ನವದೆಹಲಿ: Nokia Smartphones 2021 - Nokia ಬ್ರಾಂಡ್ ನ ಸ್ಮಾರ್ಟ್ ಫೋನ್ ಗಳನ್ನು ತಯಾರಿಸುವ ಕಂಪನಿ HMD Global, ಮುಂಬರುವ ತಿಂಗಳಿನಲ್ಲಿ ನೋಕಿಯಾದ ಹೊಸ ಅಂಡ್ರಾಯಿಡ್ ಸ್ಮಾರ್ಟ್ ಫೋನ್ ಗಳನ್ನು ಲೈನ್ ಅಪ್ ಮಾಡುವ ಯೋಜನೆ ರೂಪಿಸಿದೆ. ಈ ಹಿನ್ನೆಲೆಯಲ್ಲಿ ಕಂಪನಿ ಏಕಕಾಲಕ್ಕೆ ಆರು ಅಗ್ಗದ ದರಗಳ ಸ್ಮಾರ್ಟ್ ಫೋನ್ ಗಳನ್ನು ಬಿಡುಗಡೆ ಮಾಡಿದೆ. ಈ ಸ್ಮಾರ್ಟ್ ಫೋನ್ ಗಳು ಮುಂಬರುವ ವಾರಗಳಲ್ಲಿ ಸೆಲ್ ಗಾಗಿ ಸಿದ್ಧವಾಗಲಿವೆ. Nokia X20, Nokia X10, Nokia G20, Nokia G10, Nokia C20 ಹಾಗೂ Nokia C10 ಈ ಸ್ಮಾರ್ಟ್ ಫೋನ್ ಗಳು ಲೈನ್ ಅಪ್ ಆಗಿವೆ.
ನೋಕಿಯಾ ಎಕ್ಸ್ -ಸರಣಿಯ ಫೋನ್ ಗಳು ಟಾಪ್ ಆಫ್ ದಿ ಸೀರಿಸ್ ಫೋನ್ ಗಳು ಆಗಿರಲಿದ್ದರೆ, ಜಿ ಸರಣಿಯ ಫೋನ್ ಗಳು ಮಿಡ್ ರೇಂಜ್ ಅಂಡ್ರಾಯಿಡ್ ಸ್ಮಾರ್ಟ್ ಫೋನ್ ಗಳಾಗಿರಲಿವೆ. ಇನ್ನೊಂದೆಡೆ ಸಿ-ಸರಣಿಯ ಪ್ಹೊಂಗ್ ಗಳು ಬಜೆಟ್ ಫೋನ್ ಮಾರುಕಟ್ಟೆಯ ಕದ ತಟ್ಟಲಿವೆ. ಮೂಲಗಳಿಂದ ದೊರೆತ ಮಾಹಿತಿ ಪ್ರಕಾರ, ಮುಂಬರುವ ದಿನಗಳಲ್ಲಿ ಈ ಸ್ಮಾರ್ಟ್ ಫೋನ್ ಗಳು ರಿಟೇಲ್ ಅಂಗಡಿ ತಲುಪಲಿವೆ. ಆದರೆ ಈ ಫೋನ್ ಗಳು ಭಾರತೀಯ ಮಾರುಕಟ್ಟೆಗೆ ಯಾವಾಗ ಮತ್ತು ಎಲ್ಲಿಂದ ಬರಲಿವೆ ಎಂಬ ಮಾಹಿತಿ ಇನ್ನೂ ಲಭ್ಯವಾಗಿಲ್ಲ.
ಫೋನ್ ವೈಶಿಷ್ಟ್ಯ ಬೆಲೆ ಕುರಿತಾದ ಸಂಕ್ಸಿಪ್ತ ಮಾಹಿತಿ ಇಲ್ಲಿದೆ
- ನೋಕಿಯಾ ಸಿ 20 ಮತ್ತು ನೋಕಿಯಾ ಜಿ 10 ಈ ತಿಂಗಳು ಕೆಲವು ದೇಶಗಳಲ್ಲಿ ಮಾರಾಟವಾಗಲಿದ್ದು, Nokia ಜಿ 20 ಮತ್ತು ನೋಕಿಯಾ ಎಕ್ಸ್ 20 ಮೇ ತಿಂಗಳಲ್ಲಿ ಮಾರಾಟಕ್ಕೆ ಲಭ್ಯವಾಗಲಿದೆ.
