OMG: ನೀರವ್ ಮೋದಿ ನೀಡಿದ ಉಂಗುರದಿಂದ ಮುರಿದು ಬಿದ್ದ ನಿಶ್ಚಿತಾರ್ಥ

PNB ಹಗರಣದ ಆರೋಪಿ ನೀರವ್ ಮೋದಿ ವಂಚನೆಗೆ ಸಂಬಂಧಿಸಿದಂತೆ ಮತ್ತೊಂದು ಪ್ರಕರಣ ಹೊರಹೊಮ್ಮಿದೆ.

Last Updated : Oct 9, 2018, 01:25 PM IST
OMG: ನೀರವ್ ಮೋದಿ ನೀಡಿದ ಉಂಗುರದಿಂದ ಮುರಿದು ಬಿದ್ದ ನಿಶ್ಚಿತಾರ್ಥ title=

PNB ಹಗರಣದ ಆರೋಪಿ ನೀರವ್ ಮೋದಿ ವಂಚನೆಗೆ ಸಂಬಂಧಿಸಿದಂತೆ ಮತ್ತೊಂದು ಪ್ರಕರಣ ಹೊರಹೊಮ್ಮಿದೆ. ಈ ಬಾರಿ ಕೆನಡಾದಲ್ಲಿ ನೆಲೆಸಿರುವ ವ್ಯಕ್ತಿಯೊಬ್ಬರು ನೀರವ್ ಮೋದಿ ವಿರುದ್ಧ ಆರೋಪಿಸಿದ್ದಾರೆ. ಈ ವ್ಯಕ್ತಿಗೆ ನೀರವ್ ಮೋದಿ ನಕಲಿ ವಜ್ರದ ಉಂಗುರ ನೀಡಿ 1.5 ಕೋಟಿ ರೂ. ಮೋಸ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಸಂತ್ರಸ್ತರ ಪ್ರಕಾರ, ಆ ವ್ಯಕ್ತಿಗೆ ನೀರವ್ ಮೋದಿ ಎರಡು ನಕಲಿ ವಜ್ರದ ಉಂಗುರಗಳನ್ನು 1.5 ಕೋಟಿ ರೂ.ಗೆ ಮಾರಿದ್ದಾರೆ. ಉಂಗುರ ನಕಲಿ ಎಂದು ತಿಳಿದ ಬಳಿಕ ಆತನ ನಿಶ್ಚಿತಾರ್ಥ ಮುರಿದು ಬಿದ್ದಿದ್ದು, ಆತ ಖಿನ್ನತೆಗೆ ಒಳಗಾಗಿದ್ದಾನೆ.

ಕೆನಡಾದಲ್ಲಿ ವಾಸಿಸುತ್ತಿರುವ ಒಬ್ಬ ವ್ಯಕ್ತಿಗೆ ಮೋಸ:
ದಕ್ಷಿಣ ಚೀನಾ ಮಾರ್ನಿಂಗ್ ಪೋಸ್ಟ್ನಲ್ಲಿ ಪ್ರಕಟವಾದ ಸುದ್ದಿಗಳ ಪ್ರಕಾರ, ನೀರವ್  ವಂಚಿಸಲ್ಪಟ್ಟ ವ್ಯಕ್ತಿ ಅಲ್ಫೊನ್ಜ್ ಎಂದು ತಿಳಿದುಬಂದಿದ್ದು, ಆತ ಕೆನಡಾದ ನಿವಾಸಿ ಎನ್ನಲಾಗಿದೆ. ಅವರಿಗಾದ ಮೋಸ ತಿಳಿಯುವಷ್ಟರಲ್ಲಿ ಪಿಎನ್ಬಿ ಹಗರಣವು ಬೆಳಕಿಗೆ ಬಂದಿತ್ತು ಎನ್ನಲಾಗಿದೆ. ಅಲ್ಫೋನ್ಸ್ ಪ್ರಕಾರ, ನೀರವ್ ಮೋದಿ ಪ್ರಸಿದ್ಧ ಡೈಮಂಡ್ ಉದ್ಯಮಿ ಎಂದು ಈಗಾಗಲೇ ತಿಳಿದುಬಂದಿದೆ. ಅವರು ಕೇಟ್ ವಿನ್ಸ್ಲೆಟ್, ಡಕೋಟಾ ಜಾನ್ಸನ್ ನಂತಹ ಪ್ರಸಿದ್ಧ ಹಾಲಿವುಡ್ ನಾಯಕಿಯರಿಗಾಗಿ ಆಭರಣ ವಿನ್ಯಾಸವನ್ನು ಮಾಡುತ್ತಿದ್ದರು.

