ಟೀಕೆ-ಟಿಪ್ಪಣಿ ತಡೆಯಲು ಟ್ವಿಟ್ಟರ್ ನಲ್ಲಿ ಬರಲಿವೆ ಈ ಹೊಸ ವೈಶಿಷ್ಟ್ಯಗಳು

ಟ್ವಿಟ್ಟರ್ ಅತಿ ಶೀಘ್ರದಲ್ಲಿಯೇ ಕೆಲ ಹೊಸ ವೈಶಿಷ್ಟ್ಯಗಳನ್ನು ಹೊತ್ತು ತರಲಿದ್ದು, ಇವುಗಳ ಸಹಾಯದಿಂದ ಇನ್ಮುಂದೆ ನೀವು ನಿಮ್ಮ ವಿರುದ್ಧ ಟೀಕೆ-ಟಿಪ್ಪಣಿಗಳನ್ನು ಮಾಡುವವರನ್ನು ನಿಯಂತ್ರಿಸಬಹುದಾಗಿದೆ.  

Last Updated : Jan 9, 2020, 04:16 PM IST
ಟೀಕೆ-ಟಿಪ್ಪಣಿ ತಡೆಯಲು ಟ್ವಿಟ್ಟರ್ ನಲ್ಲಿ ಬರಲಿವೆ ಈ ಹೊಸ ವೈಶಿಷ್ಟ್ಯಗಳು title=

ನವದೆಹಲಿ: ಟ್ವಿಟ್ಟರ್ ಬಳಕೆಯಲ್ಲಿ ಯಾವಾಗಲು ಎರಡೂ ಕಡೆಗೂ ಹರಿತವಿರುವ ಕತ್ತಿ ಎಂದೇ ಸಾಬೀತಾಗಿದೆ. ಒಂದೆಡೆ ಈ ಪ್ಲಾಟ್ಫಾರ್ಮ್ ಮೇಲೆ ಒಂದೇ ಒಂದು ಉತ್ತಮ ಕಾಮೆಂಟ್ ಮಾಡುವ ಮೂಲಕ ಜನ ಫೇಮಸ್ ಆಗುತ್ತಿದ್ದರೆ ಇನ್ನೊಂದೆಡೆ, ಹಗುರವಾಗಿ ಅಥವಾ ಲಘುವಾಗಿ ಕಾಮೆಂಟ್ ಮಾಡುವ ಜನರು ಅವಹೇಳನೆಗೂ ಒಳಗಾಗುತ್ತಾರೆ. ಇತ್ತೀಚಿನ ದಿನಗಳಲ್ಲಿ ಈ ಮಾಧ್ಯಮವನ್ನು ಬಳಸಿ ಹಲವರಿಗೆ ಕಿರುಕುಳ ಕೂಡ ನೀಡಲಾಗುತ್ತಿದೆ. ಇದನ್ನು ಮನಗಂಡ ಟ್ವಿಟ್ಟರ್ ಶೀಘ್ರದಲ್ಲಿಯೇ ಕೆಲ ವೈಶಿಷ್ಟ್ಯಗಳನ್ನು ಪರಿಚಯಿಸಲು ಮುಂದಾಗಿದ್ದು, ಈ ವೈಶಿಷ್ಟ್ಯಗಳನ್ನು ಬಳಸಿ ನಿಮ್ಮ ಟ್ವೀಟ್ ಗೆ ಲಘುವಾಗಿ ಟ್ವೀಟ್ ಮಾಡುವವರನ್ನು ನಿಯಂತ್ರಿಸಬಹುದಾಗಿದೆ. 

ರಿಪ್ಲೈ ಮಾಡುವವರಿಗಾಗಿ ನಾಲ್ಕು ಹೊಸ ಆಯ್ಕೆಗಳು ಜಾರಿ
ಅಮೇರಿಕಾದ ಲಾಸ್ ವೇಗಾಸ್ ನಲ್ಲಿ ನಡೆದ ಕನ್ಸೂಮರ್ ಇಲೆಕ್ಟ್ರಾನಿಕ್ ಷೋ ವೇಳೆ ಮಾಹಿತಿ ನೀಡಿರುವ ಟ್ವಿಟ್ಟರ್ ನ ಪ್ರಾಡಕ್ಟ್ ಮ್ಯಾನೆಜ್ಮೆಂಟ್ ನಿರ್ದೇಶಕಿ ಸೂಸನ್ ಷಿ, ಇತ್ತೀಚಿನ ದಿನಗಳಲ್ಲಿ ಟ್ವಿಟ್ಟರ್ ಮೇಲೆ ಆನ್ಲೈನ್ ಬುಲ್ಲಿಂಗ್ ಹಾಗೂ ಕಿರುಕುಳ ನೀಡುವ ಸಾಕಷ್ಟು ಪ್ರಕರಣಗಳು ಬೆಳಕಿಗೆ ಬಂದಿವೆ ಎಂದಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಸಂಸ್ಥೆ ಟ್ವಿಟ್ಟರ್ ನಲ್ಲಿ ಕೆಲ ಹೊಸ ವೈಶಿಷ್ಟ್ಯಗಳನ್ನು ಜೋಡಿಸಲು ನಿರ್ಧರಿಸಿದೆ. ಶೀಘ್ರವೇ ಕಂಪನಿ ಕೆಲ ಟೂಲ್ಸ್ ಗಳನ್ನು ಜಾರಿಗೊಲಿಸಲಿದ್ದು, ಇವುಗಳನ್ನು ಬಳಸಿ ನೀವು ನಿಮ್ಮ ಟ್ವೀಟ್ ಗಳ ಮೇಲೆ ಬರುವ ನಿಮ್ನದರ್ಜೆಯ ಪ್ರತಿಕ್ರಿಯೆಗಳನ್ನು ಕಂಟ್ರೋಲ್ ಮಾಡಬಹುದು ಎಂದಿದ್ದಾರೆ.

