ಆಫ್ಘಾನ್ ದಲ್ಲಿನ ಮಹಿಳೆಯರು, ಬಾಲಕಿಯರ ಪರಿಸ್ಥಿತಿ ಬಗ್ಗೆ ಕಳವಳ ವ್ಯಕ್ತಪಡಿಸಿದ ಮಲಾಲಾ

20 ವರ್ಷಗಳ ಯುಎಸ್ ಮಿಲಿಟರಿ ಕಾರ್ಯಾಚರಣೆಗಳ ನಂತರ ತಾಲಿಬಾನ್‌ಗಳು ಮತ್ತೊಮ್ಮೆ ಯುದ್ಧ-ಪೀಡಿತ ಅಫ್ಘಾನಿಸ್ತಾನ ದೇಶದ ಮೇಲೆ ಹಿಡಿತ ಸಾಧಿಸುತ್ತಿರುವ ಬೆನ್ನಲ್ಲೇ ಅಲ್ಲಿನ ಮಹಿಳೆಯರು ಮತ್ತು ಬಾಲಕಿಯರ ಬಗ್ಗೆ ನೊಬೆಲ್ ಪ್ರಶಸ್ತಿ ವಿಜೇತೆ ಮಲಾಲಾ ಯೂಸಫ್‌ಜಾಯ್ ಕಳವಳ ವ್ಯಕ್ತಪಡಿಸಿದ್ದಾರೆ.

Written by - Zee Kannada News Desk | Last Updated : Aug 19, 2021, 06:47 PM IST
  • 'ತಾಲಿಬಾನ್ 20 ವರ್ಷಗಳ ಹಿಂದೆ ಅಧಿಕಾರ ಕಳೆದುಕೊಳ್ಳುವವರೆಗೂ ಎಲ್ಲಾ ಹುಡುಗಿಯರು ಮತ್ತು ಮಹಿಳೆಯರನ್ನು ಶಾಲೆಗೆ ಹಾಜರಾಗದಂತೆ ನಿರ್ಬಂಧಿಸಿತ್ತು ಮತ್ತು ಅವರನ್ನು ಧಿಕ್ಕರಿಸಿದವರಿಗೆ ಕಠಿಣ ಶಿಕ್ಷೆ ವಿಧಿಸಿತು, ಈಗ ಅದು ಮತ್ತೆ ದೇಶವನ್ನು ನಿಯಂತ್ರಣಕ್ಕೆ ತೆಗೆದುಕೊಂಡಿದೆ.
  • ಈ ಹಿನ್ನಲೆಯಲ್ಲಿ ಅನೇಕ ಮಹಿಳೆಯರಂತೆ, ನನ್ನ ಅಫಘಾನ್ ಸಹೋದರಿಯರಿಗೆ ಬಗ್ಗೆ ಕಳವಳ ವ್ಯಕ್ತಪಡಿಸುತ್ತೇನೆ" ಎಂದು ಮಲಾಲಾ (Malala Yousafza) ಬರೆದಿದ್ದಾರೆ.
ಆಫ್ಘಾನ್ ದಲ್ಲಿನ ಮಹಿಳೆಯರು, ಬಾಲಕಿಯರ ಪರಿಸ್ಥಿತಿ ಬಗ್ಗೆ ಕಳವಳ ವ್ಯಕ್ತಪಡಿಸಿದ ಮಲಾಲಾ title=
ಸಂಗ್ರಹ ಚಿತ್ರ

ನವದೆಹಲಿ: 20 ವರ್ಷಗಳ ಯುಎಸ್ ಮಿಲಿಟರಿ ಕಾರ್ಯಾಚರಣೆಗಳ ನಂತರ ತಾಲಿಬಾನ್‌ಗಳು ಮತ್ತೊಮ್ಮೆ ಯುದ್ಧ-ಪೀಡಿತ ಅಫ್ಘಾನಿಸ್ತಾನ ದೇಶದ ಮೇಲೆ ಹಿಡಿತ ಸಾಧಿಸುತ್ತಿರುವ ಬೆನ್ನಲ್ಲೇ ಅಲ್ಲಿನ ಮಹಿಳೆಯರು ಮತ್ತು ಬಾಲಕಿಯರ ಬಗ್ಗೆ ನೊಬೆಲ್ ಪ್ರಶಸ್ತಿ ವಿಜೇತೆ ಮಲಾಲಾ ಯೂಸಫ್‌ಜಾಯ್ ಕಳವಳ ವ್ಯಕ್ತಪಡಿಸಿದ್ದಾರೆ.

'ತಾಲಿಬಾನ್ 20 ವರ್ಷಗಳ ಹಿಂದೆ ಅಧಿಕಾರ ಕಳೆದುಕೊಳ್ಳುವವರೆಗೂ ಎಲ್ಲಾ ಹುಡುಗಿಯರು ಮತ್ತು ಮಹಿಳೆಯರನ್ನು ಶಾಲೆಗೆ ಹಾಜರಾಗದಂತೆ ನಿರ್ಬಂಧಿಸಿತ್ತು ಮತ್ತು ಅವರನ್ನು ಧಿಕ್ಕರಿಸಿದವರಿಗೆ ಕಠಿಣ ಶಿಕ್ಷೆ ವಿಧಿಸಿತು, ಈಗ ಅದು ಮತ್ತೆ ದೇಶವನ್ನು ನಿಯಂತ್ರಣಕ್ಕೆ ತೆಗೆದುಕೊಂಡಿದೆ.ಈ ಹಿನ್ನಲೆಯಲ್ಲಿ ಅನೇಕ ಮಹಿಳೆಯರಂತೆ, ನನ್ನ ಅಫಘಾನ್ ಸಹೋದರಿಯರಿಗೆ ಬಗ್ಗೆ ಕಳವಳ ವ್ಯಕ್ತಪಡಿಸುತ್ತೇನೆ" ಎಂದು ಮಲಾಲಾ (Malala Yousafza) ಬರೆದಿದ್ದಾರೆ.

