ಹಲವು ಪ್ರಥಮಗಳಿಗೆ ಕಾರಣರಾದ ಅಮೆರಿಕಾದ ನೂತನ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್

ಕ್ಯಾಲಿಫೋರ್ನಿಯಾದ ಮಾಜಿ ಸೆನೆಟರ್ ಕಮಲಾ ದೇವಿ ಹ್ಯಾರಿಸ್ ಅಮೆರಿಕಾದ ಮೊದಲ ಮಹಿಳಾ ಉಪಾಧ್ಯಕ್ಷರಾಗಿ ಯುಎಸ್ ಕ್ಯಾಪಿಟಲ್ ಹೊರಗೆ ಜೋ ಬಿಡೆನ್ ಅವರ ಅಧ್ಯಕ್ಷೀಯ ಉದ್ಘಾಟನೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

Last Updated : Jan 20, 2021, 11:53 PM IST
  • ಭಾರತೀಯ ಮತ್ತು ಜಮೈಕಾದ ಮೂಲದ ಕಮಲಾ ಹ್ಯಾರಿಸ್ ಅವರಿಗೆ ಯುಎಸ್ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಸೋನಿಯಾ ಸೋಟೊಮೇಯರ್ ಪ್ರಮಾಣವಚನ ಬೋಧಿಸಿದರು.
  • ಈಗ ಅವರು ಯುಎಸ್ ಉಪಾಧ್ಯಕ್ಷರಾದ ಮೊದಲ ಕಪ್ಪು ಮಹಿಳೆ ಮತ್ತು ದಕ್ಷಿಣ ಏಷ್ಯಾ ಮೂಲದ ಮೊದಲ ಮಹಿಳೆ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಹಲವು ಪ್ರಥಮಗಳಿಗೆ ಕಾರಣರಾದ ಅಮೆರಿಕಾದ ನೂತನ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್  title=
Photo Courtesy: Twitter

ನವದೆಹಲಿ: ಕ್ಯಾಲಿಫೋರ್ನಿಯಾದ ಮಾಜಿ ಸೆನೆಟರ್ ಕಮಲಾ ದೇವಿ ಹ್ಯಾರಿಸ್ ಅಮೆರಿಕಾದ ಮೊದಲ ಮಹಿಳಾ ಉಪಾಧ್ಯಕ್ಷರಾಗಿ ಯುಎಸ್ ಕ್ಯಾಪಿಟಲ್ ಹೊರಗೆ ಜೋ ಬಿಡೆನ್ ಅವರ ಅಧ್ಯಕ್ಷೀಯ ಉದ್ಘಾಟನೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

ಭಾರತೀಯ ಮತ್ತು ಜಮೈಕಾದ ಮೂಲದ ಕಮಲಾ ಹ್ಯಾರಿಸ್ ಅವರಿಗೆ ಯುಎಸ್ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಸೋನಿಯಾ ಸೋಟೊಮೇಯರ್ ಪ್ರಮಾಣವಚನ ಬೋಧಿಸಿದರು.ಈಗ ಅವರು ಯುಎಸ್ ಉಪಾಧ್ಯಕ್ಷರಾದ ಮೊದಲ ಕಪ್ಪು ಮಹಿಳೆ ಮತ್ತು ದಕ್ಷಿಣ ಏಷ್ಯಾ ಮೂಲದ ಮೊದಲ ಮಹಿಳೆ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಇದನ್ನೂ ಓದಿ: ಅಮೆರಿಕಾದ ನೂತನ ಅಧ್ಯಕ್ಷರಾಗಿ ಜೋ ಬಿಡೆನ್, ಉಪಾಧ್ಯಕ್ಷರಾಗಿ ಕಮಲಾ ಹ್ಯಾರಿಸ್ ಪ್ರಮಾಣ ವಚನ ಸ್ವೀಕಾರ

ಆ ಮೂಲಕ ಈಗ ಯುಎಸ್ ಆಡಳಿತದಲ್ಲಿ ಕಮಲಾ ಹ್ಯಾರಿಸ್ ಅವರ ಎರಡನೇ ಪ್ರಮುಖ ಹುದ್ದೆಯೂ ಲಿಂಗ ಮತ್ತು ಜನಾಂಗೀಯ ಸಮಾನತೆಗೆ ಸಂಬಂಧಿಸಿದಂತೆ ಒಂದು ಪ್ರಮುಖ ಮೈಲಿಗಲ್ಲಾಗಿದೆ.ಕಳೆದ ವರ್ಷ ಉಪಾಧ್ಯಕ್ಷರಾಗಿ ಚುನಾಯಿತರಾದ ಮೊದಲ ಭಾಷಣದಲ್ಲಿ ಕಮಲಾ ಹ್ಯಾರಿಸ್ (Kamala Harris) ತನ್ನ ತಾಯಿಯನ್ನು ನೆನಪಿಸಿಕೊಂಡರು, ಮತ್ತು ಅವರು ಈ ಹುದ್ದೆಯನ್ನು ಅಲಂಕರಿಸಿದ ಮೊದಲ ಮಹಿಳೆ,ಆದರೆ ಕೊನೆಯವರಲ್ಲ ಎಂದು ಹೇಳಿದ್ದರು.

ಯುಎಸ್ ಉಪಾಧ್ಯಕ್ಷರಾಗಿ ಐತಿಹಾಸಿಕ ಪ್ರಮಾಣವಚನ ಸ್ವೀಕರಿಸುವ ಸ್ವಲ್ಪ ಸಮಯದ ಮೊದಲು, ಕಮಲಾ ಹ್ಯಾರಿಸ್ (Kamala Harris) ತನ್ನ ಭಾರತೀಯ ತಾಯಿ ಮತ್ತು ತಮ್ಮ ಜೀವನದಲ್ಲಿ ಬಂದ ಎಲ್ಲ ಮಹಿಳೆಯರಿಗೆ ಗೌರವ ಸಲ್ಲಿಸುವ ವೀಡಿಯೊವೊಂದನ್ನು ಪೋಸ್ಟ್ ಮಾಡಿದರು.ಕಮಲಾ ಹ್ಯಾರಿಸ್ ಮೇಲೆ ಪ್ರಭಾವ ಬೀರಿದ ಎಲ್ಲ ಮಹಿಳೆಯರ ಸಂಗ್ರಹವಾಗಿರುವ ಈ ವಿಡಿಯೋ, ನವೆಂಬರ್‌ನಲ್ಲಿ ನಡೆದ ಚುನಾವಣೆಯಲ್ಲಿ ಜಯಗಳಿಸಿದ ನಂತರ ಮಾಡಿದ ಅವರ ಭಾಷಣದೊಂದಿಗೆ ಆರಂಭವಾಗುತ್ತದೆ.

'ನನಗೆ ಮಹಿಳೆಯರು ನನ್ನ ಜೀವನದಲ್ಲಿ ವಹಿಸಿದ ಪಾತ್ರದಿಂದಾಗಿ ಇಂದು ನಾನು ಈ ಸ್ಥಾನದಲ್ಲಿದ್ದೇನೆ. ಇಂದು ನನ್ನ ಉಪಸ್ಥಿತಿಗೆ ಕಾರಣವಾಗಿರುವಂತರು ನನ್ನ ತಾಯಿ ಶ್ಯಾಮಲಾ ಗೋಪಾಲನ್ ಹ್ಯಾರಿಸ್, ಅವರು ಯಾವಾಗಲೂ ನಮ್ಮ ಹೃದಯದಲ್ಲಿರುತ್ತಾನೆ" ಎಂದು ಕಮಲಾ ಹ್ಯಾರಿಸ್ ಹೇಳುತ್ತಾರೆ.

ಇದನ್ನೂ ಓದಿ: US Election Result 2020: ಜೋ ಬೈಡನ್ ಹಾಗೂ ಕಮಲಾ ಹ್ಯಾರಿಸ್ ಗೆ ಅಭಿನಂದನೆ ಸಲ್ಲಿಸಿದ PM Modi ಹೇಳಿದ್ದೇನು?

ತೊಂಬತ್ತರ ದಶಕದಲ್ಲಿ ವಕೀಲರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಕಮಲಾ ಹ್ಯಾರಿಸ್ ಹಲವಾರು ಕಟ್ಟುಪಾಡುಗಳನ್ನು ಮೀರಿ ಸಾರ್ವಜನಿಕ ವಲಯದಲ್ಲಿ ತಮ್ಮದೇ ಸ್ಥಾನವನ್ನು ರೂಪಿಸಿಕೊಂಡರು.ಯುಎಸ್ ಸೆನೆಟರ್ ಆಗಿ ಸೇವೆ ಸಲ್ಲಿಸಿದ ಮೊದಲ ಭಾರತೀಯ-ಅಮೇರಿಕನ್ ಮತ್ತು ಸ್ಯಾನ್ ಫ್ರಾನ್ಸಿಸ್ಕೋದ ಜಿಲ್ಲಾ ವಕೀಲರಾಗಿ ಆಯ್ಕೆಯಾದ ಮೊದಲ ಕಪ್ಪು-ಕಂದು ವರ್ಣದ ಮಹಿಳೆ.ಅವರು 2010 ರಲ್ಲಿ ಕ್ಯಾಲಿಫೋರ್ನಿಯಾದ ಅಟಾರ್ನಿ ಜನರಲ್ ಆಗಿ ಆಯ್ಕೆಯಾದಾಗಲೂ ಕೂಡ ಈ ಸ್ಥಾನಕ್ಕೇರಿದ ಮೊದಲ ಮಹಿಳೆ ಮತ್ತು ಮೊದಲ ಆಫ್ರಿಕನ್-ಅಮೇರಿಕನ್ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ
Android Link - https://bit.ly/3hDyh4G
iOS Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
 

Trending News