕೆಟ್ ದಾಳಿ title=
Rockets Attack On US Embassy

Rockets Attack On US Embassy: ಬಾಗ್ದಾದ್: ಇರಾಕ್‌ನ  (Iraq)  ಬಾಗ್ದಾದ್‌ನ  (Baghdad)  ಹೈ ಸೆಕ್ಯುರಿಟಿ ಏರಿಯಾದಲ್ಲಿರುವ ಯುಎಸ್ ರಾಯಭಾರ (US Embassy) ಕಚೇರಿಯ ಮೇಲೆ ಗುರುವಾರ ಕನಿಷ್ಠ ಮೂರು ರಾಕೆಟ್‌ಗಳನ್ನು ಹಾರಿಸಲಾಗಿದೆ. ಬಳಿಕ ಅಲ್ಲಲ್ಲಿ ಕೋಲಾಹಲ ಉಂಟಾಯಿತು. ಈ ಪೈಕಿ ಒಂದು ರಾಕೆಟ್ ಶಾಲೆಯ ಮೇಲೂ ಬಿದ್ದಿದೆ.

ಯುಎಸ್ ನೆಲೆಗಳ ಮೇಲೆ ರಾಕೆಟ್ ದಾಳಿ:
ಈ ಪೈಕಿ ಎರಡು ರಾಕೆಟ್‌ಗಳು ರಾಯಭಾರ ಕಚೇರಿಯ (US Embassy) ಸುತ್ತಲೂ ಬಿದ್ದಿದ್ದರೆ, ಇನ್ನೊಂದು ವಸತಿ ಪ್ರದೇಶದಲ್ಲಿದ್ದ ಶಾಲೆಗೆ ಅಪ್ಪಳಿಸಿತು ಎಂದು ಇರಾಕಿನ ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ. ಈ ವರ್ಷದ ಆರಂಭದಿಂದಲೂ, ಇರಾಕ್‌ನಲ್ಲಿ ಯುಎಸ್ ಉಪಸ್ಥಿತಿಯನ್ನು ಗುರಿಯಾಗಿಸಿಕೊಂಡು ಡ್ರೋನ್ ಮತ್ತು ರಾಕೆಟ್ ದಾಳಿಯ ಸರಣಿಗಳು ನಡೆದಿವೆ. ಆದರೆ, ದಾಳಿಯಲ್ಲಿ ಪ್ರಾಣಹಾನಿಯಾಗಿದೆಯೇ ಅಥವಾ ಇಲ್ಲವೇ ಎಂಬುದು ಇನ್ನೂ ತಿಳಿದುಬಂದಿಲ್ಲ.

ಇದನ್ನೂ ಓದಿ-  Zero Covid ನಿಯಮ, ಜನರನ್ನು ಲೋಹದ ಪೆಟ್ಟಿಗೆಯಲ್ಲಿ ಮುಚ್ಚಿಟ್ಟ ವಿಡಿಯೋ ವೈರಲ್.. ಎಲ್ಲಿ ಗೊತ್ತಾ?

ಇರಾನ್ ಜನರಲ್ ಅವರ ಮರಣ ವಾರ್ಷಿಕೋತ್ಸವದ ಹಿನ್ನಲೆಯಲ್ಲಿ ದಾಳಿ:
ಗಮನಾರ್ಹವಾಗಿ, ಯುಎಸ್ ದಾಳಿಯಲ್ಲಿ (US Attack) ಇರಾನ್ ಜನರಲ್ ಖಾಸಿಮ್ ಸುಲೇಮಾನಿ (General Qasim Sulemani) ಮತ್ತು ಇರಾಕಿ ಮಿಲಿಟರಿ ಕಮಾಂಡರ್ ಅಬು ಮಹ್ದಿ ಅಲ್-ಮುಹಂದಿಸ್ (Abu Mahdi al-Muhandis) ಕೊಲ್ಲಲ್ಪಟ್ಟ ಎರಡನೇ ವಾರ್ಷಿಕೋತ್ಸವದ ಹಿನ್ನಲೆಯಲ್ಲಿ ಈ ದಾಳಿಗಳನ್ನು ನಡೆಸಲಾಗಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ- COVID-19 ಏಕಾಏಕಿ ಏರಿಕೆ ಕುರಿತು ಎಚ್ಚರಿಕೆ ನೀಡಿದ WHO!

US ಸೈನಿಕರನ್ನು ಗುರಿಯಾಗಿಸಲಾಗುತ್ತಿದೆ:
ಜನವರಿ 6 ರಂದು ಇರಾಕ್ ಮತ್ತು ಸಿರಿಯಾದಲ್ಲಿ ಅಮೆರಿಕದ ಸೈನಿಕರನ್ನು ಗುರಿಯಾಗಿಸಿಕೊಂಡು ಸರಣಿ ದಾಳಿಗಳು ನಡೆದಿವೆ. ಯುಎಸ್ ಸೈನಿಕರನ್ನು ಗುರಿಯಾಗಿಸಿಕೊಂಡು ಈ ದಾಳಿಗಳನ್ನು ನಡೆಸಲಾಗುತ್ತಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News