ವಿಶ್ವದ ಜನಪ್ರಿಯ ನಾಯಕರಲ್ಲಿ ಮೋದಿಗೆ 3ನೇ ಸ್ಥಾನ : ಟ್ರಂಪ್'ಗೆ 11ನೇ ಸ್ಥಾನ

ಗ್ಯಾಲಪ್ ಇಂಟರ್‌ನ್ಯಾಶನಲ್ ಸಂಸ್ಥೆ ನಡೆಸಿದ ಜನಪ್ರಿಯ ಜಾಗತಿಕ ನಾಯಕರ ಸಮೀಕ್ಷೆಯಲ್ಲಿ, ಪ್ರಧಾನಿ ನರೇಂದ್ರ ಮೋದಿಯ 3ನೇ ಸ್ಥಾನ ಪಡೆದಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಚೀನಾದ ಅಧ್ಯಕ್ಷ ಜಿನ್‌ಪಿಂಗ್‌ರನ್ನೂ ಹಿಂದಿಕ್ಕಿರುವ ಪ್ರಧಾನಿ ಮೋದಿ, ಜಾಗತಿಕ ಸಮೀಕ್ಷೆಯಲ್ಲಿ ಗಮನ ಸೆಳೆದಿದ್ದಾರೆ. 

Last Updated : Jan 12, 2018, 10:02 AM IST
  • ಗ್ಯಾಲಪ್ ಇಂಟರ್‌ನ್ಯಾಶನಲ್ ಸಂಸ್ಥೆ ನಡೆಸಿದ ಜನಪ್ರಿಯ ಜಾಗತಿಕ ನಾಯಕರ ಸಮೀಕ್ಷೆಯಲ್ಲಿ, ಪ್ರಧಾನಿ ನರೇಂದ್ರ ಮೋದಿಯ 3ನೇ ಸ್ಥಾನ ಪಡೆದಿದ್ದಾರೆ.
  • ಜರ್ಮನ್ ಚಾನ್ಸಲರ್ ಏಂಜೆಲಾ ಮರ್ಕೆಲ್ ಮೊದಲ ಸ್ಥಾನದಲ್ಲಿದ್ದರೆ, ಫ್ರಾನ್ಸ್ ನ ನೂತನ ಪ್ರಧಾನಿ ಎಮ್ಯಾನುವೆಲ್ ಮ್ಯಾಕ್ರನ್ ಎರಡನೇ ಸ್ಥಾನದಲ್ಲಿದ್ದಾರೆ.
  • ನಾಲ್ಕನೇ ಸ್ಥಾನದಲ್ಲಿ ಬ್ರಿಟನ್ ಪ್ರಧಾನಿ ಥೆರೆಸಾ ಮೇ, ಐದನೇ ಸ್ಥಾನದಲ್ಲಿ ಜಿನ್‌ಪಿಂಗ್, ಆರನೇ ಸ್ಥಾನದಲ್ಲಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಇದ್ದಾರೆ. ಟ್ರಂಪ್ 11ನೇ ಸ್ಥಾನದಲ್ಲಿದ್ದಾರೆ.
ವಿಶ್ವದ ಜನಪ್ರಿಯ ನಾಯಕರಲ್ಲಿ ಮೋದಿಗೆ 3ನೇ ಸ್ಥಾನ : ಟ್ರಂಪ್'ಗೆ 11ನೇ ಸ್ಥಾನ title=

ನವದೆಹಲಿ : ಜನಪ್ರಿಯ ಜಾಗತಿಕ ನಾಯಕರ ಸಮೀಕ್ಷೆಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಚೀನಾದ ಅಧ್ಯಕ್ಷ ಜಿನ್‌ಪಿಂಗ್‌ರನ್ನೂ ಹಿಂದಿಕ್ಕಿ ಭಾರತದ ಪ್ರಧಾನಿ ನರೇಂದ್ರ ಮೋದಿ 3ನೇ ಸ್ಥಾನ ಪಡೆದಿದ್ದಾರೆ. 

ಗ್ಯಾಲಪ್ ಇಂಟರ್‌ನ್ಯಾಶನಲ್ ಸಂಸ್ಥೆ ನಡೆಸಿದ ಜನಪ್ರಿಯ ಜಾಗತಿಕ ನಾಯಕರ ಸಮೀಕ್ಷೆಯಲ್ಲಿ, ಪ್ರಧಾನಿ ನರೇಂದ್ರ ಮೋದಿಯ 3ನೇ ಸ್ಥಾನ ಪಡೆದಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಚೀನಾದ ಅಧ್ಯಕ್ಷ ಜಿನ್‌ಪಿಂಗ್‌ರನ್ನೂ ಹಿಂದಿಕ್ಕಿರುವ ಪ್ರಧಾನಿ ಮೋದಿ, ಜಾಗತಿಕ ಸಮೀಕ್ಷೆಯಲ್ಲಿ ಗಮನ ಸೆಳೆದಿದ್ದಾರೆ. 

