ಪ್ರೇಯಸಿಯ ದ್ವೇಷಕ್ಕೆ ಸಿಲುಕಿ ಹತ್ಯೆಗೀಡಾದ ಭಯೋತ್ಪಾದಕ ಖಲೀದ್

ಭಯೋತ್ಪಾದಕ, ಜೈಶ್-ಎ-ಮೊಹಮ್ಮದ್ ಸಂಘಟನೆ ಉಮರ್ ಖಲೀದ್ ಹತ್ಯೆಗೀಡಾಗಿದ್ದಾನೆ. ಒಂದು ವರ್ಷದಲ್ಲಿ ಮೊದಲ ಎರಡು ಬಾರಿ ಖಾಲಿದ್ನನ್ನು ಹಿಡಿಯಲು ಪೊಲೀಸರು ವಿಫಲರಾಗಿದ್ದರು. 

Last Updated : Oct 10, 2017, 01:20 PM IST
ಪ್ರೇಯಸಿಯ ದ್ವೇಷಕ್ಕೆ ಸಿಲುಕಿ ಹತ್ಯೆಗೀಡಾದ ಭಯೋತ್ಪಾದಕ ಖಲೀದ್ title=

ಶ್ರೀನಗರ:  ಜಮ್ಮು-ಕಾಶ್ಮೀರದ ಬಾರಾಮುಲ್ಲಾದಲ್ಲಿ ತಲೆಮರೆಸಿಕೊಂಡಿದ್ದ ಜೈಶ್-ಎ-ಮೊಹಮ್ಮದ್ ಸಂಘಟನೆಯ ಉಮರ್ ಖಾಲಿದ್ ಹತ್ಯೆಗೀಡಾಗಿದ್ದಾನೆ. ಒಂದು ವರ್ಷದಲ್ಲಿ ಮೊದಲೆರಡು ಬಾರಿ ಖಲೀದ್ ನನ್ನು ಹಿಡಿಯಲು ನಡೆಸಿದ್ದ ಪೋಲೀಸರ ಪ್ರಯತ್ನ ವಿಫಲವಾಗಿತ್ತು. ಆದರೆ ಪ್ರೇಯಸಿಯ ಪ್ರತೀಕಾರದ ಬೆಂಕಿ ಇಂದು ಭಯೋತ್ಪಾದಕನ ಹತ್ಯೆಗೆ ಕಾರಣವಾಗಿದೆ. ಬಿ.ಎಸ್.ಎಫ್ ಶಿಬಿರದ ಮೇಲೆ ಆಕ್ರಮಣ ನಡೆಸಲು ಸಹಕರಿಸಿದ್ದ ಅದೇ ಭಯೋತ್ಪಾದಕ ಖಲೀದ್.

ಕಾಶ್ಮೀರ ಕಣಿವೆಯಲ್ಲಿ ಅನೇಕ ಹುಡುಗಿಯರಿದ್ದರೂ, ಒಬ್ಬಳು ಮಾತ್ರ ಖಲೀದ್ ನ ಪ್ರೀತಿಯ ಬಲೆಯಲ್ಲಿ ಸಿಲುಕಿದ್ದಳು. ಕೆಲವು ವರ್ಷಗಳ ಕಾಲ ಹೀಗೆ ಸಾಗಿದ ಇವರ ಪ್ರೇಮಾಂಕುರದಿಂದ ಫಲವಾಗಿ ಒಂದು ವರ್ಷದ ಹಿಂದೆ ಆಕೆ ಗರ್ಭವತಿಯಾದಳು, ಈ ವಿಷಯವನ್ನು ಖಲೀದ್ ಗೆ ತಿಳಿಸಿದಾಗ, ಆಕೆಯ ಹೊಟ್ಟೆಯಲ್ಲಿರುವ ಮಗುವಿಗೂ ಆತನಿಗೂ ಯಾವುದೇ ಸಂಬಂಧವಿಲ್ಲ ಎಂದು ನಿರಾಕರಿಸಿದ. ತದನಂತರ ಆಕೆಯಲ್ಲಿ ಖಲೀದ್ ವಿರುದ್ಧ ಪ್ರತೀಕಾರದ ಬೆಂಕಿ ಉಂಟಾಗಿತ್ತು, ಈ ಪ್ರತೀಕಾರದ ಬೆಂಕಿಯೇ ಇಂದು ಭಯೋತ್ಪಾದಕ ಖಲೀದ್ ನನ್ನು ಬಲಿ ತೆಗೆದುಕೊಂಡಿದೆ.

20 ವರ್ಷದ ಯುವತಿಯ ಈ ಕಥೆಯನ್ನು ಕೇಳಿದ ಹಾಗೂ ಅದೇ ಸಮಯದಲ್ಲಿ ಉಗ್ರಗಾಮಿ ಉಮರ್ ಖಲೀದ್ ನ ಶೋಧ ಕಾರ್ಯದಲ್ಲಿ ತೊಡಗಿದ್ದ  ಜಮ್ಮು-ಕಾಶ್ಮೀರ ಪೊಲೀಸರು ಯುವತಿಗೆ ಸಹಾಯ ಮಾಡುವ ಭರವಸೆ ನೀಡಿದ್ದರು. ಅದರ ನಂತರ ಕಳೆದ ವರ್ಷ ಮೊದಲೆರಡು ಬಾರಿ ಖಲೀದ್ ನನ್ನು ಹಿಡಿಯಲು ನಡೆಸಿದ್ದ ಪೋಲೀಸರ ಪ್ರಯತ್ನ ವಿಫಲವಾಗಿತ್ತು.

ಆದರೆ ಈ ಬಾರಿ ಖಲೀದ್ ಅವರು ಒಬ್ಬ ನಿರ್ದಿಷ್ಟ ವ್ಯಕ್ತಿಗೆ ಭೇಟಿ ನೀಡಲಿದ್ದಾನೆ ಎಂಬ ಖಚಿತ ಮಾಹಿತಿಯೊಂದಿಗೆ ಕಾದು ಕುಳಿತಿದ್ದ ಭದ್ರತಾ ಪಡೆ, ಖಲೀದ್ ಆಗಮಿಸಿದ ತಕ್ಷಣ ಗುಂಡು ಹಾರಿಸಿದರು. ಭದ್ರತಾ ಪಡೆಗಳು ನಡೆಸಿದ 4 ನಿಮಿಷಗಳ ಫೈರಿಂಗ್ ಕಾರ್ಯಾಚರಣೆಯಲ್ಲಿ ಭಯೋತ್ಪಾದಕ ಉಮರ್ ಖಲೀದ್ ಹತ್ಯೆಗೊಳಗಾದನು.

Trending News