ಕಾಬೂಲ್: ಪಿಎಚ್‌ಡಿ(Phd) ಮತ್ತು ಸ್ನಾತಕೋತ್ತರ ಪದವಿಗಳು ಮೌಲ್ಯಯುತವಾಗಿಲ್ಲ. ಏಕೆಂದರೆ ಮುಲ್ಲಾಗಳು ಉನ್ನತ ಶಿಕ್ಷಣವನ್ನೇ ಪಡೆಯುವುದಿಲ್ಲ. ಆದರೂ ಅವರು ಎಲ್ಲಕ್ಕಿಂತ ಶ್ರೇಷ್ಠರಾಗಿದ್ದಾರೆ ಎಂದು ತಾಲಿಬಾನ್‌ನ ಶಿಕ್ಷಣ ಸಚಿವ ಶೇಖ್ ಮೊಲ್ವಿ ನೂರುಲ್ಲಾ ಮುನೀರ್(Sheikh Molvi Noorullah Munir) ಹೇಳಿದ್ದಾರೆ. ‘ಯಾವುದೇ ಪಿಎಚ್‌ಡಿ ಪದವಿ, ಸ್ನಾತಕೋತ್ತರ ಪದವಿಗೆ ಇಂದು ಬೆಲೆ ಇಲ್ಲ. ಅಧಿಕಾರದಲ್ಲಿರುವ ಮುಲ್ಲಾಗಳು ಮತ್ತು ತಾಲಿಬಾನ್(ನಾಯಕರು)ಯಾವುದೇ ಪಿಎಚ್‌ಡಿ, ಎಂಎ ಪದವಿ ಅಥವಾ ಪ್ರೌಢ ಶಾಲಾ ಶಿಕ್ಷಣ ಪಡೆದುಕೊಂಡಿಲ್ಲ. ಆದರೆ ಅವರೇ ಎಲ್ಲಕ್ಕಿಂತ ಶ್ರೇಷ್ಠರು’ ಎಂದು ಅವರು ಹೇಳಿದ್ದಾರೆ.
ಮಂಗಳವಾರ ಮುಲ್ಲಾ ಮೊಹಮ್ಮದ್ ಹಸನ್ ಅಖುಂಡ್(Mullah Mohammad Hasan Akhund) ನೇತೃತ್ವದಲ್ಲಿ ತಾಲಿಬಾನ್ ಮಧ್ಯಂತರ ಸರ್ಕಾರವನ್ನು ರಚಿಸಿದೆ. ಅನೇಕ ದಿನಗಳ ಸರ್ಕಸ್ ಬಳಿಕ ಕೊನೆಗೂ ತಾಲಿಬಾನ್ ಆಳ್ವಿಕೆ ಅಫ್ಘಾನಿಸ್ತಾನದಲ್ಲಿ ಶುರುವಾಗಿದೆ. ತಾಲಿಬಾನ್ ಸಂಪುಟದಲ್ಲಿ ಜಾಗತಿಕ ಭಯೋತ್ಪಾದಕ ಸಂಘಟನೆ ಹಕ್ಕಾನಿ ನೆಟ್ವರ್ಕ್ನ ನಾಯಕರು ಸೇರಿದಂತೆ ತಾಲಿಬಾನ್ ನ ಪ್ರಮುಖ ನಾಯಕರು ಉನ್ನತ ಸಚಿವ ಸ್ಥಾನಗಳನ್ನು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: Afghanistan: ತಾಲಿಬಾನ್ ಆಳ್ವಿಕೆಯಲ್ಲಿ ಅಫ್ಘಾನಿಸ್ತಾನ ಹೇಗಿರುತ್ತೆ? ತಾಲಿಬಾನ್‌ನ ನಾಯಕ ಹೇಳಿದ್ದೇನು?
ತಾಲಿಬಾನ್‌ನ(Taliban) ಪ್ರಬಲ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಯಾದ ‘ರೆಹಬಾರಿ ಶುರಾ’ ಮುಖ್ಯಸ್ಥ ಮುಲ್ಲಾ ಹಸನ್ ಹಂಗಾಮಿ ಪ್ರಧಾನಿಯಾಗಿದ್ದು, ಮುಲ್ಲಾ ಅಬ್ದುಲ್ ಘನಿ ಬರದಾರ್ ಅವರು ‘ಹೊಸ ಇಸ್ಲಾಮಿಕ್ ಸರ್ಕಾರ’ ದಲ್ಲಿ ಉಪನಾಯಕರಾಗಿರುತ್ತಾರೆ ಎಂದು ತಾಲಿಬಾನ್ ವಕ್ತಾರ ಜಬಿಹುಲ್ಲಾ ಮುಜಾಹಿದ್ ಕಾಬೂಲ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದ್ದರು.
