ಭಾರತದ ವಿರೋಧದ ನಡುವೆಯೂ ಪಾಕಿಸ್ತಾನ-ಚೀನಾ ಬಸ್ ಸಂಚಾರಕ್ಕೆ ಚಾಲನೆ

ಪಾಕಿಸ್ತಾನ-ಚೀನಾ ನಡುವಿನ ಬಸ್ ಸಂಚಾರಕ್ಕೆ ಭಾರತದ ತೀವ್ರ ವಿರೋಧದ ನಡುವೆಯೂ ಮಂಗಳವಾರದಂದು ಲಾಹೋರ್ ನಿಂದ ಚಾಲನೆ ನೀಡಲಾಗಿದೆ ಎಂದು ಪಾಕ್ ಮೂಲದ ಡಾನ್ ಪತ್ರಿಕೆ ವರದಿ ಮಾಡಿದೆ.

Last Updated : Nov 6, 2018, 06:51 PM IST
ಭಾರತದ ವಿರೋಧದ ನಡುವೆಯೂ ಪಾಕಿಸ್ತಾನ-ಚೀನಾ ಬಸ್ ಸಂಚಾರಕ್ಕೆ ಚಾಲನೆ  title=
ಸಾಂದರ್ಭಿಕ ಚಿತ್ರ

ನವದೆಹಲಿ: ಪಾಕಿಸ್ತಾನ-ಚೀನಾ ನಡುವಿನ ಬಸ್ ಸಂಚಾರಕ್ಕೆ ಭಾರತದ ತೀವ್ರ ವಿರೋಧದ ನಡುವೆಯೂ ಮಂಗಳವಾರದಂದು ಲಾಹೋರ್ ನಿಂದ ಚಾಲನೆ ನೀಡಲಾಗಿದೆ ಎಂದು ಪಾಕ್ ಮೂಲದ ಡಾನ್ ಪತ್ರಿಕೆ ವರದಿ ಮಾಡಿದೆ.

ಪಾಕಿಸ್ತಾನ ಮೂಲದ ಡಾನ್ ನ್ಯೂಸ್ ಪ್ರಕಾರ, ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ನಲ್ಲಿರುವ ಐಷಾರಾಮಿ ಬಸ್ ಸೇವೆಯನ್ನು ಪಾಕಿಸ್ತಾನ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಮತ್ತು ಶುಜಾ ಎಕ್ಸ್ಪ್ರೆಸ್ ನಿರ್ವಹಿಸುತ್ತಿದೆ.ಈಗ ಈ ಕ್ರಮಕ್ಕೆ ಭಾರತ  ಈ ಬಸ್ ಸಂಚಾರ ಕಾನೂನುಬಾಹಿರ ಮತ್ತು ಅಮಾನ್ಯವಾಗಿದೆ "ಭಾರತದ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯ ಉಲ್ಲಂಘಿಸಿದಂತಾಗಿದೆ" ಎಂದು ಕಳೆದ ವಾರ ವಿದೇಶಾಂಗ ವ್ಯವಹಾರಗಳ ವಕ್ತಾರ ರವೀಶ್ ಕುಮಾರ್ ಹೇಳಿದ್ದರು.

1963 ರ ಚೀನಾ-ಪಾಕಿಸ್ತಾನದ ಬೌಂಡರಿ ಒಪ್ಪಂದ ಎಂದು ಕರೆಯುವ ಈ ಕಾನೂನು ಕಾನೂನುಬಾಹಿರ ಮತ್ತು ಅಮಾನ್ಯವಾಗಿದೆ, ಮತ್ತು ಇದನ್ನು ಭಾರತ ಸರ್ಕಾರ ಎಂದಿಗೂ ಗುರುತಿಸಲ್ಪಟ್ಟಿಲ್ಲ ಎಂದು ತಿಳಿಸಿದೆ. ಹೀಗಾಗಿ,ಅಂತಹ ಯಾವುದೇ ಬಸ್ ಸೇವೆ ಭಾರತದ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯ ಉಲ್ಲಂಘನೆಯಾಗಿದೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.

 

Trending News