ಲಂಡನ್: ಟ್ರಕ್ ಕಂಟೇನರ್‌ನಲ್ಲಿ ಬರೋಬ್ಬರಿ 39 ಶವಗಳು ಪತ್ತೆ!

ಪೂರ್ವ ಲಂಡನ್ ನ ಇಂಡಸ್ಟ್ರೀಯಲ್ ಪಾರ್ಕ್ ನಲ್ಲಿ ನಿಂತಿದ್ದ ಟ್ರಕ್ ಕಂಟೈನರ್ ನಲ್ಲಿ 39 ಮೃತದೇಹಗಳು ಪತ್ತೆಯಾಗಿದ್ದು, ಇದರಲ್ಲಿ ಓರ್ವ ಅಪ್ತ್ರಾಪ್ತನ ಶವವೂ ಸೇರಿದೆ ಎನ್ನಲಾಗಿದೆ.

Last Updated : Oct 23, 2019, 04:55 PM IST
ಲಂಡನ್: ಟ್ರಕ್ ಕಂಟೇನರ್‌ನಲ್ಲಿ ಬರೋಬ್ಬರಿ 39 ಶವಗಳು ಪತ್ತೆ!  title=

ಲಂಡನ್: ಲಂಡನ್‌ನ ಪೂರ್ವದಲ್ಲಿರುವ ಕೈಗಾರಿಕಾ ವಲಯದಲ್ಲಿ ಬಲ್ಗೇರಿಯಾದಿಂದ ಬಂದ ಟ್ರಕ್ ಕಂಟೇನರ್‌ನೊಳಗೆ 39 ಮೃತದೇಹಗಳು ಮತ್ತೆಯಾಗಿರುವ ಘಟನೆ ಬುಧವಾರ ನಡೆದಿದೆ ಎಂದು ಬ್ರಿಟಿಷ್ ಪೊಲೀಸರು ತಿಳಿಸಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಎಸ್ಸೆಕ್ಸ್ ಪೊಲೀಸರು, ಪೂರ್ವ ಲಂಡನ್ ನ ಇಂಡಸ್ಟ್ರೀಯಲ್ ಪಾರ್ಕ್ ನಲ್ಲಿ ನಿಂತಿದ್ದ ಟ್ರಕ್ ಕಂಟೈನರ್ ನಲ್ಲಿ 39 ಮೃತದೇಹಗಳು ಪತ್ತೆಯಾಗಿದ್ದು, ಇದರಲ್ಲಿ ಓರ್ವ ಅಪ್ತ್ರಾಪ್ತನ ಶವವೂ ಸೇರಿದೆ ಎನ್ನಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಐರ್ಲ್ಯಾಂಡ್ ನ 25 ವರ್ಷದ ಯುವಕನನ್ನು ಬಂಧಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ. ಈ ಘಟನೆಯಿಂದ ಇಡೀ ಲಂಡನ್ ನಗರವೇ ಬೆಚ್ಚಿ ಬಿದ್ದಿದೆ. 

ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸಿರುವ ಪ್ರಧಾನಿ ಬೋರಿಸ್ ಜಾನ್ಸನ್ ಅವರು, ಎಸೆಕ್ಸ್‌ನಲ್ಲಿ ನಡೆದ ಈ ದುರಂತ ಘಟನೆಯಿಂದ ನಾನು ಕಳವಳಗೊಂಡಿದ್ದೇನೆ. ಘಟನೆ ಬಗ್ಗೆ ಅಪ್ಡೇಟ್ ಗಳನ್ನೂ ಸ್ವಿಕರಿಸುತ್ತಿದ್ದು,  ಏನಾಯಿತು ಎಂಬುದರ ಬಗ್ಗೆ ಗೃಹ ಸಚಿವಾಲಯವು ಎಸೆಕ್ಸ್ ಪೊಲೀಸರೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತಿದೆ ಎಂದಿದ್ದು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. 

Trending News