ನ್ಯೂಯಾರ್ಕ್: ಸುಮಾರು 50 ವರ್ಷಗಳ ಹಿಂದೆ ಚಂದ್ರಲೋಕಕ್ಕೆ ಪ್ರಯಾಣಿಸಿದ ನೀಲ್ ಆರ್ಮ್‌ಸ್ಟ್ರಾಂಗ್ ಹೆಜ್ಜೆ ಗುರುತುಗಳು ಇನ್ನೂ ಹಾಗೆ ಇವೆ ಎಂದರೆ ನಂಬುತ್ತೀರಾ?
ಹೌದು, ಈಗ ನೀವು ಇದನ್ನು ನಂಬಲೇಬೇಕು, ಇದಕ್ಕೆ ಪೂರಕವಾಗಿ ನಾಸಾ ಬಿಡುಗಡೆ ಮಾಡಿರುವ ವಿಡಿಯೋವೊಂದರಲ್ಲಿ ನೀಲ್ ಆರ್ಮ್ ಸ್ಟ್ರಾಂಗ್ ಪ್ರಯಾಣಿಸಿದ ಹೆಜ್ಜೆಗಳು ಇನ್ನೂ ಹಾಗೆ ಇರುವುದನ್ನು ಕಾಣಬಹುದಾಗಿದೆ.ಚಂದ್ರನ ಮೇಲ್ಮೈಯನ್ನು ತಲುಪುವ ಮೂಲಕ ಇತಿಹಾಸವನ್ನು ನಿರ್ಮಿಸಿದ ಅಪೊಲೊ 11 ಗಗನಯಾತ್ರಿಗಳ ಮೊದಲ ಹೆಜ್ಜೆಗುರುತುಗಳು ನಾಸಾದ ಹೊಸ ವೀಡಿಯೊದಲ್ಲಿ ಗೋಚರಿಸುತ್ತವೆ.
It’s #InternationalMoonDay! Today marks the anniversary of the Apollo 11 Moon landing – the first time that humans stepped on the surface of another world. This video from the Lunar Reconnaissance Orbiter shows the astronauts' tracks, still there after all this time. pic.twitter.com/LVDkFeEcYP
— NASA Moon (@NASAMoon) July 20, 2022
ನೀಲ್ ಆರ್ಮ್‌ಸ್ಟ್ರಾಂಗ್ ಚಂದ್ರನ ಮೇಲೆ ಕಾಲಿಟ್ಟ ಮೊದಲ ವ್ಯಕ್ತಿ, ಮತ್ತು ಆ ಮಹತ್ವದ ಸಂದರ್ಭದ ಐವತ್ತು ವರ್ಷಗಳ ನಂತರ, ಅವನ ಹೆಜ್ಜೆಗುರುತುಗಳನ್ನು ಚಂದ್ರನ ಮೇಲ್ಮೈಯ ಕುಳಿಗಳಲ್ಲಿ ಇನ್ನೂ ಕಾಣಬಹುದು. ಜುಲೈ 20, 1960 ರಂದು ಉಡಾವಣೆಯಾದ ನಾಸಾದ ಲೂನಾರ್ ರೆಕಾನೈಸೆನ್ಸ್ ಆರ್ಬಿಟರ್ (LRO) ತೆಗೆದ ದೃಶ್ಯಗಳಲ್ಲಿ ಗಗನಯಾತ್ರಿಗಳ ಹೆಜ್ಜೆಗುರುತುಗಳನ್ನು ಕಾಣಬಹುದು.
ಜಾನ್ ಎಫ್. ಕೆನಡಿ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಚಂದ್ರನ ಮೇಲೆ ಮಾನವನಯಾನ ಕೈಗೊಳ್ಳುವ ಯೋಜನೆಯನ್ನು ಪ್ರಕಟಿಸಿದರು.ಇದರ ಭಾಗವಾಗಿ ಅಪೊಲೊ 11 ಮಿಷನ್ ದ ನೇತೃತ್ವವನ್ನು ವಹಿಸಿಕೊಂಡಂತಹ ನೀಲ್ ಆರ್ಮ್ ಸ್ಟ್ರಾಂಗ್ ತಂಡವು ಯಶಸ್ವಿಯಾಗಿ ಚಂದ್ರನ ಮೇಲೆ ಮೊದಲ ಬಾರಿಗೆ ಕಾಲಿಡುವಲ್ಲಿ ಯಶಸ್ವಿಯಾಗಿತ್ತು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.