ಜಗತ್ತಿನ ಜನಪ್ರಿಯ ನಾಯಕರಲ್ಲಿ ಜರ್ಮನ್ ಚಾನ್ಸಲರ್ ಏಂಜೆಲಾ ಮರ್ಕೆಲ್ ಮೊದಲ ಸ್ಥಾನದಲ್ಲಿದ್ದರೆ, ಫ್ರಾನ್ಸ್ ನ ನೂತನ ಪ್ರಧಾನಿ ಎಮ್ಯಾನುವೆಲ್ ಮ್ಯಾಕ್ರನ್ ಎರಡನೇ ಸ್ಥಾನದಲ್ಲಿದ್ದಾರೆ. ನಾಲ್ಕನೇ ಸ್ಥಾನದಲ್ಲಿ ಬ್ರಿಟನ್ ಪ್ರಧಾನಿ ಥೆರೆಸಾ ಮೇ, ಐದನೇ ಸ್ಥಾನದಲ್ಲಿ ಜಿನ್‌ಪಿಂಗ್, ಆರನೇ ಸ್ಥಾನದಲ್ಲಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಇದ್ದಾರೆ. ಟ್ರಂಪ್ 11ನೇ ಸ್ಥಾನದಲ್ಲಿದ್ದಾರೆ.

ಪ್ರಧಾನಿ ಮೋದಿ ಅವರು ಭಾರತದ ಚುನಾವಣಾ ಇತಿಹಾಸದಲ್ಲಿ ಅನೇಕ ಮೈಲಿಗಲ್ಲುಗಳನ್ನು ಸಾಧಿಸಿದ್ದಾರೆ - ಅದರಲ್ಲಿ ಗುಜರಾತ್ ಚುನಾವಣೆಗಳು ಮತ್ತು ಇತರ ಹಲವು ವಿಧಾನಸಭೆ ಚುನಾವಣೆಗಳು ಇತ್ತೀಚಿನವು. ಅಂತಾರಾಷ್ಟ್ರೀಯ ರಾಜತಾಂತ್ರಿಕತೆಗೆ ಬಂದರೆ ಕಾಂಗ್ರೆಸ್ ನೇತಾರ ಜವಾಹರಲಾಲ್ ನೆಹರೂ ಅವರಿಗೆ ಸಮನಾದ ಸ್ಥಾನವನ್ನು ಬಿಜೆಪಿಯಿಂದ ಮೋದಿ ಪಡೆದಿದ್ದಾರೆ. 

ಗ್ಯಾಲುಪ್ ಇಂಟರ್ನ್ಯಾಷನಲ್ ವಾರ್ಷಿಕ ಸಮೀಕ್ಷೆಯು ಬಿಜೆಪಿ 2018ರ ಚುನಾವಣಾ ಪ್ರಚಾರದ ಸಾಲಿಗೆ ಮತ್ತಷ್ಟು ಉತ್ತೇಜನ ನೀಡಲಿದ್ದು, ಪಕ್ಷಕ್ಕೆ ಹೆಚ್ಚಿನ ಲಾಭಾಂಶವನ್ನು ತರಲಿದೆ.

ಮೋದಿಯವರು, ಈ ಹಿಂದೆ ಇದ್ದ ಹಲವಾರು ಆಚರಣೆಗಳನ್ನು ಮೀರಿ ನೂತನ ಹಾದಿಯನ್ನು ತುಳಿದವರು.  ಇದು ವಿದೇಶಿ ಮುಖಂಡರನ್ನು ಭೇಟಿಯಾಗಲು ಮತ್ತು ಪ್ರಪಂಚದ ಹಲವು ಪ್ರಮುಖ ಮುಖಂಡರೊಂದಿಗೆ ಸೌಹಾರ್ದ ಒಪ್ಪಂದಗಳನ್ನು ಮಾಡಿಕೊಂಡಿಕೊಳ್ಳಲು ಸಹಾಯವಾಗಿದೆ. ಅವರು ಇಸ್ರೇಲ್ಗೆ ಭೇಟಿ ನೀಡುವ ಮೂಲಕ ದೇಶದ ರಾಜತಾಂತ್ರಿಕ ಸಂಬಂಧಗಳಲ್ಲಿ ಹೊಸ ಯುಗವನ್ನೇ ಸೃಷ್ಟಿಸಿದರು.  

ಇಸ್ರೇಲ್ನ ಮುಖ್ಯಸ್ಥ ಬೆಂಜಮಿನ್ ನೇತನ್ಯಾಹು ಈ ಸಮೀಕ್ಷೆ ಪಟ್ಟಿಯಲ್ಲಿ ಎಂಟನೆಯ ಸ್ಥಾನದಲ್ಲಿದ್ದರೆ, 9ನೇ ಸ್ಥಾನದಲ್ಲಿ ಇರಾನ್ ಅಧ್ಯಕ್ಷ ಹಸನ್ ರೌಹಾನಿ ಇದ್ದಾರೆ. ಆದರೆ ಯು.ಎಸ್. ಟರ್ಕಿಶ್ ಅಧ್ಯಕ್ಷ ಎರ್ಡೊಗನ್ ಟ್ರಂಪ್ಗಿಂತ ಹೆಚ್ಚಿನ ಸ್ಥಾನದಲ್ಲಿದ್ದಾರೆ. ಟ್ರಂಪ್ಗಿಂತ ಪೋಪ್ ಕೆಳಸ್ಥಾನದಲ್ಲಿದ್ದಾರೆ.

Trending News