ನವದೆಹಲಿ: Lambda COVID-19 New Variant - ವಿಶ್ವದ ಒಟ್ಟು 29 ದೇಶಗಳಲ್ಲಿ ಅದರಲ್ಲೂ ವಿಶೇಷವಾಗ ದಕ್ಷಿಣ ಆಫ್ರಿಕಾದಲ್ಲಿ (South Africa) ಉತ್ಪತ್ತಿಯಾದ ಲ್ಯಾಂಬಡಾ ಹೆಸರಿನ ಹೊಸ ಕೊವಿಡ್-19 (New Lambda Covid-19 Variant) ವೈರಸ್ ಪತ್ತೆಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (World Health Organization) ಬುಧವಾರ ಹೇಳಿದೆ. ಈ ಕುರಿತು ತನ್ನ ವೀಕ್ಲಿ ಅಪ್ಡೇಟ್ (WHO Covid-19 Weekly Update) ನಲ್ಲಿ ಮೊಟ್ಟಮೊದಲ ಬಾರಿಗೆ ಪೆರುವಿನ್ದಲ್ಲಿ ಕಂಡು ಬಂದಿರುವ ಈ ಲ್ಯಾಂಬಡಾ ವೇರಿಯಂಟ್ ಸೌಥ್ ಆಫ್ರಿಕಾದಲ್ಲಿ ಅತಿ ಹೆಚ್ಚು ಹರಡಿರುವ ಕಾರಣ ಜೂನ್ 14 ರಂದು ಇದನ್ನು ಗ್ಲೋಬಲ್ ವೇರಿಯಂಟ್ ಆಫ್ ಇಂಟರೆಸ್ಟ್ (Global Variant Of Interest) ಅಡಿ ವರ್ಗೀಕರಿಸಲಾಗಿದೆ ಎಂದು WHO ಹೇಳಿದೆ.
ಈ ಕುರಿತು ಹೇಳಿಕೆ ನೀಡಿರುವ ಅಧಿಕಾರಿಗಳು ಪೆರುವಿನಲ್ಲಿ ಈ ವೈರಸ್ (Coronavirus) ವ್ಯಾಪಕವಾಗಿ ಹರಡಿದೆ. ಏಪ್ರಿಲ್ 2021 ರಲ್ಲಿ ಪತ್ತೆಯಾದ ಶೇ.81ರಷ್ಟು ಪ್ರಕರಣಗಳು ಈ ಹೊಸ ವೈರಸ್ ಪ್ರಕರಣಗಳಾಗಿವೆ. ಇನ್ನೊಂದೆಡೆ ಚಿಲಿ ರಾಷ್ಟ್ರದಲ್ಲಿ ಕಳೆದ 60 ದಿನಗಳಲ್ಲಿ ಸಂಗ್ರಹಿಸಲಾಗಿರುವ ಸಿಕ್ವೆನ್ಸ್ ಗಳಲ್ಲಿ ಶೇ.32ರಷ್ಟು ಪ್ರಕರಣಗಳಲ್ಲಿ ಇದೆ ವೇರಿಯಂಟ್ ಸಂಬಂಧಿಸಿವೆ ಮತ್ತು ಗಾಮಾ ವೇರಿಯಂಟ್ (Covid-19 Gama Variant) ಗಳಿಗಿಂತ ಕಡಿಮೆ ಎಂದು ಭಾವಿಸಲಾಗಿತ್ತು. ಗಾಮಾ ವೇರಿಯಂಟ್ ಅನ್ನು ಮೊಟ್ಟಮೊದಲು ಬಾರಿಗೆ ಬ್ರೆಜಿಲ್ (Brazil) ನಲ್ಲಿ ಪತ್ತೆಹಚ್ಚಲಾಗಿತ್ತು. ಇದಲ್ಲದೆ ಸೌಥ್ ಅಮೇರಿಕಾದ (South America) ಇತರೆ ದೇಶಗಳಾಗಿರುವ ಅರ್ಜೆಂಟಿನ, ಹಾಗೂ ಇಕ್ವಾಡೋರ್ ಗಳೂ ಕೂಡ ತಮ್ಮ ದೇಶದಲ್ಲಿ ಈ ಹೊಸ ಕೊವಿಡ್-19 ವೇರಿಯಂಟ್ ಹರಡುವಿಕೆ ಮಾಹಿತಿ ನೀಡಿದ್ದವು.
ಇದನ್ನೂ ಓದಿ-Corona Vaccine For Children: ಸಿದ್ಧಗೊಂಡಿದೆ ಮಕ್ಕಳ 'ಸುರಕ್ಷಾ ಕವಚ'! ಕೋತಿಗಳ ಮೇಲಿನ ಆರಂಭಿಕ ಪರೀಕ್ಷೆ ಯಶಸ್ವಿ !
