ಮಾತುಕತೆಯೊಂದೆ ಭಾರತ-ಪಾಕಿಸ್ತಾನದ ಸಮಸ್ಯೆಗೆ ಪರಿಹಾರ ನೀಡಬಲ್ಲದು -ಚೀನಾ

    

Last Updated : Dec 27, 2017, 05:07 PM IST
ಮಾತುಕತೆಯೊಂದೆ ಭಾರತ-ಪಾಕಿಸ್ತಾನದ ಸಮಸ್ಯೆಗೆ ಪರಿಹಾರ ನೀಡಬಲ್ಲದು -ಚೀನಾ title=

ನವದೆಹಲಿ: ಭಾರತ ಮತ್ತು ಪಾಕಿಸ್ತಾನದ ಸಮಸ್ಯೆಗಳಿಗೆ ಶಾಂತಿಯುತವಾದ ಮಾತುಕತೆ ಪರಿಹಾರ ನೀಡಬಲ್ಲದು ಎಂದು ಚೀನಾ ಅಭಿಪ್ರಾಯ ಪಟ್ಟಿದೆ.

ಚೀನಾದ ವಿದೇಶಿ ವಕ್ತಾರ ಹುವಾ ಚುನ್ಯುಂಗ್ ಇತ್ತೀಚಿಗೆ ಎರಡು ದೇಶಗಳ ನಡುವೆ ಉಂಟಾದ ಘರ್ಷಣೆಯ ಬಗ್ಗೆ ಇಲ್ಲಿನ ಮಾದ್ಯಮಗಳೊಂದಿಗೆ ಮಾತನಾಡುತ್ತಾ  ಎರಡು ದೇಶಗಳು ಈ ಪ್ರದೇಶದಲ್ಲಿ ಶಾಂತಿ ನೆಲೆಯೂರಲು ಎರಡು ದೇಶಗಳು ಶ್ರಮಿಸಬೇಕು ಎಂದು ಸಲಹೆ ನೀಡಿದರು.

ನೆರೆಯ ಮಿತ್ರ ದೇಶಗಳಾಗಿರುವ ಭಾರತ ಮತ್ತು ಪಾಕಿಸ್ತಾನ ನಿರಂತರ ಮಾತುಕತೆ ಮೂಲಕ ತಮ್ಮ ಸಮಸ್ಯೆ ಮತ್ತು ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳಬೇಕು ಆ ಮೂಲಕ ದಕ್ಷಿಣ ಎಶಿಯಾ ಪ್ರದೇಶದಲ್ಲಿ ಶಾಂತಿ ನೆಲೆಸಲು ಪ್ರಯತ್ನಿಸಬೇಕು ಎಂದರು. 

ಇತ್ತೀಚೆಗೆ ಗಡಿ ಪ್ರದೇಶದಲ್ಲಿ  ಭಾರತವು ಪಾಕಿಸ್ತಾನದ ಮೂವರು ಸೈನಿಕರನ್ನು ಗಡಿಯಲ್ಲಿನ ಘರ್ಷಣೆ ವೇಳೆ ಹತ್ಯೆಮಾಡಿತ್ತು ಈ ಹಿನ್ನಲೆಯಲ್ಲಿ ಈ ಚೀನಾದ ಹೇಳಿಕೆ ಬಂದಿರುವುದು ಅತ್ಯಂತ ಮಹತ್ವ ಪಡೆದಿದೆ. 

Trending News