- ನೋಕಿಯಾ ಎಕ್ಸ್ 10 ಕೊನೆಯದಾಗಿ ಅಂಗಡಿಗಳಿಗೆ ಬರಲಿದೆ, ಇದನ್ನು ಜೂನ್‌ನಲ್ಲಿ ಬಿಡುಗಡೆ ಮಾಡಲಾಗುವುದು. ನೋಕಿಯಾ ಎಕ್ಸ್ ಸರಣಿಯು ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 480 5 ಜಿ ಮೊಬೈಲ್ ಪ್ಲಾಟ್‌ಫಾರ್ಮ್‌ನಿಂದ ನಿಯಂತ್ರಿಸಲ್ಪಡುತ್ತದೆ ಮತ್ತು ಇದು ಆಂಡ್ರಾಯ್ಡ್ ಒನ್ ಸರಣಿಯ ಫೋನ್‌ಗಳ ಭಾಗವಾಗಲಿದೆ.
- ಎರಡೂ ಫೋನ್‌ಗಳು Zeiss ಆಪ್ಟಿಕ್ಸ್ ಇರಲಿದೆ ಮತ್ತು ಎಕ್ಸ್ 20 ಹಿಂಭಾಗದಲ್ಲಿ ಡ್ಯುಯಲ್-ಸೈಟ್ ವೈಶಿಷ್ಟ್ಯಗಳೊಂದಿಗೆ 64 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಇರಲಿದೆ. ನೋಕಿಯಾ ಎಕ್ಸ್ 10 ನಲ್ಲಿ 48 ಮೆಗಾಪಿಕ್ಸೆಲ್ ಕ್ಯಾಮೆರಾ ಇರಲಿದೆ, ಇದನ್ನು ಕಂಪನಿಯು ಸಿನೆಮ್ಯಾಟಿಕ್ ಕ್ಯಾಪ್ಚರ್ ಎಂದೂ ಕೂಡ ಕರೆಯುತ್ತಿದೆ.
- ನೋಕಿಯಾ ಎಕ್ಸ್ 20 ಮಿಡ್ ನೈಟ್ ಹಾಗೂ ನೈಟ್ ಬ್ಲೂ ಕಲ ಆಪ್ಶನ್ ನಲ್ಲಿ ಸಿಗಲಿದೆ. 6 ಜಿಬಿ RAM+120GB ಆಂತರಿಕ ಶೇಖರಣಾ ಸಾಮರ್ಥ್ಯದ ಜೊತೆಗೆ 8 GB+128GB ಶೇಖರಣಾ ಆಯ್ಕೆಯೊಂದಿಗೂ ಕೂಡ ಸಿಗಲಿದೆ.
- ಭಾರತೀಯ ಮಾರುಕಟ್ಟೆಯಲ್ಲಿ ನೋಕಿಯಾ ಎಕ್ಸ್ 20 ಬೆಲೆ ಸುಮಾರು 31,000 ಇರಲಿದೆ ಎಂದು ಅಂದಾಜಿಸಲಾಗಿದ್ದರೆ, ಎಕ್ಸ್ 10 ಬೆಲೆ 27,500 ರೂ. ಇರುವ ಸಾಧ್ಯತೆ ಇದೆ.
ಇದನ್ನೂ ಓದಿ- ಕೈಗೆಟಕುವ ದರದಲ್ಲಿ Nokia 2.3 ಆಂಡ್ರಾಯ್ಡ್; ಇದರ ವಿಶೇಷತೆ ಏನು ಗೊತ್ತಾ?
- ನೋಕಿಯಾ ಜಿ 20 ಹಾಗೂ ಜಿ 10 ಸ್ಟ್ರಾಂಗ್ ಬ್ಯಾಟರಿ ಬ್ಯಾಕಪ್ ಜೊತೆಗೆ ಎರಡು ವರ್ಷಗಳ ಕ್ವಾಟರಲಿ ಸೆಕ್ಯೂರಿಟಿ ಅಪ್ಡೇಟ್ ಜೊತೆಗೆ ಬರಲಿದೆ. ಇದು ಸ್ಲಿಮ್ಮರ್ ಹಾಗೂ ಮೋರ್ ಸ್ಟ್ರೀಮ್ ಲೈನ್ದ್ andರಾಯಿಡ್ 11 ಗೋ ಅಡಿಶನ್ ಚಾಲಿತವಾಗಿರಲಿದೆ.
