ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರನ್ನು ನವದೆಹಲಿಯಲ್ಲಿ ಭೇಟಿಯಾಗಿ ದ್ವಿಪಕ್ಷೀಯ ಮಾತುಕತೆ ನಡೆಸಿದರು.
ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ವಿಶ್ವ ಆರ್ಥಿಕ ವೇದಿಕೆಯ ಭಾರತ ಆರ್ಥಿಕ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ನಾಲ್ಕು ದಿನಗಳ ಭಾರತಕ್ಕೆ ಪ್ರವಾಸ ಕೈಗೊಂಡಿದ್ದಾರೆ. ಇತ್ತೀಚಿಗೆ ಉಭಯ ದೇಶಗಳ ನಾಯಕರು ನ್ಯೂಯಾರ್ಕ್ ನಲ್ಲಿ ನಡೆದ ವಿಶ್ವಸಂಸ್ಥೆ ಸಭೆಯ ಮಧ್ಯದಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ್ದರು.
A relationship setting the template for bilateral cooperation
PM @narendramodi warmly welcomed Bangladesh PM #SheikhHasina on her visit to India. The leaders have met for the second time in 10 days exemplifying the strength of India-Bangladesh ties. pic.twitter.com/31R0yooFvG
— Raveesh Kumar (@MEAIndia) October 5, 2019
ಎರಡು ದೇಶಗಳ ನಡುವೆ ಹಲವು ಕ್ಷೇತ್ರಗಳ ವಿಚಾರವಾಗಿ ಸಹಕಾರವನ್ನು ವಿಸ್ತರಿಸುವ ಬಗ್ಗೆ ದ್ವೀಪಕ್ಷೀಯ ಮಾತುಕತೆ ನಡೆದಿದೆ ಎನ್ನಲಾಗಿದೆ. ಬಾಂಗ್ಲಾದೇಶದ ಅಧಿಕಾರಿಗಳೊಬ್ಬರು ಹೇಳುವಂತೆ 'ಇದು ದೆಹಲಿಯಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ವೇದಿಕೆಯಲ್ಲಿ ಭಾಗವಹಿಸುವ ಭೇಟಿಯಾಗಿದೆ. ಆದರೆ, ದ್ವಿಪಕ್ಷೀಯ ಸಭೆ ಇದೆ. ಇದು ಕಟ್ಟುನಿಟ್ಟಾಗಿ ದ್ವಿಪಕ್ಷೀಯ ಭೇಟಿಯಲ್ಲ 'ಎಂದು ಹೇಳಿದ್ದಾರೆ.
ಅಸ್ಸಾಂನ ಎನ್‌ಆರ್‌ಸಿಯಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಗುರುವಾರ ಹೇಳಿದ್ದಾರೆ ಮತ್ತು ಅವರ ಕೊನೆಯ ಸಭೆಯಲ್ಲಿ ಪಿಎಂ ಮೋದಿಯವರ ಭರವಸೆಯಿಂದ ತಾವು ತೃಪ್ತರಾಗಿರುವುದಾಗಿ ತಿಳಿಸಿದ್ದಾರೆ.
ಕಳೆದ ವಾರ ನ್ಯೂಯಾರ್ಕ್‌ನಲ್ಲಿ, ಎನ್‌ಆರ್‌ಸಿ ಬಾಂಗ್ಲಾದೇಶದ ಬಗ್ಗೆ ಹೆಚ್ಚಿನ ಕಳವಳದ ವಿಷಯವಾಗಿ ಮಾರ್ಪಟ್ಟಿದೆ ಎಂದು ಹಸೀನಾ ಮೋದಿಗೆ ತಿಳಿಸಿದ್ದರು. ಇನ್ನೊಂದೆಡೆಗೆ ಮೋದಿ ಇದಕ್ಕೆ ಪ್ರತಿಕ್ರಿಯಿಸಿ ಭಾರತ ಮತ್ತು ಬಾಂಗ್ಲಾದೇಶ ಉತ್ತಮ ಸಂಬಂಧಗಳನ್ನು ಹೊಂದಿರುವುದರಿಂದ ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿದ್ದಾರೆಂದು ತಿಳಿದುಬಂದಿದೆ.
: