ಸಾಮಾಜಿಕ ಮಾಧ್ಯಮ ಬಳಕೆದಾರರಿಗೊಂದು ಸಂತಸದ ಸುದ್ದಿ

ಸ್ಲೋ ಮೋಶನ್ ನಲ್ಲಿ ಬೂಮ್ರಾಂಗ್ ವಿಡಿಯೋಗಳು ತನ್ನ ವಾಸ್ತವಿಕ ಸ್ಪೀಡ್ ಗಿಂತ ಅರ್ಧದಷ್ಟು ಕಡಿಮೆ ಸ್ಪೀಡ್ ನಲ್ಲಿ ಪ್ಲೇ ಆಗುತ್ತವೆ. ಅಷ್ಟೇ ಅಲ್ಲ ಏಕೋ ಮೂಲಕ ಡಬಲ್ ವಿಜನ್ ಸೌಂಡ್ ಕೇಳಿಬರುತ್ತದೆ ಹಾಗೂ ಡ್ಯೂಓನಿಂದ ವಿಡಿಯೋ ಸ್ಪೀಡ್ ಕೂಡ ಹೆಚ್ಚಸಬಹುದಾಗಿದೆ.

Last Updated : Jan 12, 2020, 02:58 PM IST
ಸಾಮಾಜಿಕ ಮಾಧ್ಯಮ ಬಳಕೆದಾರರಿಗೊಂದು ಸಂತಸದ ಸುದ್ದಿ title=

ನವದೆಹಲಿ: ಫೇಸ್ಬುಕ್ ಮಾಲಿಕತ್ವದ ಇನ್ಸ್ಟಾಗ್ರಾಮ್ ಬೂಮ್ರಾಂಗ್ ಸ್ಟೋರೀಸ್ ಗಳನ್ನು ಹಂಚಿಕೊಳ್ಳಲು ಶನಿವಾರ ಮೂರು ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸಿದೆ. ಈ ಮೂರು ವೈಶಿಷ್ಟ್ಯಗಳನ್ನು ಕಂಪನಿ ಸ್ಲೋಮೋ, ಎಕೋ ಹಾಗು ಡುಓ ಎಂದು ಹೆಸರಿಸಿದೆ. ಜೊತೆಗೆ ಅವುಗಳನ್ನು ಟ್ರಿಮ್ ಮಾಡಲು ಫಿಲ್ಟರ್ ಗಳನ್ನು ಕೂಡ ಒದಗಿಸಿದೆ. IANS ನಲ್ಲಿ ಪ್ರಕಟಗೊಂಡ ವರದಿಯ ಪ್ರಕಾರ, ಈ ಕುರಿತು ಹೇಳಿಕೆ ನೀಡಿರುವ ಕಂಪನಿ, ನಿಮ್ಮ ಮೊಬೈಲ್ ಕ್ಯಾಮೆರಾ ನಿಮ್ಮನ್ನು ನೀವು ಪ್ರಸ್ತುತಪಡಿಸುವ ವಿಧಾನ ಹೇಳಿಕೊಡುತ್ತದೆ ಹಾಗೂ ನೀವು ಏನೇ ಮಾಡಿ, ಏನೇ ವಿಚಾರಿಸಿ, ಏನೇ ಅನುಭವಿಸಿ ಅದನ್ನು ಸುಲಭವಾಗಿ ನೀವು ಹಂಚಿಕೊಳ್ಳಬಹುದಾಗಿದೆ.

ಬೂಮ್ರಾಂಗ್ ಇದರ ವಿಶೇಷ ಭಾಗವಾಗಿದೆ ಹಾಗೂ ಕ್ಯಾಮರಾಗಳ ಜನಪ್ರೀಯ ಫಾರ್ಮ್ಯಾಟ್ ಗಳಲ್ಲಿ ಒಂದಾಗಿದೆ. ನಿಮ್ಮ ಬಳಿ ಇರುವ ಸೃಜನಾತ್ಮಕತೆಯನ್ನು ಹಂಚಿಕೊಳ್ಳಲು ಅವಕಾಶ ಕಲ್ಪಿಸಿದ್ದು, ತನ್ನ ಬೂಮ್ರಾಂಗ್  ಫಾರ್ಮ್ಯಾಟ್ ನ ಹೊಸ ಪದ್ಧತಿಗಳನ್ನು ಪ್ರಸ್ತುತಪಡಿಸಿದೆ. ಈ ವೈಶಿಷ್ಟ್ಯ ಬಳಸಿ ನೀವು ದಿನನಿತ್ಯದ ಮಹತ್ವದ ಸಂದರ್ಭಗಳನ್ನು ಹಾಸ್ಯಮಯವಾಗಿ ಹಾಗೂ ಅಪ್ರತ್ಯಕ್ಷರೂಪದಲ್ಲಿ ಬದಲಾವಣೆ ಮಾಡಬಹುದಾಗಿದೆ.

