Kabul Airport ಬಳಿ ರಾಕೆಟ್ ದಾಳಿ, ಸ್ಫೋಟದಲ್ಲಿ ಇಬ್ಬರ ಸಾವು, ಮೂವರಿಗೆ ಗಾಯ

Rocket Attack Near Kabul Airport - ಕಾಬೂಲ್ ವಿಮಾನ ನಿಲ್ದಾಣದ (Kabul Airport)ಬಳಿ ಮತ್ತೊಮ್ಮೆ ದೊಡ್ಡ ದಾಳಿ (Terror Attack) ನಡೆದಿದೆ. ಈ ಬಾರಿ ಭಯೋತ್ಪಾದಕರು ರಾಕೆಟ್ ನಿಂದ ಮನೆಯೊಂದನ್ನು ಗುರಿಯಾಗಿಸಿದ್ದಾರೆ. ಈ ದಾಳಿಯಲ್ಲಿ ಇಬ್ಬರು ಸಾವನ್ನಪ್ಪಿದ್ದು, ಮೂವರಿಗೆ ಗಾಯಗಳಾಗಿವೆ.

Written by - Nitin Tabib | Last Updated : Aug 29, 2021, 07:17 PM IST
  • ಕಾಬೂಲ್ ವಿಮಾನ ನಿಲ್ದಾಣದ ಬಳಿ ದೊಡ್ಡ ಭಯೋತ್ಪಾದಕ ದಾಳಿ.
  • ಇಲ್ಲಿನ ಮನೆಯೊಂದನ್ನು ರಾಕೆಟ್ ನಿಂದ ಗುರಿಯಾಗಿಸಲಾಗಿದೆ.
  • ದಾಳಿಯಲ್ಲಿ ಇಬ್ಬರ ಸಾವು, ಮೂವರಿಗೆ ಗಾಯ.
Kabul Airport ಬಳಿ ರಾಕೆಟ್ ದಾಳಿ, ಸ್ಫೋಟದಲ್ಲಿ ಇಬ್ಬರ ಸಾವು, ಮೂವರಿಗೆ ಗಾಯ title=
Kabul Airport Missile Attack (Representational Image)

ಕಾಬುಲ್: Rocket Attack Near Kabul Airport - ಅಫ್ಘಾನಿಸ್ತಾನದಲ್ಲಿ  (Afghanistan)  ಸಿಲುಕಿರುವ ಜನರನ್ನು ರಕ್ಷಿಸಲು ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. ಏತನ್ಮಧ್ಯೆ, ಕಾಬೂಲ್ ವಿಮಾನ ನಿಲ್ದಾಣದ (Kabul Airport) ಬಳಿ ಖ್ವಾಜಾ ಬುಗ್ರಾ ಪ್ರದೇಶದಲ್ಲಿ ರಾಕೆಟ್ ದಾಳಿ  (Rocket Attack) ನಡೆದ ಕುರಿತು ವರದಿಯಾಗಿದೆ. ಈ ದಾಳಿಯ ವೀಡಿಯೋ ಕೂಡ ಹೊರಬಂದಿದ್ದು, ಇದರಲ್ಲಿ ಮನೆಯೊಂದರಿಂದ ಹೊಗೆ ಬರುತ್ತಿದೆ.

ಇದನ್ನೂ ಓದಿ-Afghanistan Crisis: ಅಫ್ಘಾನಿಸ್ತಾನದ ಮೇಲೆ ಯಾರ ಕಂಟ್ರೋಲ್, ನೇತೃತ್ವಕ್ಕಾಗಿ ತಾಲಿಬಾನಿಗಳಲ್ಲಿ ಗುಂಪುಗಾರಿಕೆ

