Pakistan Train Accident: ಮುಖಾಮುಖಿಯಾದ ಎರಡು ರೈಲುಗಳು, ಅಪಘಾತದಲ್ಲಿ 30 ಮಂದಿ ಸಾವು

Pakistan Train Accident: ಪಾಕಿಸ್ತಾನ ರೈಲು ಅಪಘಾತ: ಸಿಂಧ್ ಪ್ರಾಂತ್ಯದ ಘೋಟ್ಕಿಯಲ್ಲಿ ಮಿಲ್ಲತ್ ಎಕ್ಸ್‌ಪ್ರೆಸ್‌ಗೆ ಸರ್ ಸೈಯದ್ ಎಕ್ಸ್‌ಪ್ರೆಸ್ ರೈಲು ಡಿಕ್ಕಿ ಹೊಡೆದ ಪರಿಣಾಮ 30 ಜನರು ಸಾವನ್ನಪ್ಪಿದ್ದಾರೆ ಮತ್ತು ಹಲವಾರು ಗಾಯಗೊಂಡಿದ್ದಾರೆ.

Written by - Yashaswini V | Last Updated : Jun 7, 2021, 09:50 AM IST
  • ಪಾಕಿಸ್ತಾನದಲ್ಲಿ ದೊಡ್ಡ ರೈಲು ಅಪಘಾತ
  • ಎರಡು ರೈಲುಗಳು ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ 30 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ
  • ಈ ಅಪಘಾತದಲ್ಲಿ ಹಲವು ಮಂದಿ ಗಾಯಗೊಂಡಿದ್ದಾರೆ
Pakistan Train Accident: ಮುಖಾಮುಖಿಯಾದ ಎರಡು ರೈಲುಗಳು, ಅಪಘಾತದಲ್ಲಿ 30 ಮಂದಿ ಸಾವು title=
ಪಾಕಿಸ್ತಾನದಲ್ಲಿ ದೊಡ್ಡ ರೈಲು ಅಪಘಾತ (Image courtesy: Reuters)

ಇಸ್ಲಾಮಾಬಾದ್: Pakistan Train Accident-ಪಾಕಿಸ್ತಾನದಲ್ಲಿ (Pakistan) ಸೋಮವಾರ ಬೆಳಿಗ್ಗೆ ಎರಡು ಎಕ್ಸ್‌ಪ್ರೆಸ್ ರೈಲುಗಳು ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ 30 ಜನರು ಸಾವನ್ನಪ್ಪಿದ್ದಾರೆ ಮತ್ತು ಹಲವಾರು ಮಂದಿ ಗಾಯಗೊಂಡಿದ್ದಾರೆ. ಪಾಕಿಸ್ತಾನದ ಎಆರ್ವೈ ನ್ಯೂಸ್ ಪ್ರಕಾರ, ಸರ್ ಸೈಯದ್ ಎಕ್ಸ್‌ಪ್ರೆಸ್ (Sir Syed Express) ರೈಲು ಸಿಂಧ್ ಪ್ರಾಂತ್ಯದ ಘೋಟ್ಕಿಯಲ್ಲಿರುವ ರೆಟಿ ಮತ್ತು ದಹಾರ್ಕಿ ರೈಲು ನಿಲ್ದಾಣಗಳ ನಡುವೆ ಮಿಲ್ಲತ್ ಎಕ್ಸ್‌ಪ್ರೆಸ್‌ಗೆ (Millat Express) ಡಿಕ್ಕಿ ಹೊಡೆದಿದೆ ಎಂದು ವರದಿಯಾಗಿದೆ.

ಲಾಹೋರ್ ಕಡೆಗೆ ಸಾಗುತ್ತಿದ್ದ ಸರ್ ಸೈಯದ್ ಎಕ್ಸ್‌ಪ್ರೆಸ್ (Sir Syed Express) ರೈಲು ಕರಾಚಿಯಿಂದ ಸರ್ಗೋಡಕ್ಕೆ ಹೋಗುವ ದಾರಿಯಲ್ಲಿ ಹಳಿ ತಪ್ಪಿದ ಮಿಲ್ಲತ್ ಎಕ್ಸ್‌ಪ್ರೆಸ್‌ಗೆ  (Millat Express) ಡಿಕ್ಕಿ ಹೊಡೆದಿದೆ ಎಂದು ವರದಿಗಳು ತಿಳಿಸಿವೆ. ಇದರಿಂದಾಗಿ  ಮಿಲ್ಲತ್ ಎಕ್ಸ್‌ಪ್ರೆಸ್ ರೈಲಿನ ಬೋಗಿಗಳು ಉರುಳಿಬಿದ್ದವು. ಅಪಘಾತದಲ್ಲಿ ಸುಮಾರು 13 ರಿಂದ 14 ಬೋಗಿಗಳು ಹಳಿ ತಪ್ಪಿವೆ ಎಂದು ತಿಳಿದುಬಂದಿದೆ.