ಈ ಹೊಸ ವೈಶಿಷ್ಟ್ಯಗಳು ಇನ್ಸ್ಟಾಗ್ರಾಮ್ ಸ್ಟೋರೀಸ್ ಕ್ಯಾಮರಾನಲ್ಲಿರುವ ಬೂಮ್ರಾಂಗ್ ಕಂಪೋಸರ್ ನಲ್ಲಿ ಲಭ್ಯವಿರಲಿವೆ. ಹೆಸರೇ ಸೂಚಿಸುವಂತೆ 'ಸ್ಲೋಮೋ' ವೈಶಿಷ್ಟ್ಯ ಬಳಸಿ ನೀವು ನಿಮ್ಮ ಬೂಮ್ರಾಂಗ್ ವಿಡಿಯೋ ವೇಗವನ್ನು ಅರ್ಧದಷ್ಟು ಕಡಿಮೆ ಮಾಡಬಹುದು. 'ಎಕೋ' ವೈಶಿಷ್ಟ್ಯದಲ್ಲಿ ನಿಮ್ಮ ಧ್ವನಿ ಡಬಲ್ ವಿಜನ್ ನಲ್ಲಿ ಕೇಳಿಬರಲಿದೆ. 'ಡುಓ' ವೈಶಿಷ್ಟ್ಯದಲ್ಲಿ ನಿಮ್ಮ ವಿಡಿಯೋ ವೇಗ ಕೂಡ ಹೆಚ್ಚಾಗಲಿದೆ ಮತ್ತು ಕಡಿಮೆ ಕೂಡ ಮಾಡಬಹುದಾಗಿದೆ. ಈ ಅಪ್ಡೇಟ್ ಗಳ ಮೂಲಕ ರಿಕಾರ್ಡ್ ಮಾಡಲಾದ ಬೂಮ್ರಾಂಗ್ ವಿಡಿಯೋವನ್ನು ನೀವು ಟ್ರಿಮ್ ಕೂಡ ಮಾಡಬಹುದಾಗಿದ್ದು, ಅವುಗಳ ಅಳತೆಯನ್ನು ಕಡಿಮೆ ಅಥವಾ ಹೆಚ್ಚೂ ಕೂಡ ಮಾಡಬಹುದು.

'ಓವರ್ ದಿ ಏರ್' ಅಪ್ಡೇಟ್ ಅಡಿ ಬಂದಿರುವ ಈ ಫಿಲ್ಟರ್ ಗಳ ಎಫೆಕ್ಟ್ ಬಳಸಲು ಇನ್ಸ್ಟಾಗ್ರಾಮ್ ಸ್ಟೋರೀಸ್ ಕ್ಯಾಮರಾಗೆ ಭೇಟಿ ನೀಡಿ. ಬಳಿಕ ಬೂಮ್ರಾಂಗ್ ವೈಶಿಷ್ಟ್ಯದ ಮೇಲೆ ಸ್ವೈಪ್ ಮಾಡಿ, ಸ್ವಲ್ಪ ಸಮಯದವರೆಗೆ ಶಟರ್ ಗುಂಡಿಯನ್ನು ಒತ್ತಿ ಹಿಡಿಯಿರಿ. ಇದಾದ ಬಳಿಕ ನಿಮ್ಮ ಡಿಸ್ಪ್ಲೇ ಮೇಲಿರುವ ಇನ್ಫಿನಿಟಿ ಸಿಂಬಲ್ ಮೇಲೆ ಟೈಪ್ ಮಾಡಿ. ಇತ್ತೀಚೆಗಷ್ಟೇ ಇನ್ಸ್ಟಾಗ್ರಾಮ್ ತನ್ನ ಲೇಔಟ್ ವೈಶಿಷ್ಟ್ಯ ಬಿಡುಗಡೆಗೊಳಿಸಿತ್ತು. ಈ ವೈಶಿಷ್ಟ್ಯದಲ್ಲಿ ಸಂಸ್ಥೆ ತನ್ನ ಬಳಕೆದಾರರಿದೆ ಒಂದೇ ಸ್ಟೋರಿ ಅಡಿ ಹಲವಾರು ಫೋಟೋಗಳನ್ನು ಹಂಚಿಕೊಳ್ಳಲು ಅವಕಾಷ್ಟ ಕಲ್ಪಿಸಿತ್ತು. ಈ ವೈಶಿಷ್ಟ್ಯದ ಅಡಿ ಬಳಕೆದಾರರು ಒಂದೇ ಕಥೆಗೆ ಸಂಬಂಧಿಸಿದ ಒಟ್ಟು ಆರು ಫೋಟೋ ಗಳನ್ನು ಹಂಚಿಕೊಳ್ಳಬಹುದಾಗಿದ್ದು, ಅವುಗಳನ್ನು ಕಂಬೈನ್ ಮಾಡಿ ಲೇಔಟ್ ಮಾಡಬಹುದಾಗಿದೆ.

Trending News