ಸಂಸತ್ತಿನಲ್ಲಿ ಸಂಸದರೊಬ್ಬರು ʼನನ್ನ ಎದೆಗೆ ಬಲವಾಗಿ ಕೈʼ ಹಾಕಿದರು..! ಸಂಸದೆ ಆರೋಪ

ಲೈಂಗಿಕ ದೌರ್ಜನ್ಯದ ಕುರಿತು ಸಂಸದೆ ಲಿಡಿಯಾ ಥೋರ್ಪ್ ನೀಡಿರುವ ಹೇಳಿಕೆ ಕೋಲಾಹಲ ಸೃಷ್ಟಿಸಿದೆ. ಮಹಿಳಾ ಸಂಸದೆಯ ಇಂತಹ ಸಂವೇದನಾಶೀಲ ಆರೋಪದ ನಂತರ ರಾಜಕೀಯ ವಲಯದಲ್ಲಿ ಬಿರುಗಾಳಿ ಎದ್ದಿದೆ. 

Written by - Krishna N K | Last Updated : Jun 16, 2023, 04:00 PM IST
  • ಸಂಸತ್ತಿನಲ್ಲಿ ಸಂಸದೆಯ ಮೇಲೆ ಲೈಂಗಿಕ ದೌರ್ಜನ್ಯ.
  • ರಾಜಕೀಯವ ವಲಯದಲ್ಲಿ ಕೋಲಾಹಲ ಎಬ್ಬಿಸಿದ ಸಂಸದೆ ಹೇಳಿಕೆ.
  • ಸಂಸದೆಯೊಬ್ಬರು ಈ ರೀತಿ ಮಾತನಾಡಿದ್ದು ಕೇಳಿ ಎಲ್ಲರೂ ಬೆಚ್ಚಿಬಿದ್ದಿದ್ದಾರೆ.
ಸಂಸತ್ತಿನಲ್ಲಿ ಸಂಸದರೊಬ್ಬರು ʼನನ್ನ ಎದೆಗೆ ಬಲವಾಗಿ ಕೈʼ ಹಾಕಿದರು..! ಸಂಸದೆ ಆರೋಪ title=

Lidia Thorpe : ಸಹ ಸಂಸದರೊಬ್ಬರು ತಮ್ಮನ್ನು ಸಂಸತ್ತಿನ ಮೆಟ್ಟಿಲುಗಳ ಮೇಲೆ ಬಲವಂತವಾಗಿ ಹಿಡಿದಿಟ್ಟುಕೊಂಡು ದೇಹದಾದ್ಯಂತ ಕೈಯಾಡಿಸಿದರು ಎಂದು ಸಂಸದೆ ಲಿಡಿಯಾ ಥೋರ್ಪ್ ನೀಡಿರುವ ಹೇಳಿಕೆ  ಕೋಲಾಹಲ ಸೃಷ್ಟಿಸಿದೆ. ಸಂಸದೆ ಸಂಸತ್ ಭವನದಲ್ಲಿ ಎಲ್ಲರ ಸಮ್ಮುಖದಲ್ಲಿ ಅಳುತ್ತಲೇ ತಮ್ಮ ಮೇಲಾದ ಲೈಂಗಿಕ ದೌರ್ಜನ್ಯ ಕುರಿತು ಸಂಸದೆ ತಿಳಿಸಿದ್ದಾರೆ.

ಇನ್ನು ಮಹಿಳಾ ಸಂಸದೆಯ ಇಂತಹ ಸಂವೇದನಾಶೀಲ ಆರೋಪದ ನಂತರ ರಾಜಕೀಯ ವಲಯದಲ್ಲಿ ಬಿರುಗಾಳಿ ಎದ್ದಿದೆ. ಈ ಘಟನೆ ಆಸ್ಟ್ರೇಲಿಯಾದಲ್ಲಿ ನಡೆದಿದೆ. ಆಸ್ಟ್ರೇಲಿಯಾದ ಸಂಸತ್ ಭವನದಲ್ಲಿ ಅಳುತ್ತಾ ಮಹಿಳಾ ಸಂಸದೆಯೊಬ್ಬರು ಈ ರೀತಿ ಮಾತನಾಡಿದ್ದು ಕೇಳಿ ಎಲ್ಲರೂ ಬೆಚ್ಚಿಬಿದ್ದಿದ್ದಾರೆ. ಅಲ್ಲದೆ, ಕೆಲವೇ ಸಮಯದಲ್ಲಿ ಈ ಸುದ್ದಿ ಪ್ರಪಂಚದಾದ್ಯಂತ ವೈರಲ್ ಆಗಿದೆ. 

