WhatsApp ​ಬಳಕೆದಾರರಿಗೆ ಸಿಹಿ ಸುದ್ದಿ: ಇನ್ನಮುಂದೆ ಡೆಸ್ಕ್​ಟಾಪ್​​ನಲ್ಲಿ ವಾಟ್ಸಾಪ್​ ಬಳಕೆ!

Last Updated : Mar 4, 2021, 05:35 PM IST
  • ಬಳಕೆದಾರರ ಬೇಡಿಕೆಯಂತೆಯೇ ವಾಟ್ಸಾಪ್​ ಕೊನೆಗೂ ಡೆಸ್ಕ್​ಟಾಪ್​​ನಲ್ಲಿ ವಾಟ್ಸಾಪ್​ ಬಳಕೆ ಮಾಡುವವರಿಗೆ ವಿಡಿಯೋ ಕಾಲ್​ ಹಾಗೂ ವಾಯ್ಸ್ ಕಾಲ್​​ ಸೌಲಭ್ಯವನ್ನ ನೀಡಿದೆ.
  • ದಿನದ ಬಹುತೇಕ ಅವಧಿಯನ್ನ ಕಂಪ್ಯೂಟರ್​ ಪರದೆಯ ಮುಂದೆ ಕಳೆಯುವವರಿಗೆ ದೊಡ್ಡ ಲಾಭ ಸಿಕ್ಕಂತಾಗಿದೆ.
  • ಈ ಸಂಬಂಧ ಟ್ವೀಟ್​ ಮಾಡಿರುವ ವಾಟ್ಸಾಪ್​​​, ಎಂಡ್​ ಟು ಎಂಡ್​ ಎನ್​ಕ್ರಿಪ್ಟೆಡ್​​ ವಾಯ್ಸ್ ಕಾಲ್​​ ಹಾಗೂ ವಿಡಿಯೋ ಕಾಲ್​​ ಸೌಲಭ್ಯವನ್ನ ಡೆಸ್ಕ್​ಟಾಪ್​​ನಲ್ಲಿ ಅಪ್ಲಿಕೇಶನ್​ ಬಳಕೆ ಮಾಡುವವರಿಗೂ ನೀಡುತ್ತಿದ್ದೇವೆ ಎಂದು ಹೇಳಿದೆ.
WhatsApp ​ಬಳಕೆದಾರರಿಗೆ ಸಿಹಿ ಸುದ್ದಿ: ಇನ್ನಮುಂದೆ ಡೆಸ್ಕ್​ಟಾಪ್​​ನಲ್ಲಿ ವಾಟ್ಸಾಪ್​ ಬಳಕೆ! title=

ಬಳಕೆದಾರರ ಬೇಡಿಕೆಯಂತೆಯೇ ವಾಟ್ಸಾಪ್​ ಕೊನೆಗೂ ಡೆಸ್ಕ್​ಟಾಪ್​​ನಲ್ಲಿ ವಾಟ್ಸಾಪ್​ ಬಳಕೆ ಮಾಡುವವರಿಗೆ ವಿಡಿಯೋ ಕಾಲ್​ ಹಾಗೂ ವಾಯ್ಸ್ ಕಾಲ್​​ ಸೌಲಭ್ಯವನ್ನ ನೀಡಿದೆ. ಇದರಿಂದಾಗಿ ದಿನದ ಬಹುತೇಕ ಅವಧಿಯನ್ನ ಕಂಪ್ಯೂಟರ್​ ಪರದೆಯ ಮುಂದೆ ಕಳೆಯುವವರಿಗೆ ದೊಡ್ಡ ಲಾಭ ಸಿಕ್ಕಂತಾಗಿದೆ.

ಈ ಸಂಬಂಧ ಟ್ವೀಟ್​ ಮಾಡಿರುವ ವಾಟ್ಸಾಪ್(Whatsapp)​​​, ಎಂಡ್​ ಟು ಎಂಡ್​ ಎನ್​ಕ್ರಿಪ್ಟೆಡ್​​ ವಾಯ್ಸ್ ಕಾಲ್​​ ಹಾಗೂ ವಿಡಿಯೋ ಕಾಲ್​​ ಸೌಲಭ್ಯವನ್ನ ಡೆಸ್ಕ್​ಟಾಪ್​​ನಲ್ಲಿ ಅಪ್ಲಿಕೇಶನ್​ ಬಳಕೆ ಮಾಡುವವರಿಗೂ ನೀಡುತ್ತಿದ್ದೇವೆ ಎಂದು ಹೇಳಿದೆ. ಅಲ್ಲದೇ ಕಂಪ್ಯೂಟರ್​ನಲ್ಲಿ ಅಪ್ಲಿಕೇಶನ್​ ಡೌನ್​ಲೋಡ್​ ಮಾಡಲು ಬೇಕಾದ ಲಿಂಕ್​ನ್ನೂ ಶೇರ್ ಮಾಡಿದೆ.

ಅದೃಷ್ಟವನ್ನೇ ಬದಲಾಯಿಸಿತು ಸೇಲ್ ನಲ್ಲಿ ಖರೀದಿಸಿದ ಬಟ್ಟಲು..!

ವರ್ಕ್ ಫ್ರಂ ಹೋಂನಿಂದಾಗಿ ವಿಡಿಯೋ ಕಾಲ್​ ಹಾಗೂ ವಾಯ್ಸ್ ಕಾಲ್(Voice Call)​​ ಮಾಡುವವರ ಸಂಖ್ಯೆ ಏರಿಕೆಯಾಗಿತ್ತು. ಇದೀಗ ಕಂಪ್ಯೂಟರ್​ನಲ್ಲೂ ಈ ಅವಕಾಶ ಸಿಕ್ಕಿರೋದು ಮನೆಯಲ್ಲೇ ಕೆಲಸ ಮಾಡುವವರಿಗೆ ಇನ್ನಷ್ಟು ಖುಷಿ ಕೊಟ್ಟಿದೆ.

ಶಾಲೆಗಳು ಮುಚ್ಚಲ್ಪಟ್ಟಿರುವುದರಿಂದಾಗಿ 247 ಮಿಲಿಯನ್ ಭಾರತೀಯ ಮಕ್ಕಳ ಮೇಲೆ ಪರಿಣಾಮ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News