Israel-Hamas War: ಶಸ್ತ್ರಾಸ್ತ್ರಗಳನ್ನು ಹೊತ್ತು ಇಸ್ರೇಲ್ ತಲುಪಿದ ಅಮೆರಿಕದ ವಿಮಾನ!

ಕಳೆದ 5 ದಿನಗಳಿಂದ ಹಮಾಸ್ ಮತ್ತು ಇಸ್ರೇಲ್ ನಡುವೆ ಯುದ್ಧ ನಡೆಯುತ್ತಿದ್ದು, ಇಲ್ಲಿಯವರೆಗೆ ಒಟ್ಟು 2,700 ಮಂದಿ ಸಾವನ್ನಪ್ಪಿದ್ದಾರೆ. ಹಮಾಸ್ ದಾಳಿಯಲ್ಲಿ 1,200 ಇಸ್ರೇಲಿ ಜನರು ಪ್ರಾಣ ಕಳೆದುಕೊಂಡಿದ್ದಾರೆ ಮತ್ತು 2,800ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಅದೇ ರೀತಿ ಹಮಾಸ್‌ನ 1,500 ಭಯೋತ್ಪಾದಕರನ್ನು ಕೊಂದಿರುವುದಾಗಿ ಇಸ್ರೇಲ್ ಹೇಳಿಕೊಂಡಿದೆ.

Written by - Puttaraj K Alur | Last Updated : Oct 11, 2023, 12:39 PM IST
  • ಇಸ್ರೇಲ್ ಮತ್ತು ಹಮಾಸ್ ನಡುವೆ ಭೀಕರ ಯುದ್ಧ ನಡೆಯುತ್ತಿದೆ
  • ಎರಡೂ ಕಡೆಯಿಂದ ನಿರಂತರ ರಾಕೆಟ್ ದಾಳಿಗಳು ನಡೆಯುತ್ತಿವೆ
  • ನಾವು ಇಸ್ರೇಲ್ ಜೊತೆಗಿದ್ದೇವೆಂದ ಅಮೆರಿಕ ಅಧ್ಯಕ್ಷ ಜೋ ಬಿಡನ್
Israel-Hamas War: ಶಸ್ತ್ರಾಸ್ತ್ರಗಳನ್ನು ಹೊತ್ತು ಇಸ್ರೇಲ್ ತಲುಪಿದ ಅಮೆರಿಕದ ವಿಮಾನ! title=
ಇಸ್ರೇಲ್ನ ವಿಶ್ವಾಸ ಹೆಚ್ಚಿಸಿದ ಬ್ಲಿಂಕನ್ ಭೇಟಿ!

ನವದೆಹಲಿ: ಇಸ್ರೇಲ್ ಮತ್ತು ಹಮಾಸ್ ನಡುವೆ ಭೀಕರ ಯುದ್ಧ ನಡೆಯುತ್ತಿದ್ದು, ಎರಡೂ ಕಡೆಯಿಂದ ನಿರಂತರ ರಾಕೆಟ್ ದಾಳಿಗಳು ನಡೆಯುತ್ತಿವೆ. ಇಸ್ರೇಲ್ ಮತ್ತು ಹಮಾಸ್ ನಡುವೆ ನಡೆಯುತ್ತಿರುವ ಯುದ್ಧದ ಬಗ್ಗೆ ಪ್ರತಿಕ್ರಿಯಿಸಿರುವ ಅಮೆರಿಕ ಅಧ್ಯಕ್ಷ ಜೋ ಬಿಡನ್ ಪ್ರತಿ ಹಂತದಲ್ಲಿಯೂ ನಾವು ಇಸ್ರೇಲ್ ಜೊತೆಗಿದ್ದೇವೆ ಎಂದು ಭರವಸೆ ನೀಡಿದ್ದಾರೆ. ಇದೀಗ ಅಮೆರಿಕ ತನ್ನ ಭರವಸೆಯನ್ನು ಈಡೇರಿಸಲಾರಂಭಿಸಿದ್ದು, ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳೊಂದಿಗೆ ಅಮೆರಿಕದ ವಿಮಾನವೊಂದು ಇಸ್ರೇಲ್ ನೆಲವನ್ನು ತಲುಪಿದೆ. ಇದರೊಂದಿಗೆ ಅಮೆರಿಕದ ವಿದೇಶಾಂಗ ಸಚಿವ ಆಂಟನಿ ಬ್ಲಿಂಕನ್ ಇಂದು ಇಸ್ರೇಲ್ ಗೆ ಭೇಟಿ ನೀಡಲಿದ್ದಾರೆ.

ಇಸ್ರೇಲ್‌ನ ವಿಶ್ವಾಸ ಹೆಚ್ಚಿಸಿದ ಬ್ಲಿಂಕನ್ ಭೇಟಿ!

ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕನ್ ಅವರ ಈ ಭೇಟಿ ಇಸ್ರೇಲ್ ನ ವಿಶ್ವಾಸವನ್ನು ಮತ್ತಷ್ಟು ಗಟ್ಟಿಗೊಳಿಸಲಿದೆ. ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಅವರು ಇಸ್ರೇಲ್ನೊಂದಿಗೆ ಪ್ರತಿ ಹಂತದಲ್ಲಿಯೂ ಇದ್ದಾರೆಂದು ಭರವಸೆ ನೀಡುವ ಹೇಳಿಕೆ ನೀಡಿದ್ದಾರೆ. ಯುಎಸ್ ಸ್ಟೇಟ್ ಡಿಪಾರ್ಟ್ಮೆಂಟ್ ವಕ್ತಾರ ಮ್ಯಾಥ್ಯೂ ಮಿಲ್ಲರ್ ಭೇಟಿಯ ವೇಳೆ, ಆಂಟೋನಿ ಬ್ಲಿಂಕೆನ್ ಇಸ್ರೇಲ್‍ಗೆ ನಾವು ಯಾವ ಹೆಚ್ಚುವರಿ ಸಂಪನ್ಮೂಲಗಳನ್ನು ಒದಗಿಸಬಹುದೆಂದು ಚರ್ಚಿಸಲಿದ್ದಾರೆ ಅಂತಾ ತಿಳಿಸಿದ್ದರು.

ಇದನ್ನೂ ಓದಿ: ಮೋಸ್ಟ್ ವಾಂಟೆಡ್ ಭಯೋತ್ಪಾದಕ ಶಾಹಿದ್ ಲತೀಫ್ ಪಾಕ್ ನಲ್ಲಿ ಹತ್ಯೆ

ಶಸ್ತ್ರಾಸ್ತ್ರಗಳೊಂದಿಗೆ ಇಸ್ರೇಲ್‍ ನೆಲಕ್ಕೆ ಬಂದಿಳಿದ ಅಮೆರಿಕದ ವಿಮಾನ!  

ಇದಕ್ಕೂ ಮುನ್ನವೇ ಅಮೆರಿಕ ಇಸ್ರೇಲ್‌ಗೆ ನೆರವು ನೀಡಲು ಆರಂಭಿಸಿದ್ದು, ಶಸ್ತ್ರಾಸ್ತ್ರಗಳೊಂದಿಗೆ ಅಮೆರಿಕದ ಮೊದಲ ವಿಮಾನ ಇಸ್ರೇಲ್ ನೆಲಕ್ಕೆ ಬಂದಿಳಿದಿದೆ. ಇಸ್ರೇಲ್ ರಕ್ಷಣಾ ಪಡೆಗಳು(IDF), ಅಮೆರಿಕದ ಶಸ್ತ್ರಾಸ್ತ್ರಗಳನ್ನು ಹೊತ್ತ ಮೊದಲ ವಿಮಾನವು ಮಂಗಳವಾರ ಸಂಜೆ ದಕ್ಷಿಣ ಇಸ್ರೇಲ್‌ನ ನೆವಾಟಿಮ್ ವಾಯುನೆಲೆಯಲ್ಲಿ ಇಳಿಯಿತು ಎಂದು ಹೇಳಿದೆ.

ಇಸ್ರೇಲ್ ಶಸ್ತ್ರಾಸ್ತ್ರಗಳ ಬಗ್ಗೆ ಮಾಹಿತಿ ನೀಡಿಲ್ಲ

ಆದರೆ IDF ಯಾವ ರೀತಿಯ ಶಸ್ತ್ರಾಸ್ತ್ರಗಳು ಅಥವಾ ಮಿಲಿಟರಿ ಉಪಕರಣಗಳನ್ನು ಅಮೆರಿಕದಿಂದ ಪಡೆದುಕೊಂಡಿದೆ ಎಂಬುದನ್ನು ಬಹಿರಂಗಪಡಿಸಲಿಲ್ಲ. ಇಸ್ರೇಲ್ ರಕ್ಷಣಾ ಪಡೆಗಳು ಪ್ರಾದೇಶಿಕ ಭದ್ರತೆ ಮತ್ತು ಯುದ್ಧದ ಸಮಯದಲ್ಲಿ ಸ್ಥಿರತೆ ನಮ್ಮ ಪಡೆಗಳ ನಡುವಿನ ಸಹಕಾರವನ್ನು ಖಾತ್ರಿಪಡಿಸುವ ಪ್ರಮುಖ ಭಾಗವಾಗಿದೆ ಎಂದು ಹೇಳಿದೆ. ಅಮೆರಿಕ ನಿರಂತರವಾಗಿ ಇಸ್ರೇಲ್ ಅನ್ನು ಬೆಂಬಲಿಸುತ್ತಿದೆ ಮತ್ತು ಈ ಮಧ್ಯೆ ಮಂಗಳವಾರ ಇಸ್ರೇಲಿ ಅಧ್ಯಕ್ಷ ಬೆಂಜಮಿನ್ ನೆತನ್ಯಾಹು ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಅವರೊಂದಿಗೆ 3ನೇ ಬಾರಿಗೆ ದೂರವಾಣಿ ಸಂಭಾಷಣೆ ನಡೆಸಿದರು.

ಇದನ್ನೂ ಓದಿ: ತಂತ್ರಜ್ಞಾನದಲ್ಲಿ ಈ ದೇಶ ಅಗ್ರಸ್ಥಾನದಲ್ಲಿದೆ...ಆದರೆ ಇಲ್ಲಿ ಎಸ್ಕಲೇಟರ್ ಬಳಕೆ ನಿಷಿದ್ಧ..! ಯಾಕೆ ಗೊತ್ತಾ?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News