ವಿಶ್ವಸಂಸ್ಥೆಯ ಅಮೆರಿಕದ ರಾಯಭಾರಿ ನಿಕ್ಕಿ ಹ್ಯಾಲೆಯಿಂದ ಪ್ರಧಾನಿ ಮೋದಿ ಭೇಟಿ

      

Last Updated : Jun 27, 2018, 09:09 PM IST
ವಿಶ್ವಸಂಸ್ಥೆಯ ಅಮೆರಿಕದ ರಾಯಭಾರಿ ನಿಕ್ಕಿ ಹ್ಯಾಲೆಯಿಂದ ಪ್ರಧಾನಿ ಮೋದಿ ಭೇಟಿ  title=
Photo courtesy: ANI

ನವದೆಹಲಿ: ವಿಶ್ವಸಂಸ್ಥೆಯಲ್ಲಿ ಅಮೆರಿಕದ ರಾಯಭಾರಿ ನಿಕ್ಕಿ ಹ್ಯಾಲೆ ಬುಧವಾರ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾದರು.

ಇಂದು ನವದೆಹಲಿಗೆ ಆಗಮಿಸಿದ ಅವರು ಹೂಮಾಯೂನ್ ಸಮಾಧಿಗೆ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ವಾಷಿಂಗ್ಟನ್ ಮತ್ತು ನವದೆಹಲಿಗಳ ನಡುವಿನ ಸಂಬಂಧವನ್ನು ಬಲಪಡಿಸುವುದು ಈ ಭೇಟಿಯ ಉದ್ದೇಶವೆಂದು ಅವರು ತಿಳಿಸಿದರು. ಅಲ್ಲದೆ ಧಾರ್ಮಿಕ ಸ್ವಾತಂತ್ರ್ಯ ಉಳಿದ ಮಾನವ ಹಕ್ಕುಗಳಷ್ಟೇ ಮಹತ್ವದ್ದಾಗಿವೆ ಎಂದು ಅವರು  ಅಭಿಪ್ರಾಯಪಟ್ಟಿದ್ದರು.

ನಿಕ್ಕಿ ಹ್ಯಾಲೆ ಇಂದು ಪ್ರಧಾನಿ ಮೋದಿಯನ್ನು  ಭೇಟಿ ಮಾಡಿ ಪ್ರಮುಖ ಜಾಗತೀಕ ಬೆಳವಣಿಗೆಗಳು ಹಾಗೂ ಭಾರತ- ಅಮೇರಿಕಾದ ನಡುವಿನ ಒಪ್ಪಂದದ ವಿಚಾರಗಳ ಕುರಿತು ಚರ್ಚೆ ನಡೆಸಿದರು ಎಂದು ಹೇಳಲಾಗಿದೆ.

ಇತ್ತೀಚಿಗೆ ಟ್ರಂಪ್ನ ಝೀರೋ ಟಾಲರೆನ್ಸ್ ಪಾಲಿಸಿಯ ಭಾಗವಾಗಿ ಅಕ್ರಮವಾಗಿ ಅಮೆರಿಕಕ್ಕೆ ಪ್ರವೇಶಿಸಿಸಿದ್ದಕ್ಕಾಗಿ ಹಲವಾರು ಭಾರತೀಯರನ್ನು ಒರೆಗಾನ್ ಮತ್ತು ನ್ಯೂ ಮೆಕ್ಸಿಕೊದಲ್ಲಿ ಬಂಧಿಸಿದ ನಂತರ ಅವರು ಭಾರತಕ್ಕೆ ಆಗಮಿಸಿರುವುದರಿಂದ ಅವರ ಭೇಟಿ ಮಹತ್ವ ಪಡೆದಿದೆ ಎಂದು ಹೇಳಲಾಗಿದೆ.

ಇವರ ಭೇಟಿಯ ನಂತರ ಜುಲೈ 6 ರಂದು ಅಮೇರಿಕ  ಮತ್ತು ಭಾರತ ನಡುವಿನ 2 + 2 ಮಾತುಕತೆ ನಡೆಯಲಿದೆ. ಅಮೆರಿಕಾದ ಪರವಾಗಿ ಯುಎಸ್ ಇಲಾಖೆಯ ರಾಜ್ಯ, ಯು.ಎಸ್. ಕಾರ್ಯದರ್ಶಿ ಮೈಕಲ್ ಆರ್. ಪೊಂಪೆಯೊ ಮತ್ತು ರಕ್ಷಣಾ ಕಾರ್ಯದರ್ಶಿ ಜೇಮ್ಸ್ ಮ್ಯಾಟಿಸ್ ಇನ್ನು ಭಾರತದ ಪರವಾಗಿ  ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಹಾಗೂ ನಿರ್ಮಲಾ ಸಿತಾರಾಮನ್ ಅವರು  ಭಾಗವಹಿಸಲಿದ್ದಾರೆ ಎಂದು ತಿಳಿದುಬಂದಿದೆ.

Trending News