ಚಲಿಸುತ್ತಿದ್ದ ವಿಮಾನದಲ್ಲಿ ಗಗನಸಖಿಗೆ ಪ್ರಪೋಸ್, VIDEO ಈಗ ವೈರಲ್

ವೀಡಿಯೊ ವೈರಲ್ ಆದಾಗ ಸತ್ಯ ಬಹಿರಂಗವಾಯಿತು.

Last Updated : Sep 19, 2018, 08:59 AM IST
ಚಲಿಸುತ್ತಿದ್ದ ವಿಮಾನದಲ್ಲಿ ಗಗನಸಖಿಗೆ ಪ್ರಪೋಸ್, VIDEO ಈಗ ವೈರಲ್ title=

ಪ್ರೀತಿ ಮತ್ತು ಯುದ್ಧದಲ್ಲಿ ಎಲ್ಲವೂ ಸಾಧ್ಯ ಎಂಬ ಮಾತುಗಳನ್ನು ನೀವು ಕೇಳಿರಬಹುದು. ಇಂತಹದ್ದೇ ಒಂದು ಘಟನೆ ಚೀನಾದಲ್ಲಿ ಸಂಭವಿಸಿದೆ. ಇಲ್ಲಿ ಒಬ್ಬ ಮನುಷ್ಯ ವಿಮಾನಯಾನ ಮಾಡುವ ಸಂದರ್ಭದಲ್ಲಿ ಪ್ರಪೋಸ್ ಮಾಡಿದ್ದಾನೆ. ಅದು ಯಾರಿಗೆ ಅಂತ ಗೊತ್ತಾ? ಆತ ಪ್ರಪೋಸ್ ಮಾಡಿರೋದು ವಿಮಾನದ ಗಗನ ಸಖಿಗೆ. ಆತನನ್ನು ನಿರಾಸೆಗೊಳಿಸದ ಗಗನಸಖಿ ಅವರ ಮದುವೆ ಪ್ರಸ್ತಾಪವನ್ನು ಒಪ್ಪಿಕೊಂಡಿದ್ದಾರೆ ಎಂಬುದು ಅಚ್ಚರಿಯ ವಿಷಯ.

ಚೀನಾದಲ್ಲಿ ಗಗನಸಖಿಯ ಬಾಯ್ ಫ್ರೆಂಡ್ ಮದುವೆ ಪ್ರಸ್ತಾಪಿಸಲು ವಿಮಾನದಲ್ಲಿ ತೆರಳಿದ್ದು, ವಿಮಾನ ಹಾರಾಟ ಪ್ರಾರಂಭಿಸಿ ಸುಮಾರು ಅರ್ಧ ಘಂಟೆಯ ನಂತರ, ಅವನು ತನ್ನ ಪ್ರೇಯಸಿ ಎದುರು ಮೊಣಕಾಲುಗಳ ಮೇಲೆ ಕುಳಿತುಕೊಂಡು ಮದುವೆ ಪ್ರಸ್ತಾಪ ಮುಂದಿಡುತ್ತಾನೆ. ಸಖನನ್ನು ನಿರಾಸೆಗೊಳಿಸದ ಆಕೆ ಪ್ರಸ್ತಾಪವನ್ನು ಒಪ್ಪಿಕೊಳ್ಳುತ್ತಾಳೆ.

ಇದರ ನಂತರ, ವಿಮಾನದ ವಾತಾವರಣ ಸಂಪೂರ್ಣವಾಗಿ ಬದಲಾಯಿತು ಮತ್ತು ಪ್ರಯಾಣಿಕರು ಈ ಸಂದರ್ಭದಲ್ಲಿ ಚಪ್ಪಾಳೆ ತಟ್ಟುತ್ತಾ ಅವರನ್ನು ಅಭಿನಂದಿಸಿದರು. ಅಲ್ಲದೆ ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ಈ ದೃಶ್ಯವನ್ನು ಅವರ ಕ್ಯಾಮರಾದಲ್ಲಿ ಸೆರೆಹಿಡಿದರು. ಚಾನೆಲ್ 8 ರ ಪ್ರಕಾರ, ಸುಮಾರು ಒಂದು ತಿಂಗಳ ಕಾಲ ಈಕೆಯೊಂದಿಗೆ ಗೆಳೆತನ ಬೆಳೆಸಿದ್ದ ಈ ಮನುಷ್ಯ ವಿಮಾನದಲ್ಲಿ ತೆರಳಿ ಪ್ರಪೋಸ್ ಮಾಡಿದ್ದಾನೆ. ಈ ಘಟನೆಯು ಬೆಳಕಿಗೆ ಬಂದ ನಂತರ, ಚೀನಾ ಈಸ್ಟರ್ನ್ ಏರ್ಲೈನ್ಸ್ (China Eastern Airlines) ಗಗನಸಖಿಯನ್ನು ವಜಾಗೊಳಿಸಿದೆ.