2012 ರಲ್ಲಿ ನೀರವ್ ಜೊತೆ ಮೊದಲ ಭೇಟಿ:
ಪ್ರಕಟಿಸಿದ ಸುದ್ದಿಗಳ ಪ್ರಕಾರ, ಅಲ್ಫೋನ್ಜ್  2012 ರಲ್ಲಿ ಮೊದಲ ಬಾರಿಗೆ ನೀರವ್ ಮೋದಿ ಅವರನ್ನು ಭೇಟಿಯಾದರು. ನಾನು ನೀರವ್ ಗಿಂತ 10 ವರ್ಷ ಚಿಕ್ಕವರು ಎಂದು ಆಲ್ಫನ್ಸ್ ಹೇಳಿದ್ದಾರೆ. ಅವರು ನನಗೆ ಪರಿಚಿತರಾದ ನಂತರ ನೀರವ್ ಹಿರಿಯ ಸಹೋದರನಂತೆ ನನ್ನೊಂದಿಗಿದ್ದರು ಎಂದು ಆಲ್ಫನ್ಸ್ ಹೇಳಿದ್ದಾರೆ. ಆಲ್ಫನ್ಸ್ ಪ್ರಕಾರ, ರಿಂಗ್ ಖರೀದಿಸಲು ಎಪ್ರಿಲ್ ನಲ್ಲಿ ಅವರು ನೀರವ್ ಗೆ ಮೇಲ್ ಮಾಡಿದ್ದಾರೆ. ನೀರವ್ ಜೂನ್ 7 ರಂದು ಆಲ್ಫನ್ಸ್ ಗೆ ಹಾಂಗ್ ಕಾಂಗ್ ನಲ್ಲಿ ವಜ್ರದ ಉಂಗುರವನ್ನು ವಿತರಿಸಿದ್ದಾರೆ. ಆದರೆ ನೀರವ್ ವಜ್ರ ಅಸಲಿ ಎಂಬ ಪ್ರಮಾಣ ಪತ್ರವನ್ನು ನೀಡಲಿಲ್ಲ. ಅಲ್ಲದೆ ಪದೇ ಪದೇ ಪ್ರಮಾಣ ಪತ್ರವನ್ನು ಕೇಳಿದರೂ ಅದಕ್ಕೆ ಅವರು ಸರಿಯಾಗಿ ಪ್ರತಿಕ್ರಿಯಿಸಲಿಲ್ಲ ಎಂದಿದ್ದಾರೆ.

ಏತನ್ಮಧ್ಯೆ ಆಲ್ಫನ್ಸ್ ನಿಶ್ಚಿತಾರ್ಥ ನಿಶ್ಚಯವಾಯಿತು. ತಮ್ಮ ಭಾವಿ ಸಂಗಾತಿಗೆ ಅವರು ಉಂಗುರವನ್ನು ನೀಡಿದರು. ಇದಾದ ನಂತರ, ಉಂಗುರವನ್ನು ಪರಿಶೀಲಿಸಿದಾಗ ಅದು ನಕಲಿ ಎಂಬ ವಿಷಯ ಹೊರಬಿದ್ದಿತು. ಇದರಿಂದ ಕೋಪಗೊಂಡ ಕುಟುಂಬ ಸದಸ್ಯರು ನಿಶ್ಚಿತಾರ್ಥವನ್ನು ಮುರಿದರು. ಅಷ್ಟರಲ್ಲಿ ಆಲ್ಫನ್ ಗೆ ನೀರವ್ ನ ನೈಜ ಬಣ್ಣ ತಿಳಿದಿತ್ತು. ಆದರೆ ನಿಶ್ಚಿತಾರ್ಥದ ನಂತರ ಅವರು ಖಿನ್ನತೆಗೆ ಒಳಗಾಗಿದ್ದರು. ಈಗ ಅವರು ನೀರವ್ ಮೇಲೆ ಒಂದು ಪ್ರಕರಣ ದಾಖಲಿಸಿದ್ದಾರೆ.

Trending News