ಇದನ್ನೂ ಓದಿ: ಕಾಶ್ಮೀರಿ ಮಕ್ಕಳ ಸ್ಥಿತಿಗತಿ ಬಗ್ಗೆ ಕಳವಳ ವ್ಯಕ್ತಪಡಿಸಿದ ಮಲಾಲಾ

"ನಾನು ನನ್ನ ಸ್ವಂತ ಬಾಲ್ಯದ ಬಗ್ಗೆ ಯೋಚಿಸದೇ ಇರಲು ಸಾಧ್ಯವಿಲ್ಲ. 2007 ರಲ್ಲಿ ಪಾಕಿಸ್ತಾನದ ಸ್ವಾತ್ ಕಣಿವೆಯಲ್ಲಿ ತಾಲಿಬಾನ್ ನನ್ನ ತವರೂರನ್ನು ಸ್ವಾಧೀನಪಡಿಸಿಕೊಂಡಾಗ ಮತ್ತು ಸ್ವಲ್ಪ ಸಮಯದ ನಂತರ ಹುಡುಗಿಯರು ಶಿಕ್ಷಣವನ್ನು ಪಡೆಯುವುದನ್ನು ನಿಷೇಧಿಸಿದಾಗ, ನಾನು ನನ್ನ ಪುಸ್ತಕಗಳನ್ನು ನನ್ನ ಉದ್ದನೆಯ ಶಾಲಿನ ಅಡಿಯಲ್ಲಿ ಬಚ್ಚಿಟ್ಟು ಹೆದರಿಕೆಯಿಂದ ಶಾಲೆಗೆ ನಡೆದೆ. ಐದು ವರ್ಷಗಳ ನಂತರ, ನಾನು 15 ವರ್ಷದವಳಿದ್ದಾಗ, ಶಾಲೆಗೆ ಹೋಗುವ ನನ್ನ ಹಕ್ಕಿನ ಬಗ್ಗೆ ಮಾತನಾಡಿದ್ದಕ್ಕಾಗಿ ತಾಲಿಬಾನ್‌ಗಳು ನನ್ನನ್ನು ಕೊಲ್ಲಲು ಪ್ರಯತ್ನಿಸಿದರು, "ಎಂದು ಅವರು ನ್ಯೂಯಾರ್ಕ್ ಟೈಮ್ಸ್ ನಲ್ಲಿ ಬರೆದಿದ್ದಾರೆ.

"ಕಳೆದ ಎರಡು ದಶಕಗಳಲ್ಲಿ, ಲಕ್ಷಾಂತರ ಅಫಘಾನ್ ಮಹಿಳೆಯರು ಮತ್ತು ಹುಡುಗಿಯರು ಶಿಕ್ಷಣವನ್ನು ಪಡೆದರು.ಈಗ ಅವರಿಗೆ ಭರವಸೆ ನೀಡಲಾಗುತ್ತಿದ್ದ ಭವಿಷ್ಯವು ಅಪಾಯಕಾರಿಯಾಗಿ ಜಾರಿಕೊಳ್ಳುವ ಹಂತದಲ್ಲಿದೆ" ಎಂದು ಮಲಾಲಾ ಹೇಳಿದರು.

ಇದನ್ನೂ ಓದಿ: 'ಮಲಾಲಾ' ಮೇಲೆ ಗುಂಡು ಹಾರಿಸಿದ್ದ ವ್ಯಕ್ತಿ ಅಮೇರಿಕಾದ ಡ್ರೋನ್ ದಾಳಿಯಲ್ಲಿ ಸಾವು

"ಅಫ್ಘಾನಿಸ್ತಾನದ ಯುದ್ಧದಲ್ಲಿ ಏನು ತಪ್ಪಾಗಿದೆ ಎಂದು ಚರ್ಚಿಸಲು ನಮಗೆ ಸಮಯವಿದೆ, ಆದರೆ ಈ ನಿರ್ಣಾಯಕ ಕ್ಷಣದಲ್ಲಿ, ನಾವು ಅಫ್ಘಾನ್ ಮಹಿಳೆಯರು ಮತ್ತು ಹುಡುಗಿಯರ ಧ್ವನಿಯನ್ನು ಕೇಳಬೇಕು. ಅವರು ರಕ್ಷಣೆ, ಶಿಕ್ಷಣ, ಸ್ವಾತಂತ್ರ್ಯವನ್ನು ಕೇಳುತ್ತಿದ್ದಾರೆ. ನಾವು ಅವರನ್ನು ವಿಫಲಗೊಳಿಸುವುದನ್ನು ಮುಂದುವರಿಸಲು ಸಾಧ್ಯವಿಲ್ಲ" ಎಂದು ಮಲಾಲಾ ಹೇಳಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

 

Trending News