ದಾಳಿಯಲ್ಲಿ ಇಬ್ಬರು ಸಾವು
ಮಾಹಿತಿಯ ಪ್ರಕಾರ, ಕಾಬೂಲ್ ವಿಮಾನ ನಿಲ್ದಾಣದ ಉತ್ತರ ದ್ವಾರದ ಬಳಿ ಈ ಭಯೋತ್ಪಾದಕ ದಾಳಿ ನಡೆದಿದೆ. ಈ ದಾಳಿಯಲ್ಲಿ ಇಬ್ಬರು ಸಾವನ್ನಪ್ಪಿರುವುದು ದೃಢಪಟ್ಟಿದೆ. ದಾಳಿಯಲ್ಲಿ ಗಾಯಗೊಂಡ ಮೂವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಹಾನಿಯನ್ನು ಅಂದಾಜಿಸಲು ಸಾಧ್ಯವಾಗಿಲ್ಲ. ಆದರೆ ಈ ಆತ್ಮಾಹುತಿ ದಾಳಿಯಿಂದ  ಅಫ್ಘಾನಿಸ್ತಾನದಲ್ಲಿ ಸಿಲುಕಿರುವ ಜನರ ಆತಂಕವನ್ನು ಇನ್ನಷ್ಟು ಹೆಚ್ಚಿಸಿದೆ. ವಿಶೇಷವೆಂದರೆ, ಭಾನುವಾರ ಬೆಳಗ್ಗೆಯೇ, ಅಮೆರಿಕವು ಕಾಬೂಲ್ ವಿಮಾನ ನಿಲ್ದಾಣದ ಬಳಿ ಭಯೋತ್ಪಾದಕ ದಾಳಿಯ ಎಚ್ಚರಿಕೆಯನ್ನು ನೀಡಿತ್ತು ಮತ್ತು ವಿಮಾನ ನಿಲ್ದಾಣದ ಗೇಟ್ ಅನ್ನು ಉಲ್ಲೇಖಿಸಿತ್ತು ಮತ್ತು ಇದೀಗ ವಿಮಾನ ನಿಲ್ದಾಣದ ಅದೇ ಉತ್ತರ ದ್ವಾರದ ಬಳಿ ಈ ದಾಳಿ ನಡೆದಿದೆ.

ಇದನ್ನೂ ಓದಿ-Kabul Airport Alert: ತನ್ನ ನಾಗರಿಕರಿಗೆ ಕಾಬೂಲ್ ವಿಮಾನ ನಿಲ್ದಾಣ ಪ್ರದೇಶ ತೊರೆಯುವಂತೆ ಹೇಳಿದ ಅಮೆರಿಕ

ಈ ಮೊದಲೇ US ಎಚ್ಚರಿಕೆಯನ್ನು ನೀಡಿತ್ತು (Kabul Airport Attack)
ಇಂದು ಬೆಳಗ್ಗೆ ಕಾಬೂಲ್ ವಿಮಾನ ನಿಲ್ದಾಣದ (Kabul Airport) ಬಳಿ ಮತ್ತೊಂದು ಭಯೋತ್ಪಾದಕ ದಾಳಿಯ ನಡೆಯುವ ಕುರಿತು ಅಮೆರಿಕ ಎಚ್ಚರಿಕೆಯನ್ನು ನೀಡಿತ್ತು. ಅಮೆರಿಕದ ನಾಗರಿಕರು ಈ ಸಮಯದಲ್ಲಿ ವಿಮಾನ ನಿಲ್ದಾಣ ಮತ್ತು ಅದರ ಎಲ್ಲಾ ದ್ವಾರಗಳ ಕಡೆಗೆ ಹೋಗುವುದನ್ನು ತಪ್ಪಿಸಬೇಕು ಎಂದು ಯುಎಸ್ ರಾಜ್ಯ ಇಲಾಖೆ ಗುಪ್ತಚರ ವರದಿಯ ಆಧಾರದ ಮೇಲೆ ಎಚ್ಚರಿಕೆ ನೀಡಿತ್ತು. ಈ ಎಚ್ಚರಿಕೆ ವರದಿ ನಿರ್ದಿಷ್ಟವಾಗಿ ದಕ್ಷಿಣ (ಏರ್ಪೋರ್ಟ್ ಸರ್ಕಲ್) ಗೇಟ್ ಮತ್ತು ವಿಮಾನ ನಿಲ್ದಾಣದ ವಾಯುವ್ಯ ಭಾಗದಲ್ಲಿರುವ ಪಂಜಶೀರ್ ಪೆಟ್ರೋಲ್ ಸ್ಟೇಷನ್ ಬಳಿಯ ಗೇಟ್ ಅನ್ನು ಉಲ್ಲೇಖಿಸುತ್ತದೆ.

ಇದನ್ನೂ ಓದಿ-ISIS ನೆಲೆಗಳ ಮೇಲೆ ಅಮೇರಿಕಾ ಏರ್ ಸ್ಟ್ರೈಕ್, ಮಾಸ್ಟರ್ ಮೈಂಡ್ ಹತ್ಯೆ ಎಂದು ಹೇಳಿಕೊಂಡ ಅಮೇರಿಕಾ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News