- ನೋಕಿಯಾ ಜಿ 20 ನೈಟ್ ಹಾಗೂ ಗ್ಲೆಶಿಯರ್ ಕಲರ್ ಆಪ್ಶನ್ ಹಾಗೂ 4GB + 64GB ಮತ್ತು 4GB + 128GB ವೇರಿಯಂಟ್ ಗಳಲ್ಲಿ ಸಿಗಲಿದೆ.
- ನೋಕಿಯಾ ಜಿ 10 3GB + 32GB ಹಾಗೂ 4GB + 64GB ವೇರಿಯಂಟ್, ನೈಟ್ ಹಾಗೂ ಡಸ್ಕ್ ಕಲರ್ ಆಯ್ಕೆಗಳಲ್ಲಿ ಲಭ್ಯವಿರಲಿದೆ. ಈ ಫೋನ್ ಬೆಲೆ ಭಾರತೀಯ ಮಾರುಕಟ್ಟೆಯಲ್ಲಿ 12 ಸಾವಿರ ಆಸುಪಾಸು ಇರಬಹುದು.
ಇದನ್ನೂ ಓದಿ- ಹೊಸ ವರ್ಷದಲ್ಲಿ ಬಿಡುಗಡೆಯಾಗಲಿದೆ Nokiaದ ಅಗ್ಗದ 5G ಫೋನ್
- ನೋಕಿಯಾ ಸಿ 20 ಹಾಗೂ ಸಿ 10 ಎರಡೂ ಫೋನ್ ಗಳು ಎರಡು ವರ್ಷಗಳ ಸೆಕ್ಯೂರಿಟಿ ಅಪ್ಡೇಟ್ ಪ್ರಾಮಿಸ್ ಜೊತೆಗೆ ಅಂಡ್ರಾಯಿಡ್ 11 ಮತ್ತು ಅಂಡ್ರಾಯಿಡ್ ಗೋ ಅಡಿಶನ್ ಚಾಲಿತವಾಗಿರಲಿವೆ.
- ನೋಕಿಯಾ ಸಿ 20 ಸ್ಯಾಂಡ್ and ಡಾರ್ಕ್ ಕಲರ್ ಆಪ್ಶನ್ ನಲ್ಲಿ ಲಭ್ಯವಿರಲಿವೆ ಹಾಗೂ ಕಾನ್ಫಿಗರೆಶನ್ ಆಪ್ಶನ್ ನಲ್ಲಿ 1GB + 16GB ಹಾಗೂ 2GB + 32GB ಆಯ್ಕೆಗಳು ಲಭ್ಯವಿರಲಿವೆ.
- ಇದರ ಬೆಲೆ ಭಾರತೀಯ ಮಾರುಕಟ್ಟೆಯಲ್ಲಿ ಸುಮಾರು 8000 ರೂ. ಆಸುಪಾಸು ಇರಲಿದೆ. ನೋಕಿಯಾ ಸಿ 10 , 1GB + 16GB, 1GB + 32GB ಹಾಗೂ 2GB + 16GB ವೇರಿಯಂಟ್ ಗಳಲ್ಲಿ ಸಿಗಲಿದೆ. ಇದರೊಂದಿಗೆ ಲೈಟ್, ಪರ್ಪಲ್ ಹಾಗೂ ಗ್ರೇ ಕಲರ್ ಆಯ್ಕೆಗಳು ಕೂಡ ನಿಮಗೆ ಸಿಗಲಿವೆ.
ಇದನ್ನೂ ಓದಿ-Nokia PureBook X14: Smart TV ಬಳಿಕ Laptop ಸೆಗ್ಮೆಂಟ್ ಗೆ ಎಂಟ್ರಿ ನೀಡಿದ Nokia, ತೂಕ ಕೇವಲ 1.1 ಕೆ.ಜಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.