ಏಷ್ಯಾವನ್ ಪ್ರಕಾರ, ಈ ಘಟನೆ ಮೇ ತಿಂಗಳಲ್ಲಿ ನಡೆದಿದ್ದು, ವಿಮಾನ ಹಾರಾಟ ಪ್ರಾರಂಭಿಸಿ ಸುಮಾರು ಅರ್ಧ ಘಂಟೆಯ ನಂತರ, ಅವನು ತನ್ನ ಪ್ರೇಯಸಿ ಎದುರು ಮೊಣಕಾಲುಗಳ ಮೇಲೆ ಕುಳಿತುಕೊಂಡು ಮದುವೆ ಪ್ರಸ್ತಾಪ ಮುಂದಿಡುತ್ತಾನೆ. ಈ ಇಡೀ ಘಟನೆಯ ವೀಡಿಯೊ ಮಾಡಿದ್ದ ವಿಮಾನ ಪ್ರಯಾಣಿಕರೊಬ್ಬರು ಸಾಮಾಜಿಕ ಮಾಧ್ಯಮದಲ್ಲಿ ಅದನ್ನು ಹಂಚಿಕೊಂಡಿದ್ದಾರೆ. ಅದರ ನಂತರ ಸೆಪ್ಟೆಂಬರ್ 10 ರಂದು ವಿಮಾನಯಾನ ಸಂಸ್ಥೆಯು ಗಗನಸಖಿ(ಏರ್ ಹಾಸ್ಟೆಸ್)ಯನ್ನು ವಜಾ ಮಾಡಿದೆ.

ಏರ್ ಹಾಸ್ಟೆಸ್ ಪ್ರಯಾಣಿಕರ ಸುರಕ್ಷತೆಯ ಬಗ್ಗೆ ಗಮನ ವಹಿಸಿಲ್ಲ ಎಂದು ಏರ್ಲೈನ್ ​​ಕಂಡುಹಿಡಿದಿದೆ. ಏರ್ ಹೋಸ್ಟೆಸ್ನ ಅಂತಹ ನಡವಳಿಕೆ ಸರಿಯಲ್ಲ, ವಿಮಾನ ಹಾರಾಟ ಸಮಯದಲ್ಲಿ ಪ್ರಯಾಣಿಕರ ಸುರಕ್ಷತೆಯೇ ಮುಖ್ಯವಾಗಿದ್ದು, ಏರ್ ಹಾಸ್ಟೆಸ್ ವೈಯಕ್ತಿಕ ಕಾರ್ಯದಲ್ಲಿ ನಿರತರಾಗಿದ್ದರು ಎಂದು ಏರ್ಲೈನ್ ​​ಕಂಪನಿ ಹೇಳುತ್ತದೆ. ಏಷಿಯಾ ವನ್ ಪ್ರಕಾರ, ಏರ್ ಹೊಸ್ಟೆಸ್ ವಜಾ ಬಗ್ಗೆ ಮಾಹಿತಿ ಬಹಿರಂಗಗೊಂಡ ನಂತರ ಜನರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದು, ಏರ್ ಹೊಸ್ಟೆಸ್ನ ವಜಾವು ಅಮಾನವೀಯ ಮತ್ತು ಕ್ರೂರ ಎಂದು ಕೆಲವು ಜನರು ಹೇಳುತ್ತಾರೆ. ಕೆಲವು ಜನರು ಅದನ್ನು ಸರಿ ಎಂದು ಪರಿಗಣಿಸುತ್ತಿದ್ದಾರೆ.
 

Trending News