ಕರೋನಾ ವೈರಸ್ ನಿವಾರಿಸಲು ಚೀನಾ ಜೊತೆ ಭಾರತ ಕೈ ಜೋಡಿಸಲು ಸಿದ್ಧ

ಪ್ರಧಾನಿ ಮೋದಿ ಅವರು ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರಿಗೆ ಪತ್ರ ಬರೆದು ಕರೋನವೈರಸ್ ವಿರುದ್ಧ ಹೋರಾಡಲು ಭಾರತ ಕೈ ಜೋಡಿಸಲಿದೆ ಎಂದು ಹೇಳಿದ್ದಾರೆ. ಇದೇ ವೇಳೆ ಸುಮಾರು 800 ಕ್ಕೂ ಹೆಚ್ಚು ಜನರು ಸಾವನ್ನಪ್ಪಿರುವುದಕ್ಕೆ ಪ್ರಧಾನಿ ಮೋದಿ ಸಂತಾಪ ವ್ಯಕ್ತಪಡಿಸಿದ್ದಾರೆ.

Last Updated : Feb 9, 2020, 07:22 PM IST
ಕರೋನಾ ವೈರಸ್ ನಿವಾರಿಸಲು ಚೀನಾ ಜೊತೆ ಭಾರತ ಕೈ ಜೋಡಿಸಲು ಸಿದ್ಧ  title=
file photo

ನವದೆಹಲಿ: ಪ್ರಧಾನಿ ಮೋದಿ ಅವರು ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರಿಗೆ ಪತ್ರ ಬರೆದು ಕರೋನವೈರಸ್ ವಿರುದ್ಧ ಹೋರಾಡಲು ಭಾರತ ಕೈ ಜೋಡಿಸಲಿದೆ ಎಂದು ಹೇಳಿದ್ದಾರೆ. ಇದೇ ವೇಳೆ ಸುಮಾರು 800 ಕ್ಕೂ ಹೆಚ್ಚು ಜನರು ಸಾವನ್ನಪ್ಪಿರುವುದಕ್ಕೆ ಪ್ರಧಾನಿ ಮೋದಿ ಸಂತಾಪ ವ್ಯಕ್ತಪಡಿಸಿದ್ದಾರೆ.

ಇದುವರೆಗೆ ಚೀನಾದಲ್ಲಿ  ಸುಮಾರು 40,000 ಜನರಿಗೆ ಕರೋನಾ ವೈರಸ್ ಸೋಂಕು ತಗುಲಿದೆ ಎನ್ನಲಾಗಿದೆ. ಚೀನಾಗೆ ಬರೆದ ಪತ್ರದಲ್ಲಿ ಭಾರತೀಯರನ್ನು ಸ್ಥಳಾಂತರಿಸಲು ಅನುಕೂಲ ಮಾಡಿಕೊಟ್ಟಿದ್ದಕ್ಕಾಗಿ ಅವರು ಚೀನಾದ ಅಧ್ಯಕ್ಷರಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.ಕಳೆದ ವಾರ ಏರ್ ಇಂಡಿಯಾದ ಜಂಬೊ ಜೆಟ್ ನ ಎರಡು ವಿಮಾನಗಳು ವುಹಾನ್ ನಲ್ಲಿ 600ಕ್ಕೂ ಅಧಿಕ ಭಾರತೀಯರನ್ನು ಸ್ಥಳಾಂತರಿಸಿದ್ದವು.

ವುಹಾನ್‌ನಿಂದ ಹಿಂತಿರುಗಿಸಲ್ಪಟ್ಟ ಭಾರತೀಯರನ್ನು ದೇಶಾದ್ಯಂತ ವಿಶೇಷವಾಗಿ ಸಿದ್ಧಪಡಿಸಿದ ಸೌಲಭ್ಯಗಳಲ್ಲಿ ಪ್ರತ್ಯೇಕಿಸಲಾಗಿದೆ, ದೆಹಲಿ ಬಳಿಯ ಮಾನೇಸರ್‌ನಲ್ಲಿ ಇದಕ್ಕಾಗಿ ಪ್ರತ್ಯೇಕ ಕೊಠಡಿಗಳನ್ನು ಭಾರತೀಯ ಸೇನೆಯು ಸ್ಥಾಪಿಸಿದೆ. ದೆಹಲಿಯಲ್ಲಿ ಐಟಿಬಿಪಿ ಸ್ಥಾಪಿಸಿದ ಇದೇ ರೀತಿಯ ಸೌಲಭ್ಯದಲ್ಲಿ ಸಂಪರ್ಕ ಹೊಂದಿದವರು ಸೋಂಕಿನಿಂದ ಮುಕ್ತರಾಗಿದ್ದಾರೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ತಿಳಿಸಿದೆ. ಇವರಲ್ಲಿ ಏಳು ಮಾಲ್ಡೀವ್ಸ್ ಪ್ರಜೆಗಳು ಮತ್ತು ಎರಡನೇ ಏರ್ ಇಂಡಿಯಾ ವಿಮಾನದಲ್ಲಿ ಹಿಂತಿರುಗಿದ ಬಾಂಗ್ಲಾದೇಶಿ ಸೇರಿದ್ದಾರೆ.

ಬುಧವಾರ, ಸುದ್ದಿ ಸಂಸ್ಥೆ ಪಿಟಿಐಗೆ ನೀಡಿದ ಸಂದರ್ಶನದಲ್ಲಿ, ಚೀನಾದ ರಾಯಭಾರಿ ಸನ್ ವೀಡಾಂಗ್, ಚೀನಾದಲ್ಲಿನ ಭಾರತೀಯ ನಾಗರಿಕರ ಆರೋಗ್ಯ ಮತ್ತು ಸುರಕ್ಷತೆಯನ್ನು ಕಾಪಾಡಲು ಭಾರತದೊಂದಿಗೆ ಕೆಲಸ ಮಾಡಲು ತಮ್ಮ ದೇಶ ಸಿದ್ಧವಾಗಿದೆ ಎಂದು ಹೇಳಿದರು.

ಭಾರತದಲ್ಲಿ ಕರೋನವೈರಸ್ ಪ್ರಕರಣಗಳು ಮೂರು ಧೃಡಪಟ್ಟಿವೆ; ಮೂವರೂ ಕೇರಳದಿಂದ ವರದಿಯಾಗಿದ್ದು, ವುಹಾನ್‌ನಿಂದ ಮರಳಿ ಕರೆತಂದ ವಿದ್ಯಾರ್ಥಿಗಳು. ಮೂವರು ರಾಜ್ಯಾದ್ಯಂತ ಪ್ರತ್ಯೇಕ ವಾರ್ಡ್‌ಗಳಲ್ಲಿದ್ದು ಸ್ಥಿರ ಸ್ಥಿತಿಯಲ್ಲಿದ್ದಾರೆ ಎಂದು ವರದಿಯಾಗಿದೆ. ಈ ವಾರದ ಆರಂಭದಲ್ಲಿ ಎರಡು ಜರ್ಮನ್ ಸಂಸ್ಥೆಗಳು, ಜಾಗತಿಕ ವಾಯು ಸಂಚಾರ ಮಾದರಿಗಳನ್ನು ವಿಶ್ಲೇಷಿಸಿ, ಭಾರತವು ವೈರಸ್ ಆಮದು ಮಾಡಿಕೊಳ್ಳುವ ಅಪಾಯದಲ್ಲಿರುವ 20 ರಾಷ್ಟ್ರಗಳಲ್ಲಿ ಒಂದಾಗಿದೆ.

ಭಾರತ ಸೇರಿದಂತೆ ಹಲವಾರು ದೇಶಗಳು ತಮ್ಮ ನಾಗರಿಕರನ್ನು ಚೀನಾದಿಂದ ಸ್ಥಳಾಂತರಿಸಲು ಮತ್ತು ಜನರು ಮತ್ತು ಸರಕುಗಳನ್ನು ದೇಶಕ್ಕೆ ಮತ್ತು ಅಲ್ಲಿಂದ ಸಾಗಿಸುವುದನ್ನು ನಿರ್ಬಂಧಿಸಲು ಮುಂದಾಗಿವೆ. ಪೀಡಿತ ಪ್ರದೇಶಗಳಿಂದ ಚಲನೆಯನ್ನು ನಿಯಂತ್ರಿಸಲು ಕಳೆದ ವಾರ ಕೇಂದ್ರವು ಚೀನಾದ ಪ್ರಜೆಗಳು ಮತ್ತು ಅಲ್ಲಿ ವಾಸಿಸುವ ವಿದೇಶಿಯರಿಗೆ ಆನ್‌ಲೈನ್ ವೀಸಾ ಸೌಲಭ್ಯಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿತು.

ಚೀನಾದ ಹುಬೈ ಪ್ರಾಂತ್ಯದ ವುಹಾನ್‌ನಲ್ಲಿನ ಸಮುದ್ರಾಹಾರ ಮಾರುಕಟ್ಟೆಯಲ್ಲಿ ಹುಟ್ಟಿಕೊಂಡಿದೆ ಎಂದು ನಂಬಲಾದ ಕರೋನವೈರಸ್ ಹರಡುವಿಕೆಯಿಂದಾಗಿ (2019-ಎನ್‌ಸಿಒವಿ) ಕಳೆದ ತಿಂಗಳು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಜಾಗತಿಕ ಆರೋಗ್ಯ ತುರ್ತುಸ್ಥಿತಿ ಎಂದು ಘೋಷಿಸಿತು. ಹುಬೈ ಪ್ರಾಂತ್ಯದಲ್ಲಿ ಸುಮಾರು 60 ಮಿಲಿಯನ್ ಜನರು ಲಾಕ್ ಡೌನ್ ಅಡಿಯಲ್ಲಿ ವಾಸಿಸುತ್ತಿದ್ದಾರೆ.

 

Trending News