ಎಷ್ಟು ಪರಿಣಾಮಕಾರಿಯಾಗಿದೆ ಕೊವಿಡ್-19 ಲ್ಯಾಂಬಡಾ ವೇರಿಯಂಟ್
ಈ ಕುರಿತು ಮಾಹಿತಿ ನೀಡಿರುವ WHO, ಲ್ಯಾಂಬಡಾ ವೇರಿಯಂಟ್ ನಲ್ಲಿ ಮ್ಯೂಟೆಶನ್ ಗಳಿದ್ದು, ಇವು ಸೋಂಕನ್ನು ಹೆಚ್ಚಿಸುತ್ತವೆ ಅಥವಾ ಆಂಟಿಬಾಡಿಗಳ ವಿರುದ್ಧ ವೈರಸ್ ಪ್ರಭಾವವನ್ನು ಬಲಪಡಿಸುವ ಸಾಧ್ಯತೆ ಇದೆ. ಈ ಹೊಸ ವೇರಿಯಂಟ್ ಪ್ರಭಾವ ಇರಲಿದೆ ಎಂಬುದರ ಸಾಕ್ಷಾಧಾರಗಳು ತುಂಬಾ ಸೀಮಿತವಾಗಿವೆ ಹಾಗೂ ಲ್ಯಾಂಬಡಾ ವೇರಿಯಂಟ್ ಅನ್ನು ಸರಿಯಾಗಿ ಅರ್ಥೈಸಿಕೊಳ್ಳಲು ಹೆಚ್ಚಿನ ಅಧ್ಯಯನ ನಡೆಸುವ ಅವಶ್ಯಕತೆ ಇದೆ.
ಇದನ್ನೂ ಓದಿ- Corona 3rd Wave : 2 ರಿಂದ 4 ವಾರದ ಒಳಗಡೆ ಕೊರೋನಾ 3ನೇ ಅಲೆ : ತಜ್ಞರ ಎಚ್ಚರಿಕೆ
ವೇರಿಯಂಟ್ ಆಫ್ ಕನ್ಸರ್ನ್ (Variant Of Concern Vs Variant Of Interest) ಹಾಗೂ ವೇರಿಯಂಟ್ ಆಫ್ ಇಂಟರೆಸ್ಟ್ ನಲ್ಲಿ ಯಾವುದು ಅಪಾಯಕಾರಿಯಾಗಿದೆ?
ವೇರಿಯಂಟ್ ಆಫ್ ಕನ್ಸರ್ನ್ (Variant Of Concern), ವೇರಿಯಂಟ್ ಆಫ್ ಇಂಟರೆಸ್ಟ್ ಗೆ (Variant Of Interest) ತದ್ವಿರುದ್ಧವಾಗಿದೆ ಎಂಬುದು ವಿಶ್ವಾದ್ಯಂತ ನ್ಯೂಸ್ ಪೇಪರ್ ಗಳ ಹೆಡ್ ಲೈನ್ ಆಗಿದೆ. ಈ ವೈರಸ್ ವೇರಿಯಂಟ್ ಮೇಲೆ ಆರೋಗ್ಯ ಸಂಘಟನೆಗಳು ತಮ್ಮ ಗಮನ ಕೇಂದ್ರೀಕರಿಸಿದ್ದು, ಇದು ಸಾರ್ವಜನಿಕವಾಗಿ ಇದುವರೆಗೆ ಅಪಾಯಕಾರಿ ಎಂದು ಸಾಬೀತಾಗಿಲ್ಲ. ಇನ್ನೊಂದೆಡೆ ವೇರಿಯಂಟ್ ಆಫ್ ಕನ್ಸರ್ನ ಅನ್ನು ಒಂದು ದೊಡ್ಡ ಅಪಾಯದ ರೂಪದಲ್ಲಿ ನೋಡಲಾಗುತ್ತಿದೆ. ಈ ವೇರಿಯಂಟ್ ನಲ್ಲಿ ವೇಗವಾಗಿ ಹರಡುವ ಮತ್ತು ಜನರನ್ನು ಮಾರಕ ಸೋಂಕಿಗೆ ಗುರಿಯಾಗಿಸುವ ಕ್ಷಮತೆ ಇದೆ.
ಇದನ್ನೂ ಓದಿ-Coronasomia: Covid-19 ಮಹಾಮಾರಿಯ ನಡುವೆಯೇ ಹೆಚ್ಚಾಗುತ್ತಿದೆ ಈ ನಿಗೂಢ ಕಾಯಿಲೆಯ ಅಪಾಯ!
ಪ್ರಸ್ತುತ ಉದಾಹರಣೆ ಡೆಲ್ಟಾ ವೇರಿಯಂಟ್ (Covid-19 Delta Variant) ಆಗಿದ್ದು, ಇದನ್ನು ಮೊಟ್ಟಮೊದಲ ಬಾರಿಗೆ ಭಾರತದಲ್ಲಿ ಪತ್ತೆಹಚ್ಚಲಾಗಿತ್ತು. ಆದರೆ, ವಿಶ್ವಾದ್ಯಂತ ಇದು ತೀರಾ ವ್ಯಾಪಕವಾಗಿ ಹರಡಿರುವ ಕಾರಣ WHOಗೆ ಇದನ್ನು ವೇರಿಯಂಟ್ ಆಫ್ ಕನ್ಸರ್ ಅಡಿ ಪಟ್ಟಿಮಾಡಲು ಆಣಿಮಾಡಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.