ಇದನ್ನೂ ಓದಿ: ಅಮೆರಿಕದಿಂದ ಸಶಸ್ತ್ರ ಡ್ರೋನ್‌ಗಳನ್ನು ಖರೀದಿಸಲು ಮುಂದಾದ ಭಾರತ

ಆಸ್ಟ್ರೇಲಿಯಾದ ಮಹಿಳಾ ಸಂಸದೆಯೊಬ್ಬರು ಅಲ್ಲಿನ ಸಂಸತ್ ಭವನದಲ್ಲಿ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ಈ ವಿಚಾರವಾಗಿ ಸಂಸದೆ ಲಿಡಿಯಾ ಥೋರ್ಪ್ ಅವರು ಗುರುವಾರ ಸಂಸತ್ತಿನಲ್ಲಿ ಕಣ್ಣೀರು ಹಾಕಿದರು. ಅಲ್ಲದೆ, ಪ್ರಬಲ ವ್ಯಕ್ತಿಗಳು ನನ್ನ ಮೇಲೆ ಲೈಂಗಿಕ ಕಾಮೆಂಟ್ಗಳನ್ನು ಮಾಡಿದರು, ನನ್ನನ್ನು ತಪ್ಪಾಗಿ ಮುಟ್ಟಿದರು. ಈ ಸ್ಥಳವು ಮಹಿಳೆಯರಿಗೆ ಕೆಲಸ ಮಾಡಲು ಸಂಪೂರ್ಣವಾಗಿ ಸೂಕ್ತವಲ್ಲ ಎಂದು ಹೇಳಿಕೆ ನೀಡಿದ್ದಾರೆ. 

ಅಲ್ಲದೆ, ತನ್ನಂತೆಯೇ ಇನ್ನೂ ಅನೇಕರಿಗೆ ಈ ರೀತಿ ಸಂಭವಿಸಿದೆ ಎಂದು ಲಿಡಿಯಾ ಹೇಳಿದರು, ಆದರೆ ಅವರು ತಮ್ಮ ವೃತ್ತಿಜೀವನವನ್ನು ಕೊನೆಗೊಳಿಸುವ ಭಯದಿಂದ ಮುಂದೆ ಬರಲು ಸಾಧ್ಯವಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ. 

ಇದನ್ನೂ ಓದಿ: ʼಬಿಪರ್ ಜಾಯ್ʼ ಚಂಡಮಾರುತ ಅಬ್ಬರ : ಆಳ ತೋರಿಸಲು ಸಮದ್ರಕ್ಕೆ ಹಾರಿದ ʼರಿಪೋರ್ಟರ್‌ʼ..!

ಆಸ್ಟ್ರೇಲಿಯಾದ ಸಂಸತ್ತು 2021 ರಿಂದ ಲೈಂಗಿಕ ಕಿರುಕುಳದ ವಿವಾದಗಳಿಗೆ ಸಾಕ್ಷಿಯಾಗುತ್ತಲೇ ಇದೆ. 2021 ರಲ್ಲಿ, ಆಸ್ಟ್ರೇಲಿಯಾದ ನಾಗರಿಕ ಸೇವಕ ತನ್ನ ಸಹೋದ್ಯೋಗಿ ಬ್ರೂಸ್ ಲೆಹ್ರ್ಮನ್ 2019 ಕುಡಿದು ತಮ್ಮ ಮೇಲೆ ಅತ್ಯಾಚಾರವೆಸಗಿದ್ದ ಎಂದು ಆರೋಪಿಸಿದರು. ಇದರ ನಂತರ, ಆಸ್ಟ್ರೇಲಿಯಾದ ಸಂಸತ್ತಿನಲ್ಲಿ ಲೈಂಗಿಕ ಕಿರುಕುಳ ಮತ್ತು ಕಿರುಕುಳದ ಅನೇಕ ಪ್ರಕರಣಗಳಿವೆ ಎಂದು ಸರ್ಕಾರದ ವಿಚಾರಣೆಯಿಂದ ತಿಳಿದುಬಂದಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News