ರೈಲು ಅಪಘಾತದಲ್ಲಿ (Train Accident) ಕನಿಷ್ಠ 30 ಜನರು ಸಾವನ್ನಪ್ಪಿದ್ದರೆ, 50 ಮಂದಿ ಗಾಯಗೊಂಡಿದ್ದಾರೆ ಎಂದು ಘೋಟ್ಕಿ ಜಿಲ್ಲಾಧಿಕಾರಿ ಉಸ್ಮಾನ್ ಅಬ್ದುಲ್ಲಾ ಹೇಳಿದ್ದಾರೆ.

ಇದನ್ನೂ ಓದಿ - Citizenship To Non-Muslim Refugees: ದೇಶದ 13 ಜಿಲ್ಲೆಗಳಲ್ಲಿ ವಾಸಿಸುವ ಮುಸ್ಲಿಮೇತರ ಶರಣಾರ್ಥಿಗಳಿಂದ ಭಾರತೀಯ ಪೌರತ್ವಕ್ಕೆ ಅರ್ಜಿ ಆಹ್ವಾನ

ಸುಮಾರು 13 ರಿಂದ 14 ಬೋಗಿಗಳು ಹಳಿ ತಪ್ಪಿದ್ದರೆ, ಆರರಿಂದ ಎಂಟು "ಸಂಪೂರ್ಣವಾಗಿ ನಾಶವಾಗಿವೆ". ಹಲವಾರು ಪ್ರಯಾಣಿಕರು ಇನ್ನೂ ಇವುಗಳ ಅಡಿ ಸಿಕ್ಕಿಬಿದ್ದಿದ್ದಾರೆ ಮತ್ತು ಕಾರ್ಯಾಚರಣೆ ಅಧಿಕಾರಿಗಳಿಗೆ "ಸವಾಲಾಗಿ" ಮಾರ್ಪಟ್ಟಿದೆ ಎಂದು ಘೋಟ್ಕಿ ಜಿಲ್ಲಾಧಿಕಾರಿ ಉಸ್ಮಾನ್ ಅಬ್ದುಲ್ಲಾ ಹೇಳಿದರು.

ಇದು ಸವಾಲಿನ ಕೆಲಸ. ನಾಗರಿಕರನ್ನು ಅಪಘಾತಕ್ಕೊಳಗಾದ ರೈಲಿನ ಅವಶೇಷಗಳಿಂದ ಹೊರತೆಗೆಯಲು ಭಾರೀ ಯಂತ್ರೋಪಕರಣಗಳನ್ನು ಬಳಸಲು ಸಮಯ ತೆಗೆದುಕೊಳ್ಳುತ್ತದೆ ಎಂದು ಅಬ್ದುಲ್ಲಾ ಉಲ್ಲೇಖಿಸಿ DAWN ವರದಿ ಮಾಡಿದೆ.

ಇದನ್ನೂ ಓದಿ - ಪಾಕ್ ಜೈಲಿನಲ್ಲಿ 4 ವರ್ಷ ಕಳೆದ ನಂತರ ಮನೆಗೆ ಬಂದ ಹೈದರಾಬಾದ್ ಟೆಕ್ಕಿ

ಅಪಘಾತದಲ್ಲಿ ಗಾಯಗೊಂಡವರಿಗೆ ಘೋಟ್ಕಿ, ಧಾರ್ಕಿ, ಒಬಾರೊ ಮತ್ತು ಮಿರ್ಪುರ್ ಮ್ಯಾಥೆಲೊ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಗಾಯಾಳುಗಳಿಗೆ ವೈದ್ಯಕೀಯ ನೆರವು ನೀಡಲು ವೈದ್ಯಕೀಯ ಶಿಬಿರವನ್ನು ಸ್ಥಾಪಿಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.

ಪಾಕಿಸ್ತಾನ ರೇಂಜರ್ಸ್ ಸಿಂಧ್‌ಗೆ ಸಂಬಂಧಿಸಿದ ಸೈನಿಕರು ಸ್ಥಳಕ್ಕೆ ತಲುಪಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News