ಪಾಶ್ಚಿಮಾತ್ಯ ರಾಷ್ಟ್ರಗಳ ಬೆಂಬಲಿತ ಅಫ್ಘಾನ್ ಸರ್ಕಾರ(Afghanistan Govt.) ಪತನಗೊಂಡ ಬಳಿಕ ಆಗಸ್ಟ್ 15 ರಂದು ಕಾಬೂಲ್ ಅನ್ನು ತಾಲಿಬಾನ್(Taliban) ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿತು. 2 ದಶಕಗಳ ಸುದೀರ್ಘ ಅವಧಿಯ ಬಳಿಕ ಅಮೆರಿಕ ಸೇನೆ ಅಫ್ಘಾನ್ ದೇಶದಿಂದ ಕಾಲ್ಕಿತ್ತಿದೆ. ಇದರ ಬೆನ್ನಲ್ಲೆ ತಾಲಿಬಾನ್ ಸರ್ಕಾರ ರಚಿಸಲು ಉಗ್ರ ಸಂಘಟನೆಯ ನಾಯಕರು ಇನ್ನಿಲ್ಲದ ಕಸರತ್ತು ಆರಂಭಿಸಿದ್ದರು. ಸುದೀರ್ಘ ಚರ್ಚೆ, ಮಾತುಕತೆ ನಂತರ ಕೊನೆಗೂ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರ ರಚಿಸಿದೆ. ಮಂಗಳವಾರ ಘೋಷಿಸಿದ ಎಲ್ಲಾ ಕ್ಯಾಬಿನೆಟ್ ಮಂತ್ರಿಗಳು ಈಗಾಗಲೇ ಸ್ಥಾಪಿತವಾದ ತಾಲಿಬಾನ್ ನಾಯಕರಾಗಿದ್ದಾರೆ.
ಇದನ್ನೂ ಓದಿ: ಕ್ವಾರಂಟೈನ್ ಉಲ್ಲಂಘಿಸಿ ಕೊರೊನಾ ಹರಡಿದ್ದ ವ್ಯಕ್ತಿಗೆ 5 ವರ್ಷ ಜೈಲುಶಿಕ್ಷೆ..!
ಅಫ್ಘಾನಿಸ್ತಾನದಲ್ಲಿ(Afghanistan) ತಾಲಿಬಾನ್ ಮರಳಿ ಅಧಿಕಾರಕ್ಕೆ ಬಂದ ನಂತರ ಪರಿಸ್ಥಿತಿ ಬದಲಾಗತೊಡಗಿದೆ. ವಿಶ್ವವಿದ್ಯಾನಿಲಯಕ್ಕೆ ಹಾಜರಾಗುವ ಮಹಿಳೆಯರು ಸಾಂಪ್ರದಾಯಿಕ ಉಡುಪುಗಳನ್ನು ಧರಿಸಬೇಕು ಮತ್ತು ನಕಾಬ್ ಧರಿಸಬೇಕು ಎನ್ನುವುದನ್ನು ಕಡ್ಡಾಯಗೊಳಿಸಲಾಗಿದೆ. ಇದಲ್ಲದೆ ಹುಡುಗರು ಮತ್ತು ಹುಡುಗಿಯರ (education in Kabul) ತರಗತಿಗಳನ್ನು ಪ್ರತ್ಯೇಕವಾಗಿ ನಡೆಸುವಂತೆ ಸೂಚಿಸಲಾಗಿದೆ. ಪ್ರತ್ಯೇಕ ತರಗತಿ ನಡೆಸಲು ಸಾಧ್ಯವಾಗದಿದ್ದರೆ ಹುಡುಗ ಮತ್ತು ಹುಡುಗಿಯರ ನಡುವೆ ಪರದೆ ಹಾಕುವಂತೆ ಆದೇಶಿಸಲಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.