ಶ್ರೀಲಂಕಾಗೆ ಭೇಟಿ ನೀಡಲಿರುವ ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಲಿದ್ದಾರೆ. ಈ ಸಂದರ್ಭದಲ್ಲಿ ಅವರು ಅಧ್ಯಕ್ಷ ಮೈಥಿಪ್ರಲಾ ಸಿರಿಸೇನೊಂದಿಗೆ  ದ್ವೀಪಕ್ಷಿಯ ಬೆಳವಣಿಗೆಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ ಎಂದು ಕೊಲೊಂಬೋದ ಅಧ್ಯಕ್ಷೀಯ ಕಚೇರಿ ತಿಳಿಸಿದೆ. 

Last Updated : Jun 7, 2019, 07:29 PM IST
ಶ್ರೀಲಂಕಾಗೆ ಭೇಟಿ ನೀಡಲಿರುವ ಪ್ರಧಾನಿ ಮೋದಿ  title=

ಕೊಲಂಬೊ: ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಲಿದ್ದಾರೆ. ಈ ಸಂದರ್ಭದಲ್ಲಿ ಅವರು ಅಧ್ಯಕ್ಷ ಮೈಥಿಪ್ರಲಾ ಸಿರಿಸೇನೊಂದಿಗೆ  ದ್ವೀಪಕ್ಷಿಯ ಬೆಳವಣಿಗೆಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ ಎಂದು ಕೊಲೊಂಬೋದ ಅಧ್ಯಕ್ಷೀಯ ಕಚೇರಿ ತಿಳಿಸಿದೆ. 

ವಿಶೇಷವೆಂದರೆ ಈಸ್ಟರ್ ಬಾಂಬ್ ಸ್ಫೋಟದ ಘಟನೆ ನಂತರ ಶ್ರೀಲಂಕಾಗೆ ಭೇಟಿ ನೀಡುತ್ತಿರುವ ಮೊದಲ ನಾಯಕ ಪ್ರಧಾನಿ ಮೋದಿ ಆಗಿದ್ದಾರೆ ಎಂದು ತಿಳಿದುಬಂದಿದೆ.  ಇದು ಶ್ರೀಲಂಕಾಕ್ಕೆ ನೀಡುತ್ತಿರುವ ಮೂರನೇ ಭೇಟಿಯಾಗಲಿದೆ. ಈ ಹಿಂದೆ 2015 ಮತ್ತು 2017 ರಲ್ಲಿ ಭೇಟಿ ನೀಡಿದ್ದರು.

ಶ್ರೀಲಂಕಾದ ಅಧ್ಯಕ್ಷ ಸಿರಿಸೇನಾ ಆಯೋಜಿಸಿದ್ದ ಅಧಿಕೃತ ಭೋಜನಕೂಟದಲ್ಲಿ ಮೋದಿ ಭಾಗವಹಿಸಲಿದ್ದಾರೆ ಮತ್ತು ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಮೋದಿ ಭೇಟಿ ಹಿನ್ನಲೆಯಲ್ಲಿ ಶ್ರೀಲಂಕಾದ ಪೋಲಿಸ್ ಸೂಕ್ತ ಭದ್ರತೆ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಮೋದಿ ಭೇಟಿ ನೀಡುತ್ತಿರುವ ಹಿನ್ನಲೆಯಲ್ಲಿ ವಿದೇಶಾಂಗ ಸಚಿವಾಲಯ ಈಗ ಐಕ್ಯತೆ ಸಂದೇಶವನ್ನು ಸೂಚಿಸುವ ನಿಟ್ಟಿನಲ್ಲಿ ಈ ಭೇಟಿಯನ್ನು ಆಯೋಜಿಸಲಾಗಿದೆ ಎಂದು ಹೇಳಿದೆ.

ಭಯೋತ್ಪಾದನೆಯ ನಿವಾರಣೆಗಾಗಿ ಭಾರತ ದೇಶವು ಯಾವುದೇ ರೀತಿಯ ನೆರವನ್ನು ನೀಡಲು ಭಾರತ ಸನ್ನದ್ದವಾಗಿದೆ ಎಂದು ವಿದೇಶಾಂಗ ಇಲಾಖೆ ತಿಳಿಸಿದೆ. ಏಪ್ರಿಲ್ 21 ರಂದು ಬಾಂಬ್ ಸ್ಫೋಟದಿಂದಾಗಿ ಶ್ರೀಲಂಕಾದಲ್ಲಿ 250 ಕ್ಕೂ ಅಧಿಕ ಜನರು ದಾಳಿಯಲ್ಲಿ ಮೃತಪಟ್ಟಿದ್ದರು.

 

Trending News