ಜಪಾನ್ ಮತ್ತು ಗಾಂಧೀಜಿಯ 3 ಪ್ರಸಿದ್ಧ ಮಂಗಗಳ ನಡುವಿನ ನಂಟು ತಿಳಿಸಿದ ಮೋದಿ..!

ಜಪಾನ್ ಮತ್ತು ಮಹಾತ್ಮ ಗಾಂಧೀಜಿಯವರ ಮೂರು ಪ್ರಸಿದ್ಧ ಮಂಗಗಳ ನಡುವಿನ ನಂಟನ್ನು ಪ್ರಧಾನಿ ನರೇಂದ್ರ ಮೋದಿ ಗುರುವಾರದಂದು ಬಹಿರಂಗಪಡಿಸಿದ್ದಾರೆ. 

Last Updated : Jun 27, 2019, 08:11 PM IST
 ಜಪಾನ್ ಮತ್ತು ಗಾಂಧೀಜಿಯ 3 ಪ್ರಸಿದ್ಧ ಮಂಗಗಳ ನಡುವಿನ ನಂಟು ತಿಳಿಸಿದ ಮೋದಿ..!  title=
Wikimedia Commons

ನವದೆಹಲಿ: ಜಪಾನ್ ಮತ್ತು ಮಹಾತ್ಮ ಗಾಂಧೀಜಿಯವರ ಮೂರು ಪ್ರಸಿದ್ಧ ಮಂಗಗಳ ನಡುವಿನ ನಂಟನ್ನು ಪ್ರಧಾನಿ ನರೇಂದ್ರ ಮೋದಿ ಗುರುವಾರದಂದು ಬಹಿರಂಗಪಡಿಸಿದ್ದಾರೆ. 

ರಾಷ್ಟಪಿತ ಮಹಾತ್ಮಾ ಗಾಂಧಿ ಅವರ ಮೂರು ಮಂಗಗಳು ಕೆಟ್ಟದ್ದನ್ನು ನೋಡಬೇಡಿ, ಕೆಟ್ಟದ್ದನ್ನು ಕೇಳಬೇಡಿ, ಕೆಟ್ಟದ್ದನ್ನು ಮಾತನಾಡಬೇಡಿ" ಎಂಬ ಮೂರು ತತ್ವಗಳನ್ನು ಪ್ರತಿಪಾದಿಸುತ್ತವೆ.ಈ ಮಂಗಗಳು 17 ನೇ ಶತಮಾನದ ಜಪಾನ್‌ನ ಮೂರು ಪ್ರಸಿದ್ಧ ಕೋತಿಗಳಿಂದ ಬಂದಿವೆ ಎನ್ನುವ ಸಂಗತಿಯನ್ನು ಜಿ-20 ಶೃಂಗ ಸಭೆಯಲ್ಲಿ ಭಾಗವಹಿಸಲು ಜಪಾನ್ ಪ್ರವಾಸದಲ್ಲಿರುವ ಮೋದಿ ತಿಳಿಸಿದ್ದಾರೆ. ಜಪಾನ್‌ನ ಕೋಬೆಯಲ್ಲಿ ಭಾರತೀಯ ವಲಸೆಗಾರರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ದುಷ್ಟರ ವಿರುದ್ಧ ಸಂದೇಶವನ್ನು ರವಾನಿಸುವ ಪ್ರಸಿದ್ಧ ಮಂಗಗಳು ಎಲ್ಲರಿಗೂ ತಿಳಿದಿದೆ ಆದರೆ ಚಿತ್ರಾತ್ಮಕ ಮೂಲ ಜಪಾನ್‌ನಲ್ಲಿದೆ ಎಂದು ಹೇಳಿದರು.

ಈ ಮೂರು ಮಂಗಗಳು 17 ನೇ ಶತಮಾನದಲ್ಲಿ ಜಪಾನಿನ ನಗರವಾದ ನಿಕ್ಕೊದಲ್ಲಿ ಪ್ರಸಿದ್ಧ ತೋಶೊ-ಗು ದೇಗುಲದ ಬಾಗಿಲಿನ ಮೇಲಿರುವ ಕೆತ್ತನೆಯಲ್ಲಿ ಕಂಡುಬಂದಿವೆ. ಹಿಡಾರಿ ಜಿಂಗೊರೊ ಈ ಕೆತ್ತನೆಗಳನ್ನು ಮಾಡಿದ್ದಾರೆ, ಇದಕ್ಕೆ ಕನ್ಫ್ಯೂಷಿಯಸ್‌ನ ನೀತಿ ಸಂಹಿತೆಯನ್ನು ಸಂಯೋಜಿಸಿದ್ದಾರೆ ಎನ್ನಲಾಗಿದೆ, ಈ ಮಂಗಗಳನ್ನು ಮನುಷ್ಯನ ಜೀವನ ಚಕ್ರವನ್ನು ಚಿತ್ರಿಸುವ ಮಾರ್ಗವಾಗಿ ಬಳಸಿಕೊಳ್ಳಲಾಗಿದೆ. ಟೋಕಿಯೊ ಸುತ್ತಮುತ್ತ ಜಪಾನ್‌ನ ಪೂರ್ವ ಭಾಗದಲ್ಲಿ ಇಂತಹ  ಗಣನೀಯ ಸಂಖ್ಯೆಯ ಕಲ್ಲಿನ ಸ್ಮಾರಕಗಳನ್ನು ಕಾಣಬಹುದು.

Trending News