ಪೊಲೀಸರು ಬಾಗಿಲು ಮುರಿದು ನನ್ನ ಕೋಣೆಯೊಳಗೆ ನುಗ್ಗಿದ್ದಾರೆ: ನವಾಜ್ ಷರೀಫ್ ಪುತ್ರಿ ಮರಿಯಮ್ ಆರೋಪ

"ನಾವು ಕರಾಚಿಯಲ್ಲಿ ಉಳಿದುಕೊಂಡಿದ್ದ ಹೋಟೆಲ್‌ನಲ್ಲಿ ಪೊಲೀಸರು ನನ್ನ ಕೋಣೆಯ ಬಾಗಿಲು ಮುರಿದು ಕ್ಯಾಪ್ಟನ್ ಸಫ್ದಾರ್‌ನನ್ನು ಬಂಧಿಸಿದ್ದಾರೆ" ಎಂದು ಮರಿಯಮ್ ನವಾಜ್ ಷರೀಫ್ ತಮ್ಮ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

Last Updated : Oct 21, 2020, 07:08 AM IST
  • ಕರಾಚಿ ಪೊಲೀಸರು ಸಫ್ದಾರ್ ಅವನ್ ಅವರನ್ನು ಬಂಧಿಸಿದ್ದಾರೆ
  • ಮರಿಯಮ್ ನವಾಜ್ ಷರೀಫ್ ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿದರು
  • ಮರಿಯಮ್ ಇತ್ತೀಚೆಗೆ ಇಮ್ರಾನ್ ಸರ್ಕಾರದ ವಿರುದ್ಧದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಪೊಲೀಸರು ಬಾಗಿಲು ಮುರಿದು ನನ್ನ ಕೋಣೆಯೊಳಗೆ ನುಗ್ಗಿದ್ದಾರೆ: ನವಾಜ್ ಷರೀಫ್ ಪುತ್ರಿ ಮರಿಯಮ್ ಆರೋಪ title=
File Image

ಕರಾಚಿ: ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ಅಳಿಯ ಸಫ್ದಾರ್ ಅವನ್ ಅವರನ್ನು ಕರಾಚಿ ಪೊಲೀಸರು ಬಂಧಿಸಿದ್ದಾರೆ ಎಂಬ ಮಾಹಿತಿಯನ್ನು ನವಾಜ್ ಷರೀಫ್ ಅವರ ಪುತ್ರಿ ಮರಿಯಮ್ ನವಾಜ್ ಷರೀಫ್ (Maryam Nawaz Sharif) ಟ್ವೀಟ್ ಮೂಲಕ ನೀಡಿದ್ದಾರೆ. 

ಮರಿಯಮ್ ಇತ್ತೀಚೆಗೆ ಇಮ್ರಾನ್ ಖಾನ್ ಸರ್ಕಾರದ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಅಷ್ಟೇ ಅಲ್ಲದೆ ರ್ಯಾಲಿಯಲ್ಲಿ ಮರಿಯಮ್ ಅವರ ಪತಿ ಕ್ಯಾಪ್ಟನ್ ಸಫ್ದಾರ್ ಅವನ್ ಅವರೊಂದಿಗೆ ಇದ್ದರು. ಈ ಹಿನ್ನಲೆಯಲ್ಲೇ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ.

ಈ ಕುರಿತಂತೆ ಟ್ವೀಟ್ ಮಾಡಿರುವ ಪಾಕಿಸ್ತಾನ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) ಉಪಾಧ್ಯಕ್ಷ ಮರಿಯಮ್ ಷರೀಫ್ ತಮ್ಮ ಟ್ವೀಟ್‌ನಲ್ಲಿ, "ನಾವು ಕರಾಚಿಯ ಹೋಟೆಲ್‌ವೊಂದರಲ್ಲಿ ಉಳಿದುಕೊಂಡಿದ್ದೇವೆ, ಪೊಲೀಸರು ನನ್ನ ಕೋಣೆಯ ಬಾಗಿಲು ಮುರಿದು ಕ್ಯಾಪ್ಟನ್ ಸಫ್ದಾರ್ ಅವನ್ ಅವರನ್ನು ಬಂಧಿಸಿದ್ದಾರೆ" ಎಂದು ಹೇಳಿದ್ದಾರೆ.

ಪಾಕಿಸ್ತಾನದಲ್ಲಿ 2 ಭಯೋತ್ಪಾದಕ ದಾಳಿ, 14 ಭದ್ರತಾ ಸಿಬ್ಬಂದಿ ಸೇರಿದಂತೆ 21 ಜನರ ಸಾವು

ರ್ಯಾಲಿಯಲ್ಲಿ ಭಾಗವಹಿಸಿದ್ದ ಮರಿಯಮ್ :
ಕರಾಚಿಯಲ್ಲಿ ಭಾನುವಾರ (ಅಕ್ಟೋಬರ್ 18) ವಿರೋಧ ಪಕ್ಷಗಳು ಇಮ್ರಾನ್ ಸರ್ಕಾರದ ವಿರುದ್ಧ ರ್ಯಾಲಿ ನಡೆಸಿತು. ಈ ರ್ಯಾಲಿಯಲ್ಲಿ ಮರಿಯಮ್ ನವಾಜ್ ಇಮ್ರಾನ್ ಖಾನ್ ಮತ್ತು ಪಾಕಿಸ್ತಾನ ಸೇನೆಯ ವಿರುದ್ಧ ತೀವ್ರವಾಗಿ ವಾಗ್ಧಾಳಿ ನಡೆಸಿದ್ದರು. ಟಿವಿಯಲ್ಲಿ ಇಮ್ರಾನ್ ಖಾನ್ (Imran Khan) ತನ್ನ ವೈಫಲ್ಯವನ್ನು ಮರೆಮಾಡುತ್ತಾನೆ ಮತ್ತು ಜನರು ಭಯಪಡಬೇಡಿ ಎನ್ನುತ್ತಾರೆ ಎಂದು ಪಾಕಿಸ್ತಾನದ ಪ್ರಧಾನಿ ವಿರುದ್ಧ ಕಿಡಿಕಾರಿದರು.

ಭಯೋತ್ಪಾದಕರಿಗೆ ಬಿರಿಯಾನಿ ನೀಡುತ್ತಿದ್ದ ಪಾಕಿಸ್ತಾನದಲ್ಲಿ ಈಗ ಹಿಟ್ಟಿಗೂ ಪರದಾಟ

'ನವಾಜ್ ಷರೀಫ್ ಅವರಿಂದ ಕಲಿಯಬೇಕು'!
ಇದೇ ಸಂದರ್ಭದಲ್ಲಿ ತನ್ನ ತಂದೆಯ ಬಗ್ಗೆ ಹೆಮ್ಮೆಯಿಂದ ಮಾತನಾಡಿದ ಮರಿಯಮ್ ನವಾಜ್ ಅವರು, "ಇಮ್ರಾನ್ ಖಾನ್ ಅವರ ಭಯವು ಅವರ ಪ್ರತಿಯೊಂದು ಮಾತು, ಪ್ರತಿಯೊಂದು ಕ್ರಿಯೆ ಮತ್ತು ಅವರ ಮುಖದ ಮೇಲೆ ಸ್ಪಷ್ಟವಾಗಿ ಗೋಚರಿಸುತ್ತದೆ. ಇಮ್ರಾನ್ ಅವರಿಗೆ ಹೇಗೆ ಆಡಳಿತ ನಡೆಸಬೇಕು ಮತ್ತು ಜನರ ಹಿತದೃಷ್ಟಿಯಿಂದ ಹೇಗೆ ಸರ್ಕಾರವನ್ನು ಮುನ್ನಡೆಸಬೇಕು ಎಂದು ತಿಳಿದಿಲ್ಲದಿದ್ದರೆ ಅದನ್ನು ನೀವು ನವಾಜ್ ಷರೀಫ್ (Nawaz Sharif) ಅವರಿಂದ ಕಲಿಯಬೇಕು" ಎಂದು ತಿಳಿಸಿದರು.
 

Trending News