ನವಾಜ್ ಷರೀಫ್ ಆರೋಗ್ಯದಲ್ಲಿ ಏರುಪೇರು, ಜೈಲಿನಿಂದ ಆಸ್ಪತ್ರೆಗೆ ಸ್ಥಳಾಂತರ

    

Last Updated : Jul 29, 2018, 05:57 PM IST
ನವಾಜ್ ಷರೀಫ್ ಆರೋಗ್ಯದಲ್ಲಿ ಏರುಪೇರು, ಜೈಲಿನಿಂದ ಆಸ್ಪತ್ರೆಗೆ ಸ್ಥಳಾಂತರ title=

ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ಪ್ರಧಾನ ಮಂತ್ರಿ ನವಾಜ್ ಶರೀಫ್ ಅವರನ್ನು ಜೈಲಿನ ಗಂಭೀರ ಹೃದಯದ ಸಮಸ್ಯೆ  ಅನುಭವಿಸಿದ ಬಳಿಕ ಆದಿಯಾಲಾ ಜೈಲಿನಿಂದ ಇಸ್ಲಾಮಾಬಾದ್ ಆಸ್ಪತ್ರೆಯ ತೀವ್ರ ನೀಗಾ ಘಟಕಕ್ಕೆ ಸ್ಥಳಾಂತರಿಸಬೇಕಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭಾನುವಾರದಂದು ಇಸಿಜಿ ಮತ್ತು ರಕ್ತ ವರದಿಗಳಲ್ಲಿ ವ್ಯತ್ಯಾಸವಾದ ನಂತರ ಇಸ್ಲಾಮಾಬಾದ್ನಲ್ಲಿ ಪಾಕಿಸ್ತಾನ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಪಿಐಎಂಎಸ್) ಗೆ ಜೈಲಿನಲ್ಲಿರುವ ನಾಯಕನನ್ನು ವರ್ಗಾಯಿಸಲು ಪಂಜಾಬ್ ಸರ್ಕಾರ ನಿರ್ಧರಿಸಿದೆ. ವೈದ್ಯರ ತಂಡವು ಆಡಿಯಾಲಾ ಜೈಲಿನಲ್ಲಿ ಶರೀಫ್ ಅವರಿಗೆ  ಸೂಕ್ತವಾದ ಔಷಧಿ ಮತ್ತು ಆರೈಕೆಯ ಅಗತ್ಯವಿದೆಯೆಂದು ಅವರು ಶಿಫಾರಸು ಮಾಡಿದ ನಂತರ ಈ ನಿರ್ಧಾರ ಕೈಗೊಳ್ಳಲಾಗಿದೆ.ಈ ಎರಡೂ ತೋಳಿನಲ್ಲಿ ತೀವ್ರ ನೋವಿನಿಂದ ಬಳಲುತ್ತಿರುವ ಅವರು ರಕ್ತ ಪರಿಚಲನೆ ಕೊರತೆಯನ್ನು ಅನುಭವಿಸುತ್ತಿದ್ದಾರೆ ಎನ್ನಲಾಗಿದೆ

ಈ ಕುರಿತಾಗಿ ಪ್ರತಿಕ್ರಿಸಿರುವ ಪಂಜಾಬ್ ಗೃಹ ಸಚಿವ ಶೌಕತ್ ಜಾವೇದ್ "ಶರೀಫ್ ಅವರನ್ನು  ಇಸ್ಲಾಮಾಬಾದ್ನಲ್ಲಿ ಪಾಕಿಸ್ತಾನ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ಗೆ ಸ್ಥಳಾಂತರಿಸಲಾಗಿದ್ದು, ಅಲ್ಲಿ ಹೈ ಪ್ರೊಫೈಲ್ ಖೈದಿಯನ್ನು ಇಟ್ಟುಕೊಳ್ಳಲು ತಯಾರಿ ಮಾಡಲಾಗಿದೆ" ಎಂದು ತಿಳಿಸಿದ್ದಾರೆ 

Trending News