ಈ ಹೊಸ ವೈಶಿಷ್ಟ್ಯಗಳನ್ನು ಕಂಪನಿ ಪರಿಚಯಿಸಲಿದೆ
- GLOBAL: ಎಲ್ಲರು ಪ್ರತಿಕ್ರಿಯೆ ನೀಡಬಹುದು
- GROUP: ನೀವು ಹಿಂಬಾಲಿಸುವವರು ಹಾಗೂ ನಿಮ್ಮ ಟ್ವೀಟ್ ನಲ್ಲಿ ಹೆಸರಿಸುವ ವ್ಯಕ್ತಿ ಮಾತ್ರ ಪ್ರತಿಕ್ರಿಯೆ ನೀಡಬಹುದು.
- PANEL: ನೀವು ಟ್ವೀಟ್ ನಲ್ಲಿ ಹೆಸರಿಸುವ ವ್ಯಕ್ತಿ ಮಾತ್ರ ಪ್ರತಿಕ್ರಿಯೆ ನೀಡಬಹುದು.
- STATEMENT: ಎಲ್ಲರನ್ನು ಪ್ರತಿಕ್ರಿಯೆ ನೀಡುವುದರಿಂದ ತಡೆಯಲಿದೆ.

ರಾಜಕೀಯ ಮುಖಂಡರು, ಸೆಲಿಬ್ರಿಟಿಗಳು ಹಾಗೂ ಖ್ಯಾತನಾಮರಿಗೆ ವರವಾಗಿ ಪರಿಣಮಿಸಲಿದೆ
ಇದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಟ್ವಿಟ್ಟರ್ ಸಂಸ್ಥೆಯ ಹಿರಿಯ ಅಧಿಕಾರಿಯೊಬ್ಬರು, ಈ ಹೊಸ ವೈಶಿಷ್ಟ್ಯಗಳು ಬಿಡುಗಡೆಯಾದ ಬಳಿಕ, ಇವು ರಾಜಕೀಯ ಮುಖಂಡರು, ಸೆಲಿಬ್ರಿಟಿಗಳು ಹಾಗೂ ಖ್ಯಾತನಾಮರಿಗೆ ವರವಾಗಿ ಪರಿನಮಿಸಲಿವೆ ಎಂದಿದ್ದಾರೆ. ನಿಜ ಹೇಳುವುದಾದರೆ ಇವರುಗಳು ಮಾಡುವ ಟ್ವೀಟ್ ಗಳಿಗೆ ಮಾತ್ರ ಅಸಭ್ಯವಾಗಿ ಪ್ರತಿಕ್ರಿಯೆಗಳು ಬರುತ್ತವೆ. ಜೊತೆಗೆ ಖ್ಯಾತನಾಮರನ್ನು ಟ್ರೋಲ್ ಮಾಡಲೂ ಕೂಡ ಅನಾವಶ್ಯಕ ಟಿಪ್ಪಣಿಗಳನ್ನು ಮಾಡಿ ಪೀಡಿಸಲಾಗುತ್ತದೆ. ಆನ್ಲೈನ್ ನಲ್ಲಿ ಹರಡುವ ಸುಳ್ಳು ಸುದ್ದಿಗಳನ್ನು ತಡೆಯಲೂ ಸಹ ಕಂಪನಿ ಈ ವೈಶಿಷ್ಟ್ಯಗಳನ್ನು ಪರಿಚಯಿಸಲಿದೆ ಎನ್ನಲಾಗುತ್ತಿದೆ. ಇದೆ ವರ್ಷದಲ್ಲಿ ಈ ಎಲ್ಲ ವೈಶಿಷ್ಟ್ಯಗಳನ್ನು ಟ್ವಿಟ್ಟರ್ ಗೆ ಸೇರಿಸಲಾಗುತ್ತಿದೆ ಎನ್ನಲಾಗಿದೆ.

Trending News