ಸಿಯೋಲ್: ಶ್ರೀಮಂತರು ಮತ್ತು ಬಡವರ ನಡುವಣ ಆರ್ಥಿಕ ಹಾಗೂ ಸಾಮಾಜಿಕ ಅಂತರ ತಗ್ಗಿಸಲು ಭಾರತ ಮತ್ತು ಜಾಗತಿಕ ಆರ್ಥಿಕ ಅಭಿವೃದ್ಧಿಗೆ ನೀಡಿದ ಕೊಡುಗೆಗಳಿಗಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು 2018ರ ಸಿಯೋಲ್ ಶಾಂತಿ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ.
ಕಳೆದ ಗುರುವಾರ ಸಿಯೋಲ್ನ ಜಂಗ್-ಗು ನಲ್ಲಿ ಈ ಪ್ರಶಸ್ತಿಗಾಗಿ ಆಯ್ಕೆಗೆ ಫೌಂಡೇಶನ್ನ ಅಂತಿಮ ಸಭೆ ನಡೆದಿದ್ದು, ಸಿಯೋಲ್ ಪೀಸ್ ಪ್ರೈಜ್ ಕಲ್ಚರಲ್ ಫೌಂಡೇಶನ್ ಅಧ್ಯಕ್ಷ ಕ್ವೋನ್ ಇ-ಹ್ಯೋಕ್ ಈ ಸಂಬಂಧ ಅಧಿಕೃತ ಪ್ರಕಟಣೆ ನೀಡಿದ್ದಾರೆ.
The world acknowledges.
PM @narendramodi awarded prestigious Seoul Peace Prize 2018 for contribution to high economic growth in India and world through 'Modinomics', contribution to world peace, improving human development & furthering democracy in India. https://t.co/ugXhhG7Dls pic.twitter.com/5e98THX4M8
— Raveesh Kumar (@MEAIndia) October 24, 2018
ಈ ಪ್ರಶಸ್ತಿಯನ್ನು ಪಡೆದವರಲ್ಲಿ ಮೋದಿ ಅವರ ಹದಿನಾಲ್ಕನೇಯವರಾಗಿದ್ದಾರೆ ಎಂದು ಕೇಂದ್ರ ವಿದೇಶ ವ್ಯವಹಾರಗಳ ಸಚಿವಾಲಯ ಹೇಳಿದೆ. ಪ್ರಧಾನಿ ಮೋದಿ ಅವರು ಅಂತಾರಾಷ್ಟ್ರೀಯ ಸಹಕಾರ ಸುಧಾರಣೆ, ಜಾಗತಿಕ ಆರ್ಥಿಕತೆಯ ಬೆಳವಣಿಗೆ, ಭಾರತದಲ್ಲಿ ಮಾನವ ಅಭಿವೃದ್ಧಿ ಸುಧಾರಣೆ ಮತ್ತು ಭಾರತವನ್ನು ವಿಶ್ವದ ಅತ್ಯಂತ ವೇಗದಲ್ಲಿ ಬೆಳವಣಿಗೆ ಕಾಣುತ್ತಿರುವ ದೇಶವನ್ನಾಗಿ ಪರಿವರ್ತಿಸುವಲ್ಲಿ ಗೈದಿರುವ ಸಾಧನೆಗಾಗಿ ಈ ಪ್ರಶಸ್ತಿಯನ್ನು ಅವರಿಗೆ ನೀಡಲಾಗಿದೆ ಎಂದು ಸೋಲ್ ಶಾಂತಿ ಪುರಸ್ಕಾರ ಸಮಿತಿಯು ಹೇಳಿರುವುದಾಗಿ ಭಾರತ ಸರಕಾರ ತಿಳಿಸಿದೆ.
ಜಾಗತಿಕ ಆರ್ಥಿಕ ಬೆಳವಣಿಗೆಯನ್ನು ಹೆಚ್ಚಿಸುವುದು, ಭಾರತ ಜನತೆಯ ಮಾನವ ಅಭಿವೃದ್ಧಿ, ವಿಶ್ವದ ವೇಗವಾಗಿ ಬೆಳೆಯುತ್ತಿರುವ ದೊಡ್ಡ ಆರ್ಥಿಕ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ವಿರೋಧಿ ಮತ್ತು ಸಾಮಾಜಿಕ ಏಕೀಕರಣದ ಪ್ರಯತ್ನಗಳ ಮೂಲಕ ಪ್ರಜಾಪ್ರಭುತ್ವದ ಅಭಿವೃದ್ಧಿಯನ್ನು ಮತ್ತಷ್ಟು ಹೆಚ್ಚಿಸುತ್ತದೆ ಎಂದಿರುವ ಸಿಯೋಲ್ ಶಾಂತಿ ಪ್ರಶಸ್ತಿ ಸಮಿತಿ ಪ್ರಧಾನಿ ನರೇಂದ್ರ ಮೋದಿ ಅವರು ತೆಗೆದುಕೊಂಡಿರುವ ದಿಟ್ಟ ಹೆಜ್ಜೆಗಳನ್ನು ಪ್ರಶಂಸಿಸಿದೆ.