Viral Photos - ವೈದ್ಯಕೀಯ ವಿಜ್ಞಾನ ಕ್ಷೇತ್ರದಲ್ಲಿ (Medical Science Field) ದಿನನಿತ್ಯ ಬರುವ ಪ್ರಕರಣಗಳಲ್ಲಿ ಕೆಲ ಪ್ರಕರಣಗಳನ್ನು ಕಂಡು ಖುದ್ದು ವೈದ್ಯರೇ ಆಶ್ಚರ್ಯಚಕಿತರಾಗುತ್ತಾರೆ. ಆದರೆ, ಕಾಯಿಲೆಗಳು ಹೆಚ್ಚುತ್ತಿರುವಂತೆಯೇ ಚಿಕಿತ್ಸಾ ಕ್ಷೇತ್ರದಲ್ಲಿಯೂ ಕೂಡ ಸಾಕಷ್ಟು ಪ್ರಗತಿ ಕಾಣಿಸಿಕೊಳ್ಳುತ್ತಿರುವುದು ಒಂದು ಸಮಾಧಾನಕರ ಸಂಗತಿ ಎಂದೇ ಹೇಳಬಹುದು. ಇದೆ ಸರಣಿಯಲ್ಲಿ ಇದೀಗ ಮಹಿಳೆಯೊಬ್ಬಳ ಎದೆ ಭಾಗದಲ್ಲಿ ಕೊಂಬು ಬೆಳೆದಿರುವ ಪ್ರಕರಣ ಮಲೇಷ್ಯಾದಿಂದ (Malaysia) ಬೆಳಕಿಗೆ ಬಂದಿದೆ. ಮೊದಲು ಮಹಿಳೆಗೆ ಆ ಕೊಂಬುಗಳು ಕಾಣಿಸಿಕೊಂಡ ಜಾಗದಲ್ಲಿ ತುರಿಕೆ (Chest Pain) ಶುರುವಾಗಿದ್ದು, ನಂತರ ಅಲ್ಲಿ ಕೊಂಬನ್ನು ನೋಡಿ ಮಹಿಳೆಯ ಪ್ರಜ್ಞೆಯೇ ತಪ್ಪಿಹೋಗಿದೆ.
ವಾಸ್ತವದಲ್ಲಿ, ಈ ಘಟನೆ ಮಲೇಷ್ಯಾದ ಒಂದು ನಗರದಿಂದ ವರದಿಯಾಗಿದೆ (Viral News). ಡೈಲಿ ಮೇಲ್ ನಲ್ಲಿ ಪ್ರಕಟಗೊಂಡ ಪ್ರಕಾರ, ಆರಂಭದಲ್ಲಿ ಈ ಮಹಿಳೆ ತನ್ನ ಎದೆಯಲ್ಲಿ ತುರಿಕೆ ಅನುಭವಿಸಿದ್ದಾಳೆ, ನಂತರ ಅವಳು ಅದನ್ನು ಸಾಮಾನ್ಯ ತುರಿಕೆ ಎಂದು ಭಾವಿಸಿದ್ದಾಳೆ. ಬಳಿಕ ಅವಳಿಗೆ ಹೆಚ್ಚು ತೊಂದರೆಯಾಗಲು ಶುರುವಾಗಿದ್ದು, ಅದಕ್ಕೆ ಔಷಧಿಯನ್ನು ಅನ್ವಯಿಸಲು ಶುರುಮಾಡಿದ್ದಾರೆ. ಆದರೆ, ಔಷಧಿ ಕೆಲಸ ಮಾಡಿಲ್ಲ. ನಂತರ ತುರಿಕೆ ಕಾಣಿಸಿಕೊಂಡ ಜಾಗದಿಂದ ಏನೋ ಹೊರಬರುತ್ತಿರುವುದನ್ನು ನೋಡಿದ ಮಹಿಳೆ ಬೆಚ್ಚಿಬಿದ್ದಿದ್ದಾಳೆ ಮತ್ತು ತಕ್ಷಣ ವೈದ್ಯರನ್ನು ಸಂಪರ್ಕಿಸಿ, ಪರೀಕ್ಷೆಗೆ ಒಳಗಾಗಿದ್ದಾಳೆ.
ಇದನ್ನೂ ಓದಿ-Shanghai Lockdown: ಕೊರೊನಾ ಲಾಕ್ಡೌನ್ ನಲ್ಲಿ ಮನೆಯಲ್ಲಿ ಬಂಧಿಯಾದ ಜನರ ಕಿರುಚಾಟ, Viral Video
ಇದು ಒಂದು ರೀತಿಯ ಕೊಂಬಿನಂತಿದ್ದು ಕ್ರಮೇಣ ಹೆಚ್ಚಾಗುತ್ತಿದೆ ಎಂದು ವೈದ್ಯರ ತಂಡ ಪರೀಕ್ಷೆಯ ಮೂಲಕ ಪತ್ತೆಹಚ್ಚಿದ್ದಾರೆ. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡುವುದು ಅವಶ್ಯಕ ಎಂದು ಮಹಿಳೆಗೆ ವೈದ್ಯರು ಮನವರಿಕೆ ಮಾಡಿಕೊಟ್ಟಿದ್ದಾರೆ, ಇಲ್ಲದಿದ್ದರೆ ಅದರ ಗಾತ್ರ ಮತ್ತು ಉದ್ದವು ತುಂಬಾ ದೊಡ್ದದಾಗಲಿದೆ ಎಂದು ಹೇಳಿದ್ದಾರೆ. ಮಹಿಳೆಯ ಎದೆಯ ಮೇಲೆ ಹೊರಬಂದ ಈ ಕೊಂಬು ಕ್ರಮೇಣ ಐದು ಸೆಂಟಿಮೀಟರ್ ಉದ್ದಕ್ಕೆ ಬೆಳೆದಿದೆ. ಪ್ರಸ್ತುತ ಶಸ್ತ್ರಚಿಕಿತ್ಸೆ ಮಾಡುವ ಮೂಲಕ ಅವುಗಳನ್ನು ತೆಗೆದುಹಾಕಲು ವೈದ್ಯರು ನಿರ್ಧರಿಸಿದ್ದಾರೆ.
ಇದನ್ನೂ ಓದಿ-Viral Video: ಕಿಕ್ಕಿರಿದು ತುಂಬಿದ್ದ ಸ್ಟೇಡಿಯಂನಲ್ಲಿ ಬಾಯ್ ಫ್ರೆಂಡ್ ಗೆ ಕಿಸ್ ಮಾಡಲು ಮುಂದಾದ ಯುವತಿ
ಶಸ್ತ್ರಚಿಕಿತ್ಸೆ ಮೂಲಕ ವೈದ್ಯರು ಮಹಿಳೆಯ ದೇಹದಿಂದ ಇದೀಗ ಕೊಂಬನ್ನು ಹೊರತೆಗೆದಿದ್ದಾರೆ. ಅಪರೂಪದ ಚರ್ಮದ ಸೋಂಕಿನಿಂದಾಗಿ ಮಹಿಳೆಯ ಎದೆಯ ಮೇಲೆ ಈ ಕೊಂಬು ಹೊರಬಂದಿದೆ ಎಂದು ಅವರು ಹೇಳಿದ್ದಾರೆ. ಕೂದಲು, ಚರ್ಮ ಮತ್ತು ಉಗುರುಗಳಲ್ಲಿ ಕೆರಾಟಿನ್ ಎಂಬ ಪ್ರೋಟೀನ್ ಸಂಗ್ರಹವಾಗುವುದರಿಂದ ಉಂಟಾಗುವ ಚರ್ಮದ ಕೊಂಬು ಇದಾಗಿದೆ ಎಂದು ವೈದ್ಯರು ವರದಿ ಮಾಡಿದ್ದಾರೆ. ಆದರೆ, ಶಸ್ತ್ರಚಿಕಿತ್ಸೆಯ ಮೂಲಕ ಅದನ್ನು ತೆಗೆದುಹಾಕಿರುವುದು ಮಹಿಳೆ ನಿಟ್ಟುಸಿರು ಬಿಡುವಂತಾಗಿದೆ ಎಂಬುದು ಮಾತ್ರ ನಿಜ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.