ಪಾಕ್ ಕೇವಲ ಪ್ರಚಾರಕ್ಕಾಗಿ ಯುಎನ್ ಕೋರ್ಟ್ ಬಳಸಿಕೊಳ್ಳುತ್ತಿದೆ- ಭಾರತದ ದಿಟ್ಟ ವಾದ

ಪುಲ್ವಾಮಾದಲ್ಲಿ ಪಾಕ್ ಬೆಂಬಲಿತ ಉಗ್ರರು ಹಾಗೂ ಭಾರತೀಯ ಸೈನ್ಯದ ನಡುವೆ ಗುಂಡಿನ ಚಕಿಮಕಿ ನಡೆದಿರುವ ಸಂದರ್ಭದಲ್ಲಿ ಕುಲಭೂಷಣ್ ಜಾಧವ್ ಅವರಿಗೆ ಪಾಕ್ ನೀಡಿರುವ ಮರಣ ದಂಡನೆ ಶಿಕ್ಷೆಯನ್ನು ವಜಾಗೊಳಿಸಬೇಕೆಂದು ಭಾರತ ಹೇಗ್ ನ ಅಂತರಾಷ್ಟ್ರೀಯ ನ್ಯಾಯಾಲಯದಲ್ಲಿ ವಾದ ಮಾಡುತ್ತಿದೆ.

Last Updated : Feb 18, 2019, 04:36 PM IST
ಪಾಕ್ ಕೇವಲ ಪ್ರಚಾರಕ್ಕಾಗಿ ಯುಎನ್ ಕೋರ್ಟ್ ಬಳಸಿಕೊಳ್ಳುತ್ತಿದೆ- ಭಾರತದ ದಿಟ್ಟ ವಾದ  title=

ನವದೆಹಲಿ: ಪುಲ್ವಾಮಾದಲ್ಲಿ ಪಾಕ್ ಬೆಂಬಲಿತ ಉಗ್ರರು ಹಾಗೂ ಭಾರತೀಯ ಸೈನ್ಯದ ನಡುವೆ ಗುಂಡಿನ ಚಕಿಮಕಿ ನಡೆದಿರುವ ಸಂದರ್ಭದಲ್ಲಿ ಕುಲಭೂಷಣ್ ಜಾಧವ್ ಅವರಿಗೆ ಪಾಕ್ ನೀಡಿರುವ ಮರಣ ದಂಡನೆ ಶಿಕ್ಷೆಯನ್ನು ವಜಾಗೊಳಿಸಬೇಕೆಂದು ಭಾರತ ಹೇಗ್ ನ ಅಂತರಾಷ್ಟ್ರೀಯ ನ್ಯಾಯಾಲಯದಲ್ಲಿ ವಾದ ಮಾಡುತ್ತಿದೆ.

2017 ರಲ್ಲಿ ಪಾಕ್ ಮಿಲಿಟರಿ ಕೋರ್ಟ್ ಕುಲ್ ಭೂಷಣ್  ಜಾಧವ್ ಅವರಿಗೆ ಮರಣ ದಂಡನೆಯನ್ನು ವಿಧಿಸಿತ್ತು.ಆದರೆ ಹೇಗ್ ನಲ್ಲಿರುವ ಅಂತರಾಷ್ಟ್ರೀಯ ನ್ಯಾಯಾಲಯ ಪ್ರಕರಣ ಅಂತಿಮ ತೀರ್ಪು ಮುಗಿಯುವವರೆಗೂ ಯಾವುದೇ ರೀತಿಯ ತೀರ್ಮಾನ ಕೈಗೊಳ್ಳುವ ಹಾಗಿಲ್ಲ ಎಂದು ಆದೇಶಿಸಿತ್ತು.

ಈ ಹಿನ್ನಲೆಯಲ್ಲಿ ಇಂದು ಪ್ರಕರಣದ ವಿಚಾರಣೆ  ಹೇಗ್ ನಲ್ಲಿ ನಡೆಯುತ್ತಿದ್ದು ಭಾರತದ ಪರವಾಗಿ ಪ್ರತಿನಿಧಿಸಿ ವಾಧಿಸಿದ ಹಿರಿಯ ವಕೀಲ ಹರೀಶ್ ಸಾಳ್ವೆ ಪಾಕಿಸ್ತಾನವು ವಿಶ್ವ ಸಂಸ್ಥೆಯ ಕೋರ್ಟ್ ನ್ನು ಕೇವಲ ಪ್ರಚಾರಕ್ಕಾಗಿ ಬಳಸಿಕೊಳ್ಳುತ್ತಿದೆ ಎಂದು ವಾದಿಸಿದರು. ಪಾಕಿಸ್ತಾನವು ಯಾವಾಗಲೂ ತನ್ನ ವಾದದಲ್ಲಿ ಸಾಕ್ಷ್ಯಗಳನ್ನು ಹೊಂದಿಲ್ಲ.ಆದ್ದರಿಂದ ಪಾಕಿಸ್ತಾನದ ಕೋರ್ಟ್ ವಿಚಾರಣೆಯಿಂದ ಈ ಪ್ರಕರಣವನ್ನು ಮುಕ್ತಗೊಳಿಸಬೇಕು.ಏಕೆಂದರೆ ಇದು ಕಾನೂನು ಪ್ರಕ್ರಿಯೆ ಸೂಕ್ತ ರೀತಿಯಲ್ಲಿಲ್ಲ ಎಂದು ವಾದಿಸಿದರು.

ಇದೇ ವೇಳೆ ಪಾಕ್ ಸಲ್ಲಿಸಿರುವ ಆರೋಪಗಳಿಗೆ ಸಾಕ್ಷ್ಯಾದಾರಗಳು ಬೇಕು,ಆದರೆ ಪಾಕ್ ಗೆ ಯಾವುದೇ ರೀತಿಯ ಸಾಕ್ಷ್ಯಾದಾರಗಳು ಇಲ್ಲದಿರುವುದು ಅದರ ದುರ್ಬಲ ಯತ್ನವನ್ನು ತೋರಿಸುತ್ತದೆ.ಆದ್ದರಿಂದ ಪಾಕಿಸ್ತಾನವು ಭಾರತದ ವಿರುದ್ದ ಮಾಡಿರುವ ಈ ಎಲ್ಲ ಉದ್ದೇಶಿತ ಆರೋಪಗಳೆಲ್ಲವೂ ಕೂಡ ವಿಫಲವಾಗಿವೆ ಎಂದು ವಕೀಲ ಸಾಳ್ವೆ ವಾದಿಸಿದರು.

Trending News