PM Modi US Visit: ಪ್ರಧಾನಿ ಮೋದಿ ಭೇಟಿ ಹಿನ್ನೆಲೆ ಯುಎಸ್ ನಲ್ಲಿ ಭಾರಿ ಸಂಭ್ರಮ, 'ಐತಿಹಾಸಿಕ ಭೇಟಿ ಇದಾಗಿರಲಿದೆ' ಎಂದ ಪೆಂಟಗನ್

US-India Relations: ಅಧ್ಯಕ್ಷ ಜೋ ಬಿಡನ್ ಮತ್ತು ಯುಎಸ್ ಪ್ರಥಮ ಮಹಿಳೆ ಜಿಲ್ ಬಿಡೆನ್ ಅವರ ಆಹ್ವಾನದ ಮೇರೆಗೆ ಪ್ರಧಾನಿ ಮೋದಿ ಈ ತಿಂಗಳು ಯುಎಸ್‌ಗೆ ಭೇಟಿ ನೀಡಲಿದ್ದಾರೆ. ಅವರ ನಾಲ್ಕು ದಿನಗಳ ಭೇಟಿ ಜೂನ್ 21 ರಂದು ಆರಂಭವಾಗಲಿದೆ. ಬಿಡೆನ್ ದಂಪತಿಗಳು ಜೂನ್ 22 ರಂದು ಔತಣಕೂಟದಲ್ಲಿ ಮೋದಿಯವರಿಗೆ ಆತಿಥ್ಯ ನೀಡಲಿದ್ದಾರೆ.  

Written by - Nitin Tabib | Last Updated : Jun 9, 2023, 04:36 PM IST

    ಇದಕ್ಕೂ ಮುಂದುವರೆದು ಮಾತನಾಡಿರುವ ರಾಟ್ನರ್, "ಈ ವರ್ಷದ ಆರಂಭದಲ್ಲಿ ಜಪಾನ್‌ನೊಂದಿಗಿನ

    'ಟೂ ಪ್ಲಸ್ ಟೂ' ಮಾತುಕತೆಗಳನ್ನು ಸಂಬಂಧದಲ್ಲಿ ಮಹತ್ವದ ಕ್ಷಣವೆಂದು ಪರಿಗಣಿಸಿದ ರೀತಿಯಲ್ಲಿಯೇ

    ಈ ಭೇಟಿಯನ್ನು ನೋಡಲಾಗುವುದು ಎಂದು ನಾನು ಭಾವಿಸುತ್ತೇನೆ."

    "ಪ್ರಧಾನಿ ಮೋದಿಯವರ ಈ ಭೇಟಿಯ ವೇಳೆ ಜನರು ಅಮೇರಿಕಾ-ಭಾರತ ಸಂಬಂಧಗಳಲ್ಲಿ ವಾಸ್ತವಿಕ ಜಿಗಿತವನ್ನು ನೋಡಲಿದ್ದಾರೆ ಎಂದು ನಾನು ಭಾವಿಸುತ್ತೇನೆ" ಎಂದಿದ್ದಾರೆ.

PM Modi US Visit: ಪ್ರಧಾನಿ ಮೋದಿ ಭೇಟಿ ಹಿನ್ನೆಲೆ ಯುಎಸ್ ನಲ್ಲಿ ಭಾರಿ ಸಂಭ್ರಮ, 'ಐತಿಹಾಸಿಕ ಭೇಟಿ ಇದಾಗಿರಲಿದೆ' ಎಂದ ಪೆಂಟಗನ್ title=

PM Modi US Visit: ಪ್ರಧಾನಿ ನರೇಂದ್ರ ಮೋದಿಯವರ ಈ ತಿಂಗಳ ಯುಎಸ್ ಭೇಟಿಯು ದ್ವಿಪಕ್ಷೀಯ ಸಂಬಂಧಗಳಿಗೆ ಹೊಸ ಮಾನದಂಡಗಳನ್ನು ಹೊಂದಿಸುವ ನಿರೀಕ್ಷೆಗಳಿಗೆ, ಇದು ರಕ್ಷಣಾ ಕೈಗಾರಿಕಾ ಸಹಕಾರದ ಪ್ರಮುಖ ಘೋಷಣೆಗಳು ಮತ್ತು ಭಾರತದ ಸ್ಥಳೀಯ ಮಿಲಿಟರಿ ಫ್ಲೀಟ್ಗೆ ಉತ್ತೇಜನ ನೀಡಲಿದೆ ಎಂದು ಪೆಂಟಗನ್ ಹೇಳಿದೆ.

ಅಧ್ಯಕ್ಷ ಜೋ ಬಿಡನ್ ಮತ್ತು ಪ್ರಥಮ ಮಹಿಳೆ ಜಿಲ್ ಬಿಡೆನ್ ಅವರ ಆಹ್ವಾನದ ಮೇರೆಗೆ ಪ್ರಧಾನಿ ಮೋದಿ ಈ ತಿಂಗಳು ಯುಎಸ್‌ಗೆ ಭೇಟಿ ನೀಡಲಿದ್ದಾರೆ. ಅವರ ನಾಲ್ಕು ದಿನಗಳ ಭೇಟಿ ಜೂನ್ 21 ರಂದು ಆರಂಭವಾಗಲಿದೆ. ಬಿಡೆನ್ ದಂಪತಿಗಳು ಜೂನ್ 22 ರಂದು ಔತಣಕೂಟದಲ್ಲಿ ಮೋದಿಯವರಿಗೆ ಆತಿಥ್ಯ ನೀಡಲಿದ್ದಾರೆ.

'ಬೆಂಚ್‌ಮಾರ್ಕ್ ಪ್ರಯಾಣ ಸಾಬೀತಾಗಲಿದೆ'
ಈ ಕುರಿತು ಸೆಂಟರ್ ಫಾರ್ ನ್ಯೂ ಅಮೆರಿಕನ್ ಸೆಕ್ಯುರಿಟಿ' ನಲ್ಲಿ ಗುರುವಾರ ನಡೆದ ಪ್ಯಾನೆಲ್ ಚರ್ಚೆಯಲ್ಲಿ ಮಾತನಾಡಿರುವ ಇಂಡೋ-ಪೆಸಿಫಿಕ್ ಭದ್ರತಾ ವ್ಯವಹಾರಗಳ ರಕ್ಷಣಾ ಸಹಾಯಕ ಕಾರ್ಯದರ್ಶಿ ಎಲಿ ರಾಟ್ನರ್ ''ಪ್ರಧಾನಿ ಮೋದಿ ಈ ತಿಂಗಳ ಕೊನೆಯಲ್ಲಿ ಪ್ರವಾಸಕ್ಕಾಗಿ ವಾಷಿಂಗ್ಟನ್‌ಗೆ ಬಂದಾಗ, ಅದು ಉಭಯ ದೇಶಗಳ ನಡುವಿನ ಸಂಬಂಧಗಳಲ್ಲಿ ಹೊಸ ಮಾನದಂಡಗಳನ್ನು ಸ್ಥಾಪಿಸುವ ಐತಿಹಾಸಿಕ ಪ್ರಯಾಣ ಎಂದು ಸಾಬೀತುಪಡಿಸುತ್ತದೆ' ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.

ಇದಕ್ಕೂ ಮುಂದುವರೆದು ಮಾತನಾಡಿರುವ ರಾಟ್ನರ್, "ಈ ವರ್ಷದ ಆರಂಭದಲ್ಲಿ ಜಪಾನ್‌ನೊಂದಿಗಿನ 'ಟೂ  ಪ್ಲಸ್ ಟೂ' ಮಾತುಕತೆಗಳನ್ನು ಸಂಬಂಧದಲ್ಲಿ ಮಹತ್ವದ ಕ್ಷಣವೆಂದು ಪರಿಗಣಿಸಿದ ರೀತಿಯಲ್ಲಿಯೇ ಈ ಭೇಟಿಯನ್ನು ನೋಡಲಾಗುವುದು ಎಂದು ನಾನು ಭಾವಿಸುತ್ತೇನೆ." " ಪ್ರಧಾನಿ ಮೋದಿಯವರ ಈ ಭೇಟಿಯ ವೇಳೆ ಜನರು ಅಮೇರಿಕಾ-ಭಾರತ ಸಂಬಂಧಗಳಲ್ಲಿ ವಾಸ್ತವಿಕ ಜಿಗಿತವನ್ನು ನೋಡಲಿದ್ದಾರೆ ಎಂದು ನಾನು ಭಾವಿಸುತ್ತೇನೆ' ಎಂದಿದ್ದಾರೆ. 

ಹಲವಾರು ದ್ವಿಪಕ್ಷೀಯ ವಿಚಾರಗಳನ್ನು ಮುಂದಕ್ಕೆ ತೆಗೆದುಕೊಂಡು ಹೋಗಲು ಮತ್ತು ನಿರ್ದಿಷ್ಟ ಒಪ್ಪಂದಗಳು ಮತ್ತು ಯೋಜನೆಗಳನ್ನು ಅಂತಿಮಗೊಳಿಸಲು ಪ್ರಧಾನಿಯವರ ವಾಷಿಂಗ್ಟನ್ ಭೇಟಿಗೆ ನೆಲವನ್ನು ಸಿದ್ಧಪಡಿಸಲು ಯುಎಸ್ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಇತ್ತೀಚೆಗೆ ಭಾರತಕ್ಕೆ ಭೇಟಿ ನೀಡಿದ್ದರು ಎಂದು ರಾಟ್ನರ್ ಹೇಳಿದ್ದಾರೆ.

ಇದನ್ನೂ ಓದಿ-Bomb Blast: ಮತ್ತೊಮ್ಮೆ ಭೀಕರ ಬಾಂಬ್ ದಾಳಿಗೆ ನಡುಗಿದ ಅಫ್ಘಾನ್ ಭೂಮಿ, 11 ಜನರ ದುರ್ಮರಣ

ಪ್ರಯಾಣದ ಆದ್ಯತೆಗಳ ಕುರಿತು ಏನು ಹೇಳಿದ್ದಾರೆ
"ರಕ್ಷಣಾ ಸಂಬಂಧಿತ ವಿಷಯಗಳಲ್ಲಿ ಯುಎಸ್ ಮತ್ತು ಭಾರತದ ನಡುವೆ ಸಹ-ಅಭಿವೃದ್ಧಿ ಮತ್ತು ಸಹ-ಉತ್ಪಾದನೆಯ ವಿಷಯದ ಬಗ್ಗೆ ಸ್ಪಷ್ಟವಾದ ಕಾರ್ಯತಂತ್ರದ ಯೋಜನೆಗಳನ್ನು ಸ್ಥಾಪಿಸುವುದು ಈ ಭೇಟಿಯ ಆದ್ಯತೆಯಾಗಿದೆ" ಎಂದು ರಾಟ್ನರ್ ಹೇಳಿದ್ದಾರೆ. ಭಾರತದ ಸ್ಥಳೀಯ ರಕ್ಷಣಾ ಕೈಗಾರಿಕಾ ರಚನೆಯನ್ನು ಬಲಪಡಿಸುವುದರೊಂದಿಗೆ, ಮಿಲಿಟರಿ ಆಧುನೀಕರಣವನ್ನು ವೇಗಗೊಳಿಸುವುದು ಪ್ರಧಾನಿ ಮೋದಿಯವರಿಗೆ ಆದ್ಯತೆಯಾಗಿದೆ ಅವರು ಹೇಳಿದ್ದಾರೆ. 

ಇದನ್ನೂ ಓದಿ-Harvard University: ಅಮೇರಿಕಾದಲ್ಲಿ ಈ ಭಾರತದ ಸಂಜಾತೆಗೆ ಸಿಕ್ತು ಹಾರ್ವರ್ಡ್ ವಿಶ್ವವಿದ್ಯಾಲಯದ ಮಹತ್ವದ ಜವಾಬ್ದಾರಿ

ಎಸ್ ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್‌ಎಸ್‌ಎ) ಜೇಕ್ ಸುಲ್ಲಿವನ್ ಮತ್ತು ಅವರ ಭಾರತೀಯ ಸಹವರ್ತಿ ಅಜಿತ್ ದೋವಲ್ ಈ ವರ್ಷದ ಜನವರಿಯಲ್ಲಿ ಉದಯೋನ್ಮುಖ ತಂತ್ರಜ್ಞಾನಗಳಿಗಾಗಿ (ಐಸಿಇಟಿ) ಒಂದು ಹೆಗ್ಗುರುತು ಉಪಕ್ರಮವನ್ನು ಆರಂಭಿಸಿದ್ದರು, ಇದು ಯುಎಸ್ ಮತ್ತು ಭಾರತದ ನಡುವೆ ತಂತ್ರಜ್ಞಾನ ಸಹಕಾರವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ ಮತ್ತು ಇದರಿಂದ ರಕ್ಷಣಾ ವಲಯವು ಬಹಳ ಪ್ರಬಲವಾಗಲಿದೆ. ಎರಡೂ ದೇಶಗಳು ಮುಂದುವರಿಯಲು ಬಯಸುವ ಒಂದು ಮಹತ್ವದ ಉಪಕ್ರಮ ಅಂಶ